![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/58/Spinal_cord_direv.svg/langkn-640px-Spinal_cord_direv.svg.png&w=640&q=50)
ಬೆನ್ನು ಹುರಿ
From Wikipedia, the free encyclopedia
ಬೆನ್ನು ಹುರಿ ಇದು ತೆಳುವಾದ ನರತಂತುಗಳ ರಾಶಿ ಮತ್ತು ಜೀವಕೋಶಗಳ ಜೊತೆಗಿನ ಉದ್ದನೆಯ ಕೊಳವೆಯಾಕಾರದ ಒಂದು ರಚನೆಯಾಗಿದೆ. ಇದು ಮೆದುಳಿಗೆ ನೇರವಾಗಿ ಜೋಡಣೆಯಾಗಿರುತ್ತದೆ.(ನಿರ್ಧಿಷ್ಟವಾಗಿ ಹಿಮ್ಮೆದುಳಿಗೆ ಸೇರಿಕೊಂಡಿರುತ್ತದೆ)ಮೆದುಳು ಮತ್ತು ಬೆನ್ನುಹುರಿ ಸೇರಿಕೊಂಡು ಕೇಂದ್ರೀಯ ನರವ್ಯವಸ್ಥೆಯನ್ನು ನಿರ್ಮಾಣ ಮಾಡಿರುತ್ತವೆ. ಬೆನ್ನುಹುರಿಯು ಸೊಂಟದ ಮೂಳೆಯ ಮೊದಲ ಮತ್ತು ಎರಡನೆಯ ಮೂಳೆಯ ಸಂದಿಭಾಗದವರೆಗೆ ಇರುತ್ತದೆ. ಇದು ಬೆನ್ನಿನ ಕೆಳಭಾಗ ಸೊಂಟದವರೆಗೆ ಹರಡಿಕೊಂಡಿರುವುದಿಲ್ಲ.
![Thumb image](http://upload.wikimedia.org/wikipedia/commons/thumb/5/58/Spinal_cord_direv.svg/640px-Spinal_cord_direv.svg.png)
![Thumb image](http://upload.wikimedia.org/wikipedia/commons/thumb/9/99/Spinalcord_trirev.svg/640px-Spinalcord_trirev.svg.png)
![Thumb image](http://upload.wikimedia.org/wikipedia/commons/thumb/d/dc/Medulla_spinalis_-_Section_-_English.svg/640px-Medulla_spinalis_-_Section_-_English.svg.png)
![Thumb image](http://upload.wikimedia.org/wikipedia/commons/thumb/e/ed/Spinalcord_trirev_rexedlamina.svg/640px-Spinalcord_trirev_rexedlamina.svg.png)
![Thumb image](http://upload.wikimedia.org/wikipedia/commons/thumb/8/86/Alarplate.svg/320px-Alarplate.svg.png)
![Thumb image](http://upload.wikimedia.org/wikipedia/commons/thumb/f/fe/Medulla_spinalis_-_tracts_-_English.svg/320px-Medulla_spinalis_-_tracts_-_English.svg.png)
ಇದು ಗಂಡಸರಲ್ಲಿ 45 cm (18 in) ಉದ್ದವಿದ್ದು ಹೆಂಗಸರಿಗೆ 43 cm (17 in)ರಷ್ಟು ಉದ್ದವಿರುತ್ತದೆ. ಸೊಂಟದ ಮೂಳೆಯಲ್ಲಿಯ ಪೋಳ್ಳು ಭಾಗದಲ್ಲಿ ಇದು ಅಂಟಿಕೊಂಡಿರುವುದರಿಂದ ಹೋಲಿಕೆಯಲ್ಲಿ ಸಣ್ಣದಿರುವ ಬೆನ್ನು ಮೂಳೆಯನ್ನು ಇದು ಕಾಪಾಡುತ್ತದೆ. ಬೆನ್ನು ಹುರಿಯು ಸಾಮಾನ್ಯವಾಗಿ ಮೆದುಳು ಮತ್ತು ದೇಹದ ಇತರ ಭಾಗಗಳಿಗೆ ನರ ಸಂಜ್ಞೆಗಳನ್ನು ಸಾಗಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ ಆದರೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಕಷ್ಟು ಪ್ರತಿಫಲಿತಗಳನ್ನೂ ಮತ್ತು ಕೇಂದ್ರ ವ್ಯವಸ್ಥೆಯನ್ನು ನಿಭಾಯಿಸುವ ವ್ಯವಸ್ಥೆಯನ್ನು ಹೊಂದಿರುತ್ತದೆ. ಬೆನ್ನು ಹುರಿ ಮೂರು ಮುಖ್ಯ ಕಾರ್ಯವನ್ನು ನಿರ್ವಹಿಸುತ್ತದೆ:
- ಇದು ಬೆನ್ನುಹುರಿಯಲ್ಲಿ ಚಲಿಸುವ ಮಾಹಿತಿಯನ್ನು ಸಾಗಿಸುವ ಕೊಳವೆಯಂತೆ ಕಾರ್ಯ ನಿರ್ವಹಿಸುತ್ತದೆ.
- ಬೆನ್ನುಹುರಿಯಲ್ಲಿ ಮೇಲೇರುವ ಸಂವೇದನಾತ್ಮಕ ಮಾಹಿತಿಯನ್ನು ಸಾಗಿಸುವ ಕೊಳವೆಯಂತೆ ಇದು ಕಾರ್ಯ ನಿರ್ವಹಿಸುತ್ತದೆ.
- ಕೆಲವು ಪ್ರತಿಪಲಿತಗಳನ್ನು ಆಯೋಜಿಸುವ ಮುಖ್ಯ ಕೇಂದ್ರದಂತೆ ಕಾರ್ಯ ನಿರ್ವಹಿಸುತ್ತದೆ.