ಬೆಂಗಳೂರಿನ ಇತಿಹಾಸ
ಕರ್ನಾಟಕದ ರಾಜಧಾನಿ / From Wikipedia, the free encyclopedia
ಬೆಂಗಳೂರಿನ ಇತಿಹಾಸ :ಬೆಂಗಳೂರು ಕರ್ನಾಟಕ ರಾಜ್ಯದ ರಾಜಧಾನಿ.[1] [2]ಅವರು ೧೫೩೭ ರಲ್ಲಿ ಈ ಸ್ಥಳದಲ್ಲಿ ಮಣ್ಣಿನ ಕೋಟೆಯೊಂದನ್ನು ನಿರ್ಮಿಸಿದರು . ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ. ಬೆಂಗಳೂರು (ಹಿಂದೆ ಬೆಂದಕಾಳೂರು)[3] ನಗರವು ಕ್ರಿ.ಶ. ೧೫೩೭ ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ. ಭಾರತದ ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನೇ ಸ್ಥಾನದಲ್ಲಿದೆ.[4]