ಬಿ. ಜಿ. ಖೇರ್
ಸಾರ್ವಜನಿಕ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು / From Wikipedia, the free encyclopedia
ಬಿ. ಜಿ. ಖೇರ್[1] ಎಂದು ಪ್ರಸಿದ್ಧರಾದ ಬಾಲಾಸಾಹೇಬ್ ಗಂಗಾಧರ್ ಖೇರ್, ಅಗಿನ ಬ್ರಿಟಿಷ್ ಬಾಂಬೆ ಸರಕಾರದ ಪ್ರಧಾನ ಮಂತ್ರಿಯಾಗಿದ್ದರು. (Marathi: बाळासाहेब गंगाधर खेर) (ಆಗಸ್ಟ್ ೨೪, ೧೮೮೮-ಮಾರ್ಚ್, ೮, ೧೯೫೭) ಬಾಂಬೆ ರಾಜ್ಯಕ್ಕೆ ಈಗಿನ ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿತ್ತು. ಲಾಯರ್, ಸಾಲಿಸಿಟರ್, ರಾಜಕೀಯ ಪಟು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಸರಳ ಸ್ವಭಾವದ ನಿರಾಡಂಬರ ವ್ಯಕ್ತಿಯಾಗಿದ್ದ ಖೇರ್ ರವರು, ಒಳ್ಳೆಯ ವಾಗ್ಮಿ ಮತ್ತು ಮೇಧಾವಿ ಹಾಗೂ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅವರನ್ನು ಜನರೆಲ್ಲ ಸಜ್ಜನ್ ಎಂದು ಹೊಗಳುತ್ತಿದ್ದರು.