![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/1/12/Bidriware_Hookah.jpg/640px-Bidriware_Hookah.jpg&w=640&q=50)
ಬಿದ್ರಿ ಕಲೆ
From Wikipedia, the free encyclopedia
ಬಿದ್ರಿ ಕಲೆ (English: Bidriware ) Bidar ನ ಲೋಹದ ಕರಕುಶಲ ಕಲೆಯಾಗಿದೆ. ಕ್ರಿ.ಶ ೧೪ನೇ ಶತಮಾನದಲ್ಲಿ ಬಹಮನಿ ಸುಲ್ತಾನರು ಆಳುತ್ತಿದ್ದ ಕಾಲದಲ್ಲಿ ಇದನ್ನು ಅಭಿವೃಧ್ಧಿ ಪಡಿಸಲಾಯಿತು.[1]</nowiki> 'ಬಿದ್ರಿ ಕಲೆ' ಎಂಬ ಹೆಸರು ಬೀದರ್ ನಗರದಿಂದ ಬಂದಿದ್ದು, ಇದು ಈ ವಿಶಿಷ್ಟ ಲೋಹದ ಕಲಾಕೃತಿಯ ಉತ್ಪನ್ನದ ಮುಖ್ಯ ಕೇಂದ್ರವಾಗಿದೆ.[2] ಕಣ್ಮನ ಸೆಳೆಯುವ ಇದರ ಇನ್ಲೇ(ಒಳಕೊರೆತ)ದ ಕಲಾತ್ಮಕತೆಯಿಂದ, ಬಿದ್ರಿ ಕಲೆ ಭಾರತದಿಂದ ರಫ್ತಾಗುವ ಅತಿಮುಖ್ಯ ಕರಕುಶಲ ಕಲೆಯಾಗಿದೆ ಮತ್ತು ಸಂಪತ್ತಿನ ಪ್ರತೀಕವಾಗಿಯೂ ಪ್ರಶಂಸಿಸಲ್ಪಡುತ್ತದೆ. ಸತು/ತವರ ಮತ್ತು ತಾಮ್ರದ ಮಿಶ್ರಲೋಹವನ್ನು silver ತೆಳು ಹಾಳೆಗಳ ಒಳಹಾಸನ್ನು ಇದಕ್ಕೆ ಬಳಸುತ್ತಾರೆ.[2] ಈ ದೇಶೀಯ ಕಲೆಯ ಶೈಲಿ Geographical Indications (GI) ರೆಜಿಸ್ಟ್ರಿಯಲ್ಲಿ ಸ್ಥಾನ ಪಡೆದುಕೊಂಡಿದೆ.[3]
![Thumb image](http://upload.wikimedia.org/wikipedia/commons/thumb/1/12/Bidriware_Hookah.jpg/640px-Bidriware_Hookah.jpg)