ಬಾಚಣಿಗೆ
ಕೂದಲನ್ನು ಬಾಚಿ ಕೊಳ್ಳವ ಉಪಕರಣ / From Wikipedia, the free encyclopedia
ಬಾಚಣಿಗೆಯು (ಹಣಿಗೆ, ಸಿಕ್ಕಟಿಗೆ) ಹಲ್ಲುಗಳ ಸಾಲನ್ನು ಹಿಡಿದಿಡುವ ಕಾಂಡವನ್ನು ಹೊಂದಿರುವ ಒಂದು ಉಪಕರಣ. ಕೂದಲನ್ನು ಸ್ವಚ್ಛಗೊಳಿಸಲು, ಸುಕ್ಕು ಬಿಡಿಸಲು, ಅಥವಾ ವಿನ್ಯಾಸ ಮಾಡಲು ಕೂದಲಿನ ಮೂಲಕ ಇದನ್ನು ಎಳೆಯುವುದು ಇದರ ಉದ್ದೇಶವಾಗಿದೆ. ಬಾಚಣಿಗೆಗಳನ್ನು ಪ್ರಾಗೈತಿಹಾಸಿಕ ಕಾಲದಿಂದ ಬಳಸಲಾಗಿದೆ, ಮತ್ತು ಪರ್ಷಿಯಾದಲ್ಲಿನ ೫,೦೦೦ ವರ್ಷದಷ್ಟು ಹಳೆಯದೆಂದು ಕಾಲ ನಿರ್ಧಾರ ಮಾಡಲಾದ ವಸಾಹತುಗಳಿಂದ ಬಹಳ ಸಂಸ್ಕರಿತ ರೂಪಗಳಲ್ಲಿ ಪತ್ತೆಹಚ್ಚಲಾಗಿದೆ.[1]