![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/57/India-locator-map-blank.svg/langkn-640px-India-locator-map-blank.svg.png&w=640&q=50)
ಬಾಗಲಕೋಟೆ
ಕರ್ನಾಟಕದ ಒಂದು ಜಿಲ್ಲೆ / From Wikipedia, the free encyclopedia
ಬಾಗಲಕೋಟೆ ಕರ್ನಾಟಕದ ಒಂದು ಜಿಲ್ಲಾ ಕೇಂದ್ರ. ಈ ಜಿಲ್ಲೆ ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾಗಿದೆ. ಮತ್ತು ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು ಹಾಗೂ ಬಿಜಾಪುರಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ. ೧೯೯೭ರಲ್ಲಿ ಭಾರತದ ೫೦ನೆಯ ಸ್ವಾತಂತ್ರ್ಯೋತ್ಸವದ ಸ್ಮರಣೀಯ ಘಟ್ಟದಲ್ಲಿ ಕರ್ನಾಟಕ ಸರ್ಕಾರದ ಪ್ರಕಟಣೆ ಆರ್ಡಿ ೪೨ ಎಲ್ಆರ್ಡಿ ೮೭ ಭಾಗ ೩ ನಿರ್ದೇಶದ ದ್ವಾರಾ ಹೊಸ ಜಿಲ್ಲೆಯಾಗಿ ಅಂದಿನ ಮುಖ್ಯಮಂತ್ರಿ ಜೆ. ಎಚ್. ಪಟೇಲರಿಂದ ಉದ್ಘಾಟಿಸಲ್ಪಟ್ಟಿತು. ಐತಿಹಾಸಿಕವಾಗಿ ಬಾಗಲಕೋಟೆ ಜಿಲ್ಲೆಯು ಚಾಲುಕ್ಯರಾಳಿದ ನಾಡು. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಮತ್ತು ಮಹಾಕೂಟ ಇಲ್ಲಿಯ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
Quick Facts
ಬಾಗಲಕೋಟ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಬಾಗಲಕೋಟ ಜಿಲ್ಲೆ |
ನಿರ್ದೇಶಾಂಕಗಳು | 16.1833° N 75.7000° E |
ವಿಸ್ತಾರ - ಎತ್ತರ |
6593 km² - 747 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2011) - ಸಾಂದ್ರತೆ |
18,90,826 - 288/ಚದರ ಕಿ.ಮಿ. |
kgf 3 villain | manikant meti |
Close