ಬಳ್ಳಾಪುರ ಶಿಲಾಶಾಸನ
From Wikipedia, the free encyclopedia
Remove ads
ಈ ಶಾಸನ ಬೆಂಗಳೂರಿನ ಬಳೆಪೇಟೆ ರಂಗನಾಥಸ್ವಾಮಿ ದೇವಾಲಯದಲ್ಲಿದೆ. ಇದು ಸುಮಾರು ೪.೧೦f ಉದ್ದ ಮತ್ತು ೧.೪f ಅಗಲ ಇದೆ. ಇದು ಸ್ಥಾಪನೆಯಾದ ವರ್ಷ ಸುಮಾರು ಕ್ರಿ.ಶ ೧೬೨೮.
Remove ads
ಇತಿಹಾಸ
ಈ ಶಾಸನ ವಿಜಯನಗರ ಸಾಮ್ರಾಜ್ಯದ ರಾಮದೇವರಾಯ ಆಳ್ವಿಕೆಯ ಕಾಲದ್ದಾಗಿದೆ, ಇದರ ರಾಜಧಾನಿ ಇಂದಿನ ವೆಲ್ಲೂರಿನಲ್ಲಿತ್ತು. ಇದು ಬೆಂಗಳೂರಿನ ಕೆಲವೇ ತೆಲುಗು ಶಾಸನಗಳಲ್ಲಿ ಒಂದಾಗಿದೆ. ಇದರಲ್ಲಿ ಬಳೆಪೇಟೆಯ ಸ್ಥಾಪಕರಾದ ಒಂದನೇ ಕೆಂಪೇಗೌಡರ ಬಗ್ಗೆ ಉಲ್ಲೇಖ ಇದೆ. ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಬಂದ ವ್ಯಾಪಾರಸ್ಥರು ಮತ್ತು ಇತರ ಮಂದಿ ಮುತ್ಯಾಳಪೇಟೆ ರಂಗನಾಥಸ್ವಾಮಿ ದೇವರಿಗೆ ಸಲ್ಲಿಸಿದ ಅನುದಾನಗಳ ಬಗ್ಗೆ ತಿಳಿಸಲಾಗಿದೆ. ಇದು ಆ ಕಾಲದಲ್ಲಿ ಸುತ್ತಮುತ್ತಲಿದ್ದ ಪ್ರದೇಶಗಳ ಬಗ್ಗೆ ಮತ್ತು ಪ್ರದೇಶದ ಸಂಬಂಧಗಳ ಬಗ್ಗೆ ತಿಳಿಸಿದೆ. ಶಾಸನದಲ್ಲಿ ಉಲ್ಲೇಖಿಸಲಾದ ಕೆಲವು ಸ್ಥಳಗಳು ಪೆನುಗಂಡಾ, ಬೆಂಗಳೂರು, ಗುಲೂರು, ಚಿಕ್ಕನಾಯಕನಹಳ್ಳಿ, ಬಲ್ಲಪುರಂ, ಬೇಲೂರು, ಹೆಬ್ಬೂರು, ತದಾಪತ್ರಿ, ಅವನಿ, ಕಾವೇರಿಪಟ್ನಮ್, ರಾಯಕೋಟಾಯ್, ಶ್ರೀರಂಗಪಟ್ಟಣ, ನರಸಪುರ, ಬೆಲ್ಲುರು, ಹೆಬ್ಬೂರು, ನಾಗಮಂಡಲ ಮತ್ತು ಹಿಕೆರಿ. ಈ ಶಾಸನದ ಬಗ್ಗೆ ಎಪಿಗ್ರಫಿಯ ಆಫ್ ಕರ್ನಾಟಿಕ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.[೧]
Remove ads
ಶಾಸನಗ ಬರಹ
1ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ
2ನಶಕ ವರ್ಷಂಬುಲು 1549 ಅಗುಲಿ
3ನಿಯಡಿಪ್ರಭವಸಂವತ್ಸರಮಗಸು 13 ಆಲು
4ಶ್ರೀ ಮದ್ರಚಾಧಿರಾಜ ರಾಜಪರಮೇ
5ಶ್ಯರಶ್ರೀವೀರಪ್ರತಾಪಶ್ರೀವೀರ
6ರಾಮದೇವಮಹಾರಾಯಲಯ್ಯ
7ವಾರುರತ್ನ ಸಿಂಹಾಸನಾರೂಢು
8ಲೈಪೃಥ್ವಿಸಾಂಮ್ರಜ್ಯಂಚೇಯಚುಂ
9ನುಂಡಗಾನುಆಸಂವಕುಲೈನ
10ಯಲಹಂಕನಾಡಪ್ರಭುಲೈನ
11ಕೆಂಪ್ಪನಾಚಯಗೌನಿವಾರಿವಾತ್ರುಲೈನ
12ಕೆಂಪ್ಪೇಗೌನಿವಾರುಪುತ್ರುಲೈನಯಿಂದು
13ಡಿಕೆಂಪೇಗೌನಯ್ಯವಾರುಸದ್ಧರ್ಮಪ್ರ
14ತಿಪಾಲಕುಲೈಸುಖರಾಜ್ಯಂಚೇಯ
15ಚುಂನಗಾನುಬೆಂಗಳೂರಿಪೇಟೆಯಂ
16ದುಸಮಸ್ತಲುಸಮಯಂತೀರ್ಚುಕೊನಿ
17ವಚ್ಚಿ ನಸ್ಯಸ್ತಿ ನಮಸ್ತ ನಿಜಮಹಾಂಕಾಳಿ
18ಕಾಪ್ರಶಸ್ತಿ ನಮಸ್ತು ಲೈನ ಶ್ರೀಮದ್ತಗಣೇ
19ಶ್ಯರಗೌರೀಶ್ಯರವೀರನಾರಾಯಣದಿವ್ಯಶ್ರೀ
20ಪಾದಪದ್ಮಾರಾಧಕುಲೈನಾಯ್ಯಾವಳಿ
21ಮುಖ್ಯಲೈನಸ್ಯದೇಶಸರದೇಶವುಭಯನಾ
22ನಾದೇರಂಸಾಲುಮೂಲಸಮಸ್ತಪೆಕ್ಕಂಡ್ರು
23ವೆನುಗೊಂಡಬೆಂಗುಳೂರುಗೂಳೂರು ಚಿಕ್ಕನಾಯನಿ
24ಪಲ್ಲೆ... ಬಳ್ಳಾಪುರಂತಾಟಪರಿ ಆವ ಚಂ
25ದ್ರಗಿರಿಕೋಳಾಲಕೊತ್ತಕೋಟಕಾವೇರಿಪಟ್ಟಂರಾಯ
26ಕೋಟ ಶ್ರೀರಂಗಪಟ್ಟನರಸೀಪುರ ಬೇಲೂರು
27ಹೆ_ರುನಾಗಮಂಗಲಂಯಿಕ್ಕೇರಿಬಸ್ತಿವಲ್ಲಿ
28ಮೊದುಲೈನಸ್ತಳಪರಸ್ತಳಉಭಯನಾನಾದೇಶಾಸಾಲು
29ಮೂಲಮಸ್ತಲುನ್ನು ಬೆಂಗುಳೂರಿಮುತ್ಯಾಲ
30ಪೇಟರಂಗನಾಥಸ್ವಾಮಿಪಡಿತರನೈವೇದ್ಯತಿ
Remove ads
ಅರ್ಥ ವಿವರಣೆ
(Telugu) —-Be it well. (On the date specified), when the. rajadhiraja raja-paramesavara virapratapa vira-Rama- Deya-maharaya, seated on the jewel throne, was ruling the empire of the world :—when, of the Asannava-kula, the Yalahanka-nad prabhu Kempanachaya-Gauni's grandson, Kempe-Gauni's son, Immadi-Kempe-Gaunayya was ruling a peaceful kingdom in righteousness ;—all the people of Bengalur pete entered into the following agreement ;— Be it well. Obtainers of all favours from their own Mahankalika, worshippers of the lotus feet of (the gods) Ganesvara Gaurisvara and Vira-Narayana, chief men in Ayyavale, a ll the Salumula of both Nana Desis of this country atid other countries, and all the Salumula of both (sects of) the Nana Desis of Pekkonda Penugonda Bengaluru Guluru Chikkanayinipalle... Ballapuram Katiparti Ava.. Chandragiri Kolala ottakota Kaveripatna Rayakota Narasipuram Beluru Hebburu Nagamangalam Ikkeri Bastipalli and other places,— for the offerings, festivals and other ceremonies of the god Ranganatha of Mutyalapete in Bengaluru,-—made application to Kempe-Gauni, and granted certain dues (specified) Usual imprecatory verses. Signatures.
ವಿಶೇಷತೆ
ಇದು ಒಂದನೇ ಕೆಂಪೇಗೌಡರ ಹೆಸರನ್ನು ಉಲ್ಲೇಖಿಸಿದ ಬೆಂಗಳೂರಿನ ಏಕೈಕ ಶಾಸನವಾಗಿದೆ. ಈ ಶಾಸನವು ಬೆಂಗಳೂರಿಲ್ಲಿರುವ ಎರಡು ಏಕೈಕ ತೆಲುಗು ಶಾಸನಗಳಲ್ಲಿ ಒಂದಾಗಿದೆ.
ಉಲ್ಲೇಖಗಳು
ಹೊರಕೊಂಡಿಗಳು
Wikiwand - on
Seamless Wikipedia browsing. On steroids.
Remove ads