ಬರ್ನ್ಸೈಡ್ ನಗರದ ಇತಿಹಾಸ
From Wikipedia, the free encyclopedia
ಬರ್ನ್ಸೈಡ್ ನಗರದ ಇತಿಹಾಸವು ಅಡಿಲೇಡ್ನ ಮೆಟ್ರೋಪಾಲಿಟನ್ ಪ್ರದೇಶದಲ್ಲಿನ ಸ್ಥಳೀಯ ಸರ್ಕಾರಿ ಪ್ರದೇಶದ ಬಗೆಗಿನದ್ದಾಗಿದೆ. ಇದು ಮೂರು ಶತಮಾನ ಕಾಲದ ಇತಿಹಾಸವನ್ನು ಹೊಂದಿದೆ. ಯುರೋಪಿಯನ್ ವಸಾಹತುವಿನ ಪ್ರಕಾರ ಮೊದಲು ಬರ್ನ್ಸೈಡ್ನಲ್ಲಿ ಕೌರ್ನಾ ಜನರು ವಾಸಿಸುತ್ತಿದ್ದರು. ಅವರು ಚಳಿಗಾಲದಲ್ಲಿ, ಟೊರೆನ್ಸ್ ನದಿಯ ತೊರೆಗಳ ಸುತ್ತಲೂ ಹಾಗೂ ಬೇಸಿಗೆಯಲ್ಲಿ, ಅಡಿಲೇಡ್ ಬೆಟ್ಟಗಳಲ್ಲಿ ವಾಸಿಸುತ್ತಿದ್ದರು.
೧೮೩೬ ರಲ್ಲಿ ದಕ್ಷಿಣ ಆಸ್ಟ್ರೇಲಿಯಾದ ಬ್ರಿಟಿಷ್ ವಸಾಹತುವಿನಲ್ಲಿ, ವಸಾಹತುಗಾರರು ಅಡಿಲೇಡ್ ನಗರದ ಪೂರ್ವಕ್ಕೆ ಇರುವ ತಪ್ಪಲಿನಲ್ಲಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾರಂಭಿಸಿದರು. ಮ್ಯಾಗಿಲ್ ಗ್ರಾಮವನ್ನು ೧೮೩೮ ರಲ್ಲಿ ಉಪವಿಭಾಗ ಮಾಡಲಾಯಿತು. ಪೀಟರ್ ಆಂಡರ್ಸನ್ ಎಂಬ ಸ್ಕಾಟ್ಲ್ಯಾಂಡ್ನ ವ್ಯಕ್ತಿಯು, ಅವರ ಕುಟುಂಬದೊಂದಿಗೆ ಈ ಗ್ರಾಮಕ್ಕೆ ಬಂದು ವಾಸವಿದ್ದರು ಮತ್ತು ಈ ಪ್ರದೇಶದ ಮೊದಲ ಅಧಿಕೃತ ವಸಾಹತುಗಾರರಾಗಿದ್ದರು. ೧೮೩೯ ರಲ್ಲಿ, ಬರ್ನ್ಸೈಡ್ ಪ್ರದೇಶವನ್ನು ಪೀಟರ್ ನ ಆಸ್ತಿಯ ಪಕ್ಕದ ಸ್ಥಳವಾದ ಸೆಕೆಂಡ್ ಕ್ರೀಕ್ (ಸ್ಕಾಟ್ ಭಾಷೆಯಲ್ಲಿ ಬರ್ನ್ ಎಂದರೆ ಕ್ರೀಕ್ ಅಥವಾ ಸ್ಟ್ರೀಮ್) ಎಂದು ಹೆಸರಿಟ್ಟರು . ಬರ್ನ್ಸೈಡ್ ಗ್ರಾಮವನ್ನು ಸ್ವಲ್ಪ ಸಮಯದ ನಂತರ ಸ್ಥಾಪಿಸಲಾಯಿತು. ಜಿಲ್ಲಾ ಕೌನ್ಸಿಲ್ ಆಫ್ ಬರ್ನ್ಸೈಡ್ ಅನ್ನು ೧೮೫೬ ರಲ್ಲಿ ಸ್ಥಾಪಿಸಲಾಯಿತು. ಬರ್ನ್ಸೈಡ್ ನಗರದ ಆರ್ಥಿಕತೆಯ ಮುಖ್ಯ ಆಧಾರಗಳು ದ್ರಾಕ್ಷಿ ಕೃಷಿ, ಗಣಿಗಾರಿಕೆ ಮತ್ತು ಒಲಿವ್. ಅಲ್ಲದೇ ಗಣನೀಯ ಖನಿಜ ನಿಕ್ಷೇಪಗಳನ್ನು ಇಲ್ಲಿ ಕಾಣಬಹುದು.
ಈಗಿನ ಕೌನ್ಸಿಲ್ ಚೇಂಬರ್ಗಳನ್ನು ೧೯೨೬ ರಲ್ಲಿ ಟುಸ್ಮೋರ್ನಲ್ಲಿ ನಿರ್ಮಿಸಲಾಯಿತು. ಕೌನ್ಸಿಲ್ ೧೯೩೫ ರಲ್ಲಿ ಪುರಸಭೆಯಾಯಿತು. ಪ್ರದೇಶದಾದ್ಯಂತ ಬಲವಾದ ಬೆಳವಣಿಗೆ ಮತ್ತು ಅಭಿವೃದ್ಧಿಯೊಂದಿಗೆ, ಬರ್ನ್ಸೈಡ್ ಅನ್ನು ೧೯೪೩ರಲ್ಲಿ ನಗರವೆಂದು ಘೋಷಿಸಲಾಯಿತು. ೧೯೬೦ ರ ದಶಕದಲ್ಲಿ ಬರ್ನ್ಸೈಡ್ಗೆ ಸಮುದಾಯ ಗ್ರಂಥಾಲಯ ಮತ್ತು ಈಜು ಕೇಂದ್ರವನ್ನು ತರಲಾಯಿತು. ಇವೆರಡನ್ನೂ ೧೯೯೭ ಮತ್ತು ೨೦೦೧ ರ ನಡುವೆ ಮತ್ತಷ್ಟು ವಿಸ್ತರಿಸಲಾಯಿತು ಮತ್ತು ನವೀಕರಿಸಲಾಯಿತು.