ಬರಾಬರ್ ಗುಹೆಗಳು
From Wikipedia, the free encyclopedia
ಬರಾಬರ್ ಗುಡ್ಡದ ಗುಹೆಗಳು ಭಾರತದಲ್ಲಿ ಉಳಿದುಕೊಂಡಿರುವ ಅತ್ಯಂತ ಹಳೆಯ ಕಲ್ಲಿನಲ್ಲಿ ಕೆತ್ತಿದ ಗುಹೆಗಳಾಗಿವೆ. ಇವುಗಳ ಕಾಲಮಾನ ಮೌರ್ಯ ಸಾಮ್ರಾಜ್ಯದಿಂದ (ಕ್ರಿ.ಶ. ೩೨೨-೧೮೫) ಎಂದು ಹೇಳಲಾಗಿದೆ. ಕೆಲವು ಅಶೋಕನ ಶಾಸನಗಳನ್ನು ಹೊಂದಿವೆ. ಇದು ಭಾರತದ ಬಿಹಾರ ರಾಜ್ಯದ ಜೆಹಾನಾಬಾದ್ ಜಿಲ್ಲೆಯ ಮಖ್ದುಂಪುರ್ ಪ್ರದೇಶದಲ್ಲಿ, ಗಯಾದ ೨೪ ಕಿ.ಮಿ. ಉತ್ತರಕ್ಕೆ ಸ್ಥಿತವಾಗಿದೆ.[1]