![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/48/Lurking_tiger.jpg/640px-Lurking_tiger.jpg&w=640&q=50)
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
From Wikipedia, the free encyclopedia
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಭಾರತದ ರಾಷ್ಟ್ರೀಯ ಉದ್ಯಾನವನವಾಗಿದೆ. ಇದು ಭಾತದ ಕರ್ನಾಟಕದಲ್ಲಿರುವ ಬೆಂಗಳೂರಿನಲ್ಲಿದೆ. ಇದನ್ನು ೧೯೭೦ ರಲ್ಲಿ ಸ್ಥಾಪಿಸಲಾಯಿತು.[1] ಇದನ್ನು ೧೯೭೪ ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು. ೨೦೦೨ ರಲ್ಲಿ, ಉದ್ಯಾನದ ಒಂದು ಸಣ್ಣ ಭಾಗವು ಬನ್ನೇರುಘಟ್ಟ ಜೈವಿಕ ಉದ್ಯಾನವನವಾಗಿ ಪ್ರಾಣಿಶಾಸ್ತ್ರದ ಉದ್ಯಾನವಾಯಿತು.[2]
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ | |
---|---|
IUCN category II (national park) | |
![]() ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ | |
ಸ್ಥಳ | ಕರ್ನಾಟಕ, ಭಾರತ |
ಹತ್ತಿರದ ನಗರ | ಬೆಂಗಳೂರು |
ನಿರ್ದೇಶಾಂಕಗಳು | 12°48′03″N 77°34′32″E |
ಪ್ರದೇಶ | 260.51 km2 (100.58 sq mi) |
ಸ್ಥಾಪನೆ | ೧೯೭೪ |
ಆಡಳಿತ ಮಂಡಳಿ | ಪರಿಸರ ಮತ್ತು ಅರಣ್ಯ ಸಚಿವಾಲಯ, ಭಾರತ ಸರ್ಕಾರ |
bannerghattabiologicalpark |
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಟ್ರೆಕ್ಕಿಂಗ್ ಮತ್ತು ಹೈಕಿಂಗ್ಗೆ ಒಂದು ತಾಣವಾಗಿದೆ. ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ಕುರಿ ಮತ್ತು ಜಾನುವಾರು ಸಾಕಣೆಗಾಗಿ ಮೂರು ದೊಡ್ಡ ಆವರಣಗಳಲ್ಲಿ ಸುತ್ತುವರಿದ ಆರು ಗ್ರಾಮೀಣ ಹಳ್ಳಿಗಳಿವೆ.[3]
೨೫ ಸಾವಿರ ಎಕರೆ ಪ್ರದೇಶದಷ್ಟು ವಿಸ್ತಾರ ಹೊಂದಿರುವ ಈ ಮೀಸಲು ಪ್ರದೇಶ ಹುಲಿ, ಸಿಂಹ, ಚಿರತೆ, ಕಾಡುಕೋಣ, ಜಿಂಕೆ, ಕರಡಿಗಳು, ಪಕ್ಷಿಗಳು ಮತ್ತು ವಿವಿಧ ಜಾತಿಯ ಚಿಟ್ಟೆಗಳ ನೆಲೆಯಾಗಿದೆ. ಪ್ರವಾಸಿಗರು ಸಫಾರಿ ಮಾಡುವಾಗ ಚಿರತೆಗಳು, ಬಿಳಿ ಹುಲಿಗಳು, ಬಂಗಾಳದ ಹುಲಿ, ಮತ್ತು ಕಾಡಿನ ರಾಜ ಸಿಂಹ ಅರಣ್ಯದಲ್ಲಿ ಸುತ್ತಾಡುವುದನ್ನು ನೋಡಬಹುದು.
ಇಲ್ಲಿರುವ ಕೆಲವು ಪ್ರಾಣಿಗಳು ಸರ್ಕಸ್ಗಳಿಂದ ರಕ್ಷಿಸಲ್ಪಟ್ಟವುಗಳು. ಇನ್ನು ಕೆಲವು ದೇಶದ ಇತರೆಡೆಗಳಿಂದ ಕೂಡ ತರಿಸಿಕೊಳ್ಳಲಾಗಿದೆ. ಸಂಪೂರ್ಣ ರಕ್ಷಣೆಯಲ್ಲಿರುವ ಈ ಪ್ರಾಣಿಗಳು ನಾಡಿಗೆ ಬರದಂತೆ ಅರಣ್ಯದ ಸೂಕ್ಷ್ಮ ಸ್ಥಳಗಳಲ್ಲಿ ಬೇಲಿಯನ್ನು ಹಾಕಲಾಗಿದೆ.