ಪ್ರಕಟಣೆ
From Wikipedia, the free encyclopedia
ಪ್ರಕಟಣೆ ಎಂದರೆ ಸಾರ್ವಜನಿಕರಿಗಾಗಿ ಮಾಹಿತಿಯನ್ನು ಲಭ್ಯವಾಗಿಸುವುದು.[1][2] ಈ ಪದದ ನಿರ್ದಿಷ್ಟ ಬಳಕೆಯು ದೇಶಗಳ ನಡುವೆ ಬದಲಾಗಬಹುದಾದರೂ, ಇದನ್ನು ಸಾಮಾನ್ಯವಾಗಿ ಕಾಗದ (ವೃತ್ತಪತ್ರಿಕೆಗಳು, ನಿಯತಕಾಲಿಕಗಳು, ಕ್ಯಾಟಲಾಗು ಸೂಚಿಗಳು) ಸೇರಿದಂತೆ, ಪಠ್ಯ, ಚಿತ್ರಗಳು ಅಥವಾ ಇತರ ಶ್ರವ್ಯ-ದೃಶ್ಯ ಮಾಹಿತಿಗೆ ಅನ್ವಯಿಸಲಾಗುತ್ತದೆ. ಪ್ರಕಟಣೆ ಶಬ್ದವು ಪ್ರಕಟಿಸುವ ಕ್ರಿಯೆ, ಮತ್ತು ಯಾವುದೇ ಮುದ್ರಿತ ಪ್ರತಿಗಳನ್ನೂ ಸೂಚಿಸುತ್ತದೆ.