ಪ್ಯಾರೆಲೆಲ್ ಕಂಪ್ಯೂಟಿಂಗ್(ಏಕಕಾಲದ ಗಣಕಕಾರ್ಯ)
From Wikipedia, the free encyclopedia
ಪ್ಯಾರೆಲೆಲ್ ಕಂಪ್ಯೂಟಿಂಗ್ ಗಣನೆಯ ಒಂದು ರೂಪವಾಗಿದ್ದು,ಇದರಲ್ಲಿ ಅನೇಕ ಲೆಕ್ಕಾಚಾರಗಳನ್ನು ಏಕಕಾಲದಲ್ಲಿ ಮಾಡಬಹುದು.[1] ದೊಡ್ಡ ಸಮಸ್ಯೆಗಳನ್ನು ಆಗಾಗ್ಗೆ ಸಣ್ಣದಾಗಿ ವಿಭಾಗಿಸಿ,ಅವನ್ನು ನಂತರ ಒಟ್ಟಿಗಿರುವಂತೆ("ಏಕಕಾಲದಲ್ಲಿ")ಬಿಡಿಸಲಾಗುವುದು ಎಂಬ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಏಕಕಾಲದ ಗಣಕಕಾರ್ಯದ ವಿವಿಧ ರೂಪಗಳಿವೆ: ಬಿಟ್(ದ್ವಿಮಾನಕ)-ಹಂತ,ಸೂಚನೆ ಹಂತ, ದತ್ತಾಂಶ ಮತ್ತು ಕಾರ್ಯ ಏಕಕಾಲಿಕ ಗಣನೆ. ಏಕಕಾಲದ ಕಾರ್ಯನಿರ್ವಹಣೆಯನ್ನು ಅನೇಕ ವರ್ಷಗಳ ಕಾಲ ಮುಖ್ಯವಾಗಿ ಅಧಿಕ ಕಾರ್ಯನಿರ್ವಹಣೆಯ ಗಣಕದಲ್ಲಿ ಬಳಸಿಕೊಳ್ಳಲಾಗಿದೆ. ಆದರೆ ಆವರ್ತನಾಂಕ ಏರಿಕೆಯನ್ನು ತಪ್ಪಿಸುವ ಭೌತಿಕ ನಿರ್ಬಂಧಗಳಿಂದ ಇದರ ಬಗ್ಗೆ ಆಸಕ್ತಿ ಇತ್ತೀಚೆಗೆ ಬೆಳೆಯುತ್ತಿದೆ.[2][3] ಕಂಪ್ಯೂಟರ್ಗಳಿಂದ ವಿದ್ಯುತ್ ಉಪಭೋಗ(ತರುವಾಯ ಉಷ್ಣ ಉತ್ಪಾದನೆ)ಇತ್ತೀಚಿನ ವರ್ಷಗಳಲ್ಲಿ ಕಳವಳಕ್ಕೆ ಎಡೆಯಾಗಿದ್ದು, ಏಕಕಾಲದ ಗಣಕವು ಕಂಪ್ಯೂಟರ್ ವಿನ್ಯಾಸದಲ್ಲಿ ಮುಖ್ಯವಾಗಿ ಮಲ್ಟಿಕೋರ್ ಸಂಸ್ಕಾರಕಗಳ ರೂಪದಲ್ಲಿ ಪ್ರಧಾನ ಮಾದರಿಯಾಗಿದೆ.[4]
ಏಕಕಾಲದ ಗಣಕದ ಕಂಪ್ಯೂಟರ್ಗಳನ್ನು ಯಂತ್ರಾಂಶವು ಏಕಕಾಲಿಕೆ ಗಣನೆಗೆ ಬೆಂಬಲಿಸುವ ಮಟ್ಟಕ್ಕೆ ಅನುಗುಣವಾಗಿ ವಿಂಗಡಿಸಬಹುದು. ಮಲ್ಟಿಕೋರ್ ಮತ್ತು ಬಹು ಸಂಸ್ಕಾರಕ ಕಂಪ್ಯೂಟರ್ಗಳಲ್ಲಿ ಒಂದೇ ಯಂತ್ರದಲ್ಲಿ ಬಹು ಸಂಸ್ಕರಣ ಅಂಶಗಳಿರುತ್ತವೆ.ಕ್ಲಸ್ಟರ್(ಸಂಪರ್ಕ ಕಲ್ಪಿಸಿದ ಕಂಪ್ಯೂಟರ್ಗಳ ಗುಚ್ಛ)ಗಳು, MPP(ಬಹು ಏಕಕಾಲಿಕ ಸಂಸ್ಕಾರಕ)ಗಳು ಮತ್ತು ಗ್ರಿಡ್(ಕೋಶಸಮೂಹ)()ಗಳು ಇದೇ ಕೆಲಸವನ್ನು ನಿರ್ವಹಿಸಲು ಅನೇಕ ಕಂಪ್ಯೂಟರ್ಗಳನ್ನು ಬಳಸುತ್ತವೆ. ವಿಶೇಷ ಪರಿಣತಿಯ ಏಕಕಾಲಿಕ ಗಣಕದ ಕಂಪ್ಯೂಟರ್ ವಿನ್ಯಾಸವು ಸಾಂಪ್ರದಾಯಿಕ ಸಂಸ್ಕಾರಕಗಳ ಜತೆ ನಿರ್ದಿಷ್ಟ ಕಾರ್ಯಗಳ ವೇಗವರ್ಧನೆಗೆ ಬಳಸಲಾಗುತ್ತದೆ.
ಏಕಕಾಲಿಕ ಗಣಕ ಕಂಪ್ಯೂಟರ್ ಕ್ರಮವಿಧಿ(ಪ್ರೋಗ್ರಾಂ)ಗಳನ್ನು ಅನುಕ್ರಮ ಕ್ರಮವಿಧಿಗಳಿಗಿಂತ ಬರೆಯುವುದು ಕಷ್ಟ.[5] ಏಕೆಂದರೆ ಇವು ಒಟ್ಟಾಗಿ ಅನೇಕ ಹೊಸ ವರ್ಗಗಳ ತಂತ್ರಾಂಶ(ಸಾಫ್ಟ್ವೇರ್) ದೋಷಗಳನ್ನು ಪರಿಚಯಿಸುತ್ತದೆ. ಅವುಗಳ ಪೈಕಿ ಅನಪೇಕ್ಷಿತ ಪರಿಸ್ಥಿತಿ ಸಾಮಾನ್ಯವಾಗಿ ಕಂಡುಬರುತ್ತದೆ. ಎರಡು ಭಿನ್ನ ಉಪಕಾರ್ಯಗಳ ನಡುವೆ ಸಂಪರ್ಕ ಮತ್ತು ಏಕಕಾಲಿಕತೆಯು ಉತ್ತಮ ಏಕಕಾಲಿಕ ಕ್ರಮವಿಧಿ ನಿರ್ವಹಣೆಯನ್ನು ಪಡೆಯಲು ಇರುವ ಮಹಾ ಅಡಚಣೆಗಳಲ್ಲಿ ಒಂದಾಗಿದೆ.
ಏಕಕಾಲಿಕ ಗಣನೆಯ(ಪ್ಯಾರಲೈಸೇಷನ್) ಫಲವಾಗಿ ಕ್ರಮವಿಧಿಯ ವೇಗವನ್ನು ಅಮ್ಡಾಲ್`ಸ್ ನಿಯಮವೆಂದು ಹೇಳಲಾಗಿದೆ.