ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ

Thumb
ಭಾರತ
ಪ್ಯಾರಾಲಿಂಪಿಕ್ಸ್‍
Thumb
ಪ್ರಪಂಚದ ಐದು ಖಂಡಗಳನ್ನು ಬಿಂಬಿಸುವ ಒಲಂಪಿಕ್ ಚಕ್ರಗಳುಬಳೆಗಳು:೧.ಏಷ್ಯಾ, ೨.ಯೂರೋಪ್, ೩.ಆಫ್ರಕಾ, ೪.ಆಸ್ಟ್ರೇಲಿಯಾ, ೫.ಉತ್ತರ ಮತ್ತು ದಕ್ಷಿಣ ಅಮೇರಿಕಾಗಳು. *ಲ್ಯಾಟಿನ್ ಭಾಷೆಯ, "ಸಿಟಿಯಸ್, ಆಲ್ಟಿಯಸ್, ಫೋರ್ಟಿಯಸ್"; ಅಂದರೆ "ಕ್ಷಿಪ್ರವಾಗಿ,ಎತ್ತರಕ್ಕೆ ಹಾಗೂ ಬಲಿಷ್ಠ" ಎಂಬುದೇ ಒಲಿಂಪಿಕ್ ಧ್ಯೇಯ

೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫

ಸಂಕ್ಷಿಪ್ತ ವಿವರ
.
  • ಭಾರತ ಮೊದಲು 1968 ಅದರ ಬೇಸಿಗೆ ಪ್ಯಾರಾಲಿಂಪಿಕ್ ಆಟಗಳಲ್ಲಿ ಭಾಗವಹಿಸಿ ಉತ್ತಮ ಮಟ್ಟ ತಲುಪಿತು. 1972 ರಲ್ಲಿ ಮತ್ತೆ ಸ್ಪರ್ಧಿಸಿತು. ನಂತರ 1984ರ ವರೆಗೆ ಈ ಆಟಗಲಲ್ಲಿ ಆಟಗಳಲ್ಲಿ ಭಾಗವಹಿಸಲಿಲ್ಲ. ನಂತರ ಭಾರತವು ಬೇಸಿಗೆ ಪ್ಯಾರಾಲಿಂಪಿಕ್ ಆಟಗಳಲ್ಲಿ ಪ್ರತಿ ಆವೃತ್ತಿ ಭಾಗವಹಿಸಿದೆ. ಆದರೆ ಇದು ಚಳಿಗಾಲದಲ್ಲಿ ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲಿಲ್ಲ.
  • ಹೈಡೆಲ್ಬರ್ಗ್ ಆಟಗಳಲ್ಲಿ 1972 ರಲ್ಲಿ, ಮರಳೀಕಾಂತ್ ಪೇಟ್ಕರ್ ಭಾರತಕ್ಕೆ ಮೊದಲ ಚಿನ್ನ ಗೆದ್ದರು. ಅವರು 37,331 ಸೆಕೆಂಡುಗಳ ದಾಖಲೆ ಸಮಯದಲ್ಲಿ 50 ಮೀಟರ್ ಫ್ರೀಸ್ಟೈಲ್ ಈಜಿದರು.[1]

ಪದಕಗಳ ಪಟ್ಟಿ

  • ೧೯೭೨ ರಿಂದ ೨೦೧೬ರರ ವರೆಗೆ:
More information ಪದಕ, ಹೆಸರು /ಟೀಮು ...
ಪದಕಹೆಸರು /ಟೀಮುಇಸವಿ; ಊರು ಸ್ಥಳ/ದೇಶಆಟವಿಧ
11 ಬಂಗಾರಮರಳೀಕಾಂತ್ ಪೇಟ್ಕರ್1972 ಹೈಡೆಲ್ಬರ್ಗ್50 ಮೀಟರ್ ಫ್ರಿಸ್ಟೈಲ್ 3ಈಜು
22 ಬೆಳ್ಳಿಭಿಮರಾವ್ ಕೇಸಾರ್ಕರ್1984 ಸ್ಟೋಕ್ ಮ್ಯಾಂಡೆವಿಲ್ಲೆ / ನ್ಯೂಯಾರ್ಕ್ಜಾವೆಲಿನ್ ಥ್ರೋ ಎಲ್ 6ಅಥ್ಲೆಟಿಕ್ಸ್
22 ಬೆಳ್ಳಿಜೋಗಿಂದರ್ ಸಿಂಗ್ ಬೇಡಿ1984 ಸ್ಟೋಕ್ ಮ್ಯಾಂಡೆವಿಲ್ಲೆ / ನ್ಯೂಯಾರ್ಕ್ಶಾಟ್ ಪುಟ್ ಎಲ್ 6ಅಥ್ಲೆಟಿಕ್ಸ್
33 ಕಂಚುಜೋಗಿಂದರ್ ಸಿಂಗ್ ಬೇಡಿ1984 ಸ್ಟೋಕ್ ಮ್ಯಾಂಡೆವಿಲ್ಲೆ / ನ್ಯೂಯಾರ್ಕ್ಜಾವೆಲಿನ್ ಥ್ರೋ ಎಲ್ 6ಅಥ್ಲೆಟಿಕ್ಸ್
33 ಕಂಚುಜೋಗಿಂದರ್ ಸಿಂಗ್ ಬೇಡಿ1984 ಸ್ಟೋಕ್ ಮ್ಯಾಂಡೆವಿಲ್ಲೆ / ನ್ಯೂಯಾರ್ಕ್ಡಿಸ್ಕಸ್ ಥ್ರೋ ಎಲ್ 6ಅಥ್ಲೆಟಿಕ್ಸ್
11 ಬಂಗಾರದೇವೇಂದ್ರ ಜಜರಿಯಾ2004 ರ ಅಥೆನ್ಸ್ಜಾವೆಲಿನ್ ಥ್ರೋ F44/46ಅಥ್ಲೆಟಿಕ್ಸ್
33 ಕಂಚುರಾಜೇಂದ್ರಸಿಂಗ್ ರಹೇಲು2004 ರ ಅಥೆನ್ಸ್56 ಕೆಜಿ ವಿಭಾಗದಲ್ಲಿಪವರ್ಲಿಫ್ಟಿಂಗ್
22 ಬೆಳ್ಳಿಗಿರೀಶ ನಾಗರಾಜೇಗೌಡ2012 ಲಂಡನ್ಪುರುಷರ ಹೈ ಜಂಪ್ ಎಫ್ 42ಅಥ್ಲೆಟಿಕ್ಸ್
11 ಬಂಗಾರಮರಿಯಪ್ಪನ್ ತಂಗವೇಲು2016 ರಿಯೊ ಡಿ ಜನೈರೊಪುರುಷರ ಹೈ ಜಂಪ್ T42ಅಥ್ಲೆಟಿಕ್ಸ್
33 ಕಂಚುವರುಣ್ ಭಾತಿ2016 ರಿಯೊ ಡಿ ಜನೈರೊಪುರುಷರ ಹೈ ಜಂಪ್ T42ಅಥ್ಲೆಟಿಕ್ಸ್
ಒಟ್ಟುಚಿನ್ನ ೩ಬೆಳ್ಳಿ ೩ಕಂಚು ೪
Close

[2]

೨೦೧೬

  • ಪುರುಷರ ಟಿ 42 ಹೈ ಜಂಪ್ ಫೈನಲ್ ನಲ್ಲಿ ಮರಿಯಪ್ಪನ್ ತಂಗವೇಲು 1.89 ಮೀಟರ್ ದೂರ ಜಿಗಿದು ಚಿನ್ನ ಗೆದ್ದಿದ್ದಾರೆ. ಇನ್ನು ಇದೇ ಗೇಮ್ ನಲ್ಲಿ ವರುಣ್ ಭಾಟಿ ಅವರು 1.86 ಮೀಟರ್ ದೂರ ಜಿಗಿದು ಕಂಚಿನ ಪದಕವನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ರಾಷ್ಟ್ರೀಯ ಮಕ್ಕಳ ಪುರಸ್ಕಾರ ಪಡೆದ ರೇವತಿ ಎಂ.ನಾಯಕಗೆ

  • 15 Nov, 2016
  • ಪ್ಯಾರಾಲಿಂಪಿಯನ್‌ನಲ್ಲಿ ತೋರಿದ ಅಸಾಧಾರಣ ಸಾಧನೆಗಾಗಿ ಸೋಮವಾರ ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಂದ ರಾಷ್ಟ್ರೀಯ ಮಕ್ಕಳ ಪುರಸ್ಕಾರ ಹಾಗೂ ಚಿನ್ನದ ಪದಕ ಪಡೆದಿರುವ ದಾವಣಗೆರೆಯ ಪ್ಯಾರಾಲಿಂಪಿಯನ್‌ ಈಜುಪಟು ರೇವತಿ ಎಂ. ನಾಯಕ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ.

ರೇವತಿ ಎಂ. ನಾಯಕ

  • ‘ರೇವತಿ ದಾವಣಗೆರೆಯ ಸಿದ್ಧಗಂಗಾ ಪಿಯು ಕಾಲೇಜು ವಿದ್ಯಾರ್ಥಿನಿ. ತಂದೆ ಹುಚ್ಚವ್ವನಹಳ್ಳಿ ಮಂಜುನಾಥ ಅವರು ಕರ್ನಾಟಕ ರಾಜ್ಯ ರೈತ ಸಂಘ–ಹಸಿರುಸೇನೆ ಬಣದ ಅಧ್ಯಕ್ಷ. ತಾಯಿ ಸುನಂದಾ ಗೃಹಿಣಿ. ರೇವತಿ ಸೇರಿ ಮೂವರೂ ಮಕ್ಕಳು ಕ್ರೀಡಾಪಟುಗಳು ಎನ್ನುವುದು ವಿಶೇಷ.

ರೇವತಿ ಈಜು ಕಲಿತಿದ್ದು ಎಂಟನೇ ವಯಸ್ಸಿನಲ್ಲಿ. ಜಗಳೂರು ತಾಲ್ಲೂಕಿನ ಹುಚ್ಚವ್ವನಹಳ್ಳಿಯ ಗ್ರಾಮದ ಕಾಲುವೆಯೊಂದರಲ್ಲಿ. ಮಗಳಿಗೆ ಉತ್ತಮ ಕ್ರೀಡಾ ಸೌಲಭ್ಯ ಒದಗಿಸಲು ವ್ಯಾಸಂಗವನ್ನು ಹಳ್ಳಿಯಿಂದ ದಾವಣಗೆರೆ ನಗರಕ್ಕೆ ಬದಲಾಯಿಸಿದರು. ತಂದೆಯ ಶ್ರಮ ವ್ಯರ್ಥವಾಗಲಿಲ್ಲ. ಈಜಿನಲ್ಲಿ ಉತ್ತಮ ಪ್ರದರ್ಶನವನ್ನೂ ನೀಡತೊಡಗಿದಳು.

ಎರಡು ವರ್ಷಗಳಿಂದ ಪ್ಯಾರಾಲಿಂಪಿಯನ್‌ ಸ್ಪರ್ಧಿಗಳಿಗಾಗಿ ನಡೆಯುವ ಐವಾಸ್‌ ಈಜು ಕೂಟದಲ್ಲಿ ರೇವತಿ ಪದಕಗಳ ಸಾಧನೆ ದಾಖಲಿಸಿದಳು. ಕಳೆದ ವರ್ಷ ನೆದರ್‌ಲೆಂಡ್‌ನಲ್ಲಿ ಪದಕ. ಕಳೆದ ಜೂನ್‌– ಜುಲೈನಲ್ಲಿ ಚೆಕ್‌ ಗಣರಾಜ್ಯದ ಪ್ರಾಗ್‌ನಲ್ಲಿ ನಡೆದ ಐವಾಸ್‌ ಕೂಟದಲ್ಲಿ (ಎಸ್‌ಬಿ–9 ವಿಭಾಗ) ಈಕೆಗೆ ಒಂದು ಬೆಳ್ಳಿ, ಒಂದು ಕಂಚಿನ ಪದಕ. ಅಮೆರಿಕದ ಪಸಡೇನಾದ ರೋಸ್‌ಬೌಲ್‌ನಲ್ಲಿ 2014ರಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಈಜು ಕೂಟದಲ್ಲಿ ಆರನೇ ಸ್ಥಾನವನ್ನೂ ಪಡೆದಿದ್ದಳು.16 ವರ್ಷದ ರೇವತಿಗೆ ಕಾಲುಗಳ ಉದ್ದ ಒಂದೇ ಸಮನಾಗಿಲ್ಲ. ಆದರೆ ಅದನ್ನು ಈಕೆ ಒಂದು ಸಮಸ್ಯೆ ಎಂದು ಭಾವಿಸಿಯೂ ಇಲ್ಲ. ‘ನನಗೆ ಮುಂದೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕೆಂಬ ಗುರಿಯಿದೆ’ ಎನ್ನುವ ಮೂಲಕ ದೊಡ್ಡ ಕನಸನ್ನೂ ಹೊಂದಿದ್ದಾಳೆ.[3]

ನೋಡಿ

  1. ೨೦೦೮ ಒಲಂಪಿಕ್ ಕ್ರೀಡಾಕೂಟ
  2. ಬೇಸಿಗೆ ಒಲಿಂಪಿಕ್ಸ್ 2012 ರಲ್ಲಿ ಭಾರತ
  3. ರಿಯೊ ಒಲಿಂಪಿಕ್ಸ್ 2016
  4. ಲಂಡನ್ ಬೇಸಿಗೆ ಒಲಂಪಿಕ್ಸ್ 2012
  5. ಒಲಿಂಪಿಕ್ಸ್‌ನಲ್ಲಿ ಭಾರತ=ಒಲಿಂಪಿಕ್ಸ್‌ನಲ್ಲಿ ಭಾರತ (ಪದಕಗಳ ಪಟ್ಟಿ)

ಉಲ್ಲೇಖ

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.