ಪೊಟ್ಟಣದಲ್ಲಿ ಭರ್ತಿಮಾಡುವಿಕೆ
From Wikipedia, the free encyclopedia
ಪೊಟ್ಟಣದಲ್ಲಿ ಭರ್ತಿಮಾಡುವಿಕೆ ಯು ವಿತರಣೆ, ಶೇಖರಣೆ, ಮಾರಾಟ, ಮತ್ತು ಬಳಕೆಗೆ ಮೀಸಲಾಗಿರುವ ಉತ್ಪನ್ನಗಳನ್ನು ಸುತ್ತುಗಟ್ಟಿ ಪೆಟ್ಟಿಗೆಯಲ್ಲಿ ಹಾಕುವ ಅಥವಾ ರಕ್ಷಿಸಿಡುವ ವಿಜ್ಞಾನ, ಕಲೆ ಮತ್ತು ತಂತ್ರಜ್ಞಾನವಾಗಿದೆ. ಸಾಮಾನು ಪೊಟ್ಟಣಗಳ ವಿನ್ಯಾಸ, ಮೌಲ್ಯಮಾಪನ, ಹಾಗೂ ತಯಾರಿಕೆಯ ಪ್ರಕ್ರಿಯೆ ಗೂ ಸಹ ಪೊಟ್ಟಣದಲ್ಲಿ ಭರ್ತಿಮಾಡುವಿಕೆಯು ಉಲ್ಲೇಖಿಸಲ್ಪಡುತ್ತದೆ. ಸಾಗಣೆ, ತಾತ್ಕಾಲಿಕವಾಗಿ ಸಂಗ್ರಹಿಸಿಡುವಿಕೆ, ಜಾರಿ ವ್ಯವಸ್ಥೆ, ಮಾರಾಟ, ಮತ್ತು ಅಂತಿಮ ಬಳಕೆಗಾಗಿ ಸರಕುಗಳನ್ನು ಸಿದ್ಧಪಡಿಸುವ ಒಂದು ಸುಸಂಘಟಿತವಾದ ವ್ಯವಸ್ಥೆ ಯಾಗಿ ಪೊಟ್ಟಣದಲ್ಲಿ ಭರ್ತಿಮಾಡುವಿಕೆಯನ್ನು ವಿವರಿಸಬಹುದಾಗಿದೆ. ರಕ್ಷಣೆಗಳು, ಸಂರಕ್ಷಣೆಗಳು, ಸಾಗಣೆಗಳು, ಮಾಹಿತಿಗಳು, ಮತ್ತು ಮಾರಾಟಗಳನ್ನು ಪೊಟ್ಟಣದಲ್ಲಿ ಭರ್ತಿಮಾಡುವಿಕೆಯು ಒಳಗೊಳ್ಳುತ್ತದೆ.[1] ಅನೇಕ ದೇಶಗಳಲ್ಲಿ ಇದು ಸಂಪೂರ್ಣವಾಗಿ ಸರ್ಕಾರದ, ವ್ಯವಹಾರದ, ಸಾಂಸ್ಥಿಕ, ಕೈಗಾರಿಕಾ, ಮತ್ತು ವೈಯಕ್ತಿಕ ಬಳಕೆಯೊಳಗೆ ಸಂಯೋಜಿಸಲ್ಪಟ್ಟಿದೆ.
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
ಸಾಮಾನು ಪೊಟ್ಟಣದ ಗುರುತುಪಟ್ಟಿ ಅಂಟಿಸುವಿಕೆ (en-GB) ಅಥವಾ ಗುರುತುಪಟ್ಟಿ ಅಂಟಿಸುವಿಕೆ (en-US) ಎಂಬುದು, ಕಟ್ಟಿದ ಪೊಟ್ಟಣದ ಮೇಲಿನ ಅಥವಾ ಒಂದು ಪ್ರತ್ಯೇಕವಾದ ಆದರೆ ಸಂಬಂಧಹೊಂದಿದ ಗುರುತುಪಟ್ಟಿಯ ಮೇಲಿನ ಯಾವುದೇ ಬರಹ ರೂಪದ, ವಿದ್ಯುನ್ಮಾನ ರೂಪದ, ಅಥವಾ ಗ್ರಾಫಿಕ್ ಸಂವಹನೆಯಾಗಿದೆ.