ಪೆಂಟೋಡ್
From Wikipedia, the free encyclopedia
ಪೆಂಟೋಡ್ ಎಂಬುದು ಐದು ವಿದ್ಯುದ್ವಾರಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ಸಾಧನವಾಗಿದೆ. ಈ ಸಾಧನವನ್ನು ೧೯೨೬ರಲ್ಲಿ ಗಿಲ್ಲಿಸ್ ಹೋಲ್ಸ್ಟ್ ಮತ್ತು ಬರ್ನ್ಹಾರ್ಡ್ ಡಿ.ಹೆಚ್.ಟೆಲ್ಲೆಜನ್ ಅವರು ಕಂಡುಹಿಡಿದರು.[1] ಈ ಪದವು ಸಾಮಾನ್ಯವಾಗಿ ಮೂರು-ಗ್ರಿಡ್ ನಿರ್ವಾತ ಕೊಳವೆ ವರ್ಧಕ ಅಥವಾ ಥರ್ಮಿಯೋನಿಕ್ ವಾಲ್ವ್ಗೆ ಅನ್ವಯಿಸುತ್ತದೆ. ಪೆಂಟೋಡ್ ಪರದೆ-ಗ್ರಿಡ್ ಕೊಳವೆ ಅಥವಾ ಷೀಲ್ಡ್-ಗ್ರಿಡ್ ಕೊಳವೆ (ಒಂದು ರೀತಿಯ ಟೆಟ್ರೋಡ್ ಕೊಳವೆ) ನಿಂದ, ಪರದೆ ಗ್ರಿಡ್ ಮತ್ತು ವಿದ್ಯುದ್ವಾರದ ನಡುವೆ ಗ್ರಿಡ್ ಅನ್ನು ಸೇರಿಸುವ ಮೂಲಕ ಅಭಿವೃದ್ಧಿಪಡಿಸಲಾಗಿದೆ.[2] ಪರದೆ-ಗ್ರಿಡ್ ಕೊಳವೆ ವಿದ್ಯುದ್ವಾರದದ ಎಲೆಕ್ಟ್ರಾನ್ಗಳ ದ್ವಿತೀಯ ಉತ್ಸರ್ಜಿಕೆಯ ಕಾರಣದಿಂದಾಗಿ ವರ್ಧಕವಾಗಿ ಕಾರ್ಯಕ್ಷಮತೆಯಲ್ಲಿ ಸೀಮಿತವಾಗಿತ್ತು.[3] ಹೆಚ್ಚುವರಿ ಗ್ರಿಡ್ ಅನ್ನು ‘ನಿಗ್ರಹಿಸುವ ಗ್ರಿಡ್’ ಎಂದು ಕರೆಯಲಾಗುತ್ತದೆ. ನಿಗ್ರಹಿಸುವ ಗ್ರಿಡ್ ಸಾಮಾನ್ಯವಾಗಿ ಋಣದ್ವಾರದ ಸಾಮರ್ಥ್ಯದಲ್ಲಿ ಇರುವುದು. ಈ ನಿಗ್ರಹಿಸುವ ಗ್ರಿಡ್ ಋಣದ್ವಾರಕ್ಕೆ ಹೋಗುವ ದ್ವಿತೀಯ ಉತ್ಸರ್ಜನೆಯನ್ನು ತಡೆಯುವುದು.[4][5] ನಿಗ್ರಹಕಾರ ಗ್ರಿಡ್ನ್ನು ಸೇರಿಸುವುದರಿಂದ ವರ್ಧಕ ಕಾರ್ಯಾಚರಣೆಯಲ್ಲಿ ಪೆಂಟೋಡ್ನ ಪ್ಲೇಟ್ ನಿಂದ ಹೊರಬರುವ ಸಿಗ್ನಲ್ ಪರದೆ ಗ್ರಿಡ್ ಕೊಳವೆಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುತ್ತದೆ. ೧೯೬೦ರ ದಶಕದಿಂದ ೧೯೭೦ರ ದಶಕದವರೆಗೆ ಪೆಂಟೋಡ್ ಟ್ಯೂಬ್ಗಳನ್ನು ಅತಿಹೆಚ್ಚಾಗಿ ತಯಾರಿಸಲಾಯಿತು ಮತ್ತು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸಲಾಯಿತು. ಇದೆ ಸಮಯದಲ್ಲಿ ಕೊಳವೆಗಳನ್ನು ಟ್ರಾನ್ಸಿಸ್ಟರ್ ನೊಂದಿಗೆ ಹೊಸ ವಿನ್ಯಾಸಗಳಲ್ಲಿ ಬದಲಾಯಿಸಲಾಯಿತು. ೨೧ನೇ ಶತಮಾನದ ಶುರುವಲ್ಲೇ, ಕೆಲವು ಪೆಂಟೋಡ್ಗಳು ಹೆಚ್ಚಿನ ಶಕ್ತಿಯ ರೇಡಿಯೊ ಆವರ್ತನ ಸಾಧನೆಗಳು, ಸಂಗೀತ ವಾದ್ಯ ವರ್ಧಕಗಳು ಮತ್ತು ನಿರ್ದಿಷ್ಟ ಮಾರುಕಟ್ಟೆಗಳ ಉತ್ಪಾದನೆಯಲ್ಲಿವೆ.