ಪುದೀನ (ಮೆಂಥಾ ಆರ್ವೆನ್ಸಿಸ್) ಉತ್ತರ ದಿಕ್ಕಿನ ಸುತ್ತಲಿನ ಪ್ರದೇಶ|ಉತ್ತರ ದಿಕ್ಕಿನ ಸುತ್ತಲೂ ಹರಡನ್ನು ಹೊಂದಿರುವ ಮೆಂಥಾದ ಒಂದು ಪ್ರಜಾತಿ. ಇದು ಯೂರೋಪ್ ಮತ್ತು ಪಶ್ಚಿಮ ಹಾಗೂ ಮಧ್ಯ ಏಷ್ಯಾ, ಹಿಮಾಲಯದ ಪೂರ್ವಕ್ಕೆ ಮತ್ತು ಪೂರ್ವ ಸೈಬೀರಿಯಾ, ಮತ್ತು ಉತ್ತರ ಅಮೇರಿಕಾದ ಸಮಶೀತೋಷ್ಣ ಪ್ರದೇಶಗಳಿಗೆ ಸ್ಥಳೀಯವಾಗಿದೆ. ಪುದೀನ ಸಾಮಾನ್ಯವಾಗಿ ೧೦-೬೦ ಸೆ.ಮಿ. ಎತ್ತರ ಬೆಳೆಯುವ ಮತ್ತು ಅಪರೂಪಕ್ಕೆ ೧೦೦ ಸೆ.ಮಿ. ಎತ್ತರದವರೆಗೆ ಬೆಳೆಯುವ ಮೂಲಿಕೆಯಂಥ ಬಹುವಾರ್ಷಿಕ ಸಸ್ಯ. ಇದರ ಕುಟುಂಬ ಲ್ಯಾಮಿನೇಸಿಯಿ. ನೀರಿನ ಆಶ್ರಯವಿರುವ ಕಡೆ ಪುದೀನ ಸೊಂಪಾಗಿ ಬೆಳೆಯುತ್ತದೆ. ಆದುದರಿಂದ ಇದನ್ನು ಲ್ಯಾಟಿನ್ ಭಾಷೆಯಲ್ಲಿ 'ಮೆಂತ' ಅಂದರೆ 'ಜಲದೇವಿ' ಎಂದೇ ಕರೆಯುತ್ತಾರೆ. ಈ ಸೊಪ್ಪನ್ನು ಸೂಪ್, ಸಾಸ್, ಪಾನೀಯಗಳು ಮತ್ತು ಚಟ್ನಿಗಳಲ್ಲಿ ಯಥೇಚ್ಛವಾಗಿ ಉಪಯೋಗಿಸಲಾಗುತ್ತದೆ. ಇದರಿಂದ ಪಡೆದ ಪೆಪ್ಪರ್‍ಮಿಂಟ್ ಎಂಬ ಪದಾರ್ಥವನ್ನು ಅನೇಕ ಕೈಗಾರಿಕಾ ಮತ್ತು ವೈದ್ಯಕೀಯ ರಾಸಾಯನಿಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

Quick Facts ಪುದೀನ, Scientific classification ...
ಪುದೀನ
Thumb
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Asterids
ಗಣ:
Lamiales
ಕುಟುಂಬ:
Lamiaceae
ಕುಲ:
Mentha
ಪ್ರಜಾತಿ:
M. arvensis
Binomial name
Mentha arvensis
L.
Close
Thumb

ಉಪಯೋಗಗಳು

  • ಆಹಾರವನ್ನು ಸುಲಭವಾಗಿ ಪಚನ ಮಾಡುತ್ತದೆ.
  • ತಿಂದ ಕೊಬ್ಬನ್ನು ಅರಗಿಸಲು ಸಹಾಯ ಮಾಡುತ್ತದೆ.
  • ಹೆಚ್ಚಿನ ಆಹಾರ ಸೇವನೆಯಿಂದ ಉಂಟಾದ ಹೊಟ್ಟೆ ಉಬ್ಬರವನ್ನು, ಹೊಟ್ಟೆಯಲ್ಲಿ ಸಂಚಿತವಾದ ಗಾಳಿಯನ್ನು ಹೊರಹಾಕಿ, ನಿವಾರಣೆ ಮಾಡುತ್ತದೆ.
  • ಗರ್ಭಿಣಿಯರ ವಾಂತಿ ನಿವಾರಣೆ ಮಾಡುತ್ತದೆ.
  • ಊಟವಾದ ನಂತರ ಈ ಎಲೆಗಳನ್ನು ಅಗಿದು ತಿನ್ನುವುದರಿಂದ ಹಲ್ಲುಗಳಲ್ಲಿ ಹುಳುಕು ಬಾರದಂತೆ ತಡೆಯುತ್ತದೆ.
  • ಹುಳುಕು ಹಲ್ಲಿನ ದುರ್ವಾಸನೆ ತಡೆಯುತ್ತದೆ.[1]
  • ಹೊಟ್ಟೆಯ ಜಂತು ಹುಳುಗಳನ್ನು ತಡೆದು, ಮೂತ್ರವನ್ನು ಹೆಚ್ಚಿಸುತ್ತದೆ ಮತ್ತು ವಿಷದ್ರವ್ಯಗಳನ್ನು ಹೊರಹಾಕಲು ಸಹಾಕರಿಸುತ್ತದೆ.
  • ರಜಸ್ರಾವವಾಗುವ ಮೊದಲು ೪ ದಿನ ಇದರ ಕಷಾಯ ಬಳಸಿದರೆ ಮುಟ್ಟಾದಾಗ ಉಂಟಾಗುವ ನೋವುಗಳು ಕಡಿಮೆಯಾಗುತ್ತವೆ.
  • ಎಲೆಗಳ ರಸವನ್ನು ಈರುಳ್ಳಿ ರಸದೊಂದಿಗೆ ಬೆರೆಸಿ ಕುಡಿದರೆ ವಾಂತಿ ನಿಲ್ಲುತ್ತದೆ.
  • ನೋವು ನಿವಾರಕ ಔಷಧಿಗಳಲ್ಲಿ ಈ ತೈಲವನ್ನು ಬಳಸಲಾಗುತ್ತಿದೆ.
  • ಗಂಟಲು ತುರಿಕೆ ನಿವಾರಣೆಯ ಚಾಕಲೇಟುಗಳಲ್ಲೂ, ಹಲ್ಲುಜ್ಜುವ ಪೇಸ್ಟುಗಳಲ್ಲೂ ಇದು ಬಳಕೆಯಾಗುತ್ತದೆ.
  • ಇದನ್ನು ಅನೇಕ ತಿಂಡಿ ತಿನಿಸುಗಳಲ್ಲಿ ಬಳಸುತ್ತಾರೆ.[2]

ಬೆಳೆಸುವ ವಿಧಾನ

ಇದು ಸಾಮಾನ್ಯವಾಗಿ ಅನೇಕ ವಿಧದ ಮಣ್ಣುಗಳಲ್ಲಿ ಬೆಳೆಯಬಲ್ಲದು. ಆದರೆ ಫಲವತ್ತಾದ ಮರಳು ಗೋಡು ಮಣ್ಣುಗಳು ಬಹುಸೂಕ್ತ ಮತ್ತು ನೀರು ಸುಲಭವಾಗಿ ಇಂಗಿ ಹೋಗಬೇಕು.ಈ ಸಸ್ಯವನ್ನು ೧-೨ ಗಿಣ್ಣುಗಳುಳ್ಳ ಕಾಂಡದ ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ಇದನ್ನು ಸಾಮಾನ್ಯವಾಗಿ ಅಕ್ಟೋಬರ್ ಅಥವಾ ಮಾರ್ಚ್ ತಿಂಗಳಲ್ಲಿ ಪಾತಿಗಳಲ್ಲಿ ೨೨ ಸೆಂ.ಮೀ. ಅಂತರದ ಸಾಲುಗಳಲ್ಲಿ ೧೫ ಸೆಂ.ಮೀ. ಸಸಿ ಅಂತರದಲ್ಲಿ ೩ ಸೆಂ.ಮೀ.ಆಳಕ್ಕೆ ಬಾಗಿದಂತೆ ನಾಟಿ ಮಾಡಬಹುದು. ಸಸಿಗಳಿಗೆ ಚಳಿಗಾಲದಲ್ಲಿ ವಾರಕ್ಕೊಮ್ಮೆಯಂತೆ ಮತ್ತು ಬೇಸಿಗೆಯಲ್ಲಿ ವಾರಕ್ಕೆರಡು ಬಾರಿಯಂತೆ ನೀರು ಹಾಯಿಸಬೇಕು.

ಪ್ರತಿವರ್ಷ ಮಳೆಗಾಲಕ್ಕೆ ಮುಂಚೆ ಮಣ್ಣನ್ನು ಕೆದಕಿ ೧.೨ಮೀ*೧.೨ಮೀ.ಅಳತೆಯ ಪ್ರತಿ ಪಾತಿಗೆ ಒಂದು ಕಿ.ಗ್ರಾಂ. ಮೀನಿನ ಗೊಬ್ಬರ ಅಥವಾ ಒಂದು ಬುಟ್ಟಿ ಕಾಂಪೋಸ್ಟ್ ಗೊಬ್ಬರ ಮತ್ತು ೧೦೦ಗ್ರಾಂ. ಮಿಶ್ರ ರಾಸಾಯನಿಕ ಗೊಬ್ಬರವನ್ನು ಒದಗಿಸಬೇಕು.

ಮಳೆಗಾಲದಲ್ಲಿ ಸಸಿಗಳು ಎಲೆಗಳನ್ನುದುರಿಸಿ, ಮಳೆಗಾಲ ತೀರಿದ ಕೂಡಲೇ ಹೊಸ ಚಿಗುರು ಹೊಮ್ಮಿಸುತ್ತವೆ. ಈ ಎಲೆಗಳನ್ನು ಅಕ್ಟೋಬರ್ ತಿಂಗಳ ಆರಂಭದಲ್ಲಿ ಕೊಯ್ಲು ಮಾಡಬಹುದು. ಸಸ್ಯಗಳನ್ನು ಪ್ರತಿವರ್ಷ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮಳೆಗಾಲದಲ್ಲಿ ವರ್ಗಾಯಿಸಬಹುದು. ಗುಡ್ಡಗಾಡು ಪ್ರದೇಶದಲ್ಲಿ ವಸಂತ ಋತುವಿನಲ್ಲಿ ನಾಟಿ ಮಾಡಬಹುದು. ಒಂದು ಸಾರಿ ನಾಟಿ ಮಾಡಿದ ಗಿಡಗಳಿಂದ ೨-೩ ವರ್ಷಗಳವರಿಗೆ ಎಲೆಗಳು ಸಿಗುತ್ತಾ ಇರುತ್ತವೆ.[3]

ಉಲ್ಲೇಖ

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.