From Wikipedia, the free encyclopedia
ಪಾಲಕ್ (ಸ್ಪಿನಾಸಿಯಾ ಆಲರೇಸಿಯಾ) ಅಮರಾಂಥೇಸಿಯೇ ಕುಟುಂಬದಲ್ಲಿನ ಒಂದು ತಿನ್ನಲರ್ಹವಾದ ಹೂಬಿಡುವ ಸಸ್ಯ. ಅದು ಮಧ್ಯ ಹಾಗೂ ದಕ್ಷಿಣಪಶ್ಚಿಮ ಏಷ್ಯಾಕ್ಕೆ ಸ್ಥಳೀಯವಾಗಿದೆ. ಅದು ೩೦ ಸೆ.ಮಿ. ನಷ್ಟು ಎತ್ತರಕ್ಕೆ ಬೆಳೆಯುವ ಒಂದು ವಾರ್ಷಿಕ ಸಸ್ಯ (ಅಪರೂಪವಾಗಿ ದ್ವೈವಾರ್ಷಿಕ). ಇದು ಸುಮಾರು ೩೦ ಸೆ.ಮೀ ವರೆಗು ಬೆಳೆಯುತ್ತದೆ. ಆರೋಗ್ಯಕರ ಗುಣಗಳಿಗಾಗಿ ಪ್ರಸಿದ್ಧವಾಗಿರುವ ಪಾಲಕ್ ಸೊಪ್ಪನ್ನು ಬೇಯಿಸಿ ತಿನ್ನುವುದರಿಂದ ಸಕ್ಕರೆ ಕಾಯಿಲೆಯನ್ನು ಸುಲಭವಾಗಿ ನಿಯಂತ್ರಿಸಿಕೊಳ್ಳಬಹುದು. ಇದರ ಜೊತೆಗೆ ರಕ್ತದ ಒತ್ತಡ, ಹೃದಯದ ತೊಂದರೆ ಹೀಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಸಹ ಕಂಟ್ರೋಲ್ ಮಾಡಿಕೊಳ್ಳಬಹುದು
ತರಕಾರಿಯಾಗಿ ಆಡುಗೆಯಲ್ಲಿ ಉಪಯೋಗಿಸಲ್ಪಡುತ್ತದೆ. ಪಾಲಕ್ ಸೊಪ್ಪಿನಲ್ಲಿ ಹೇರಳವಾಗಿ ನಾರಿನಂಶ,ಪ್ರೋಟಿನ್ಗಳು ಇವೆ. ಮುಖ್ಯವಾಗಿ ಇದರಲ್ಲಿ ಕಬ್ಬಿಣಾಂಶ ಇದೆ. ಪಾಲಕ್ ಸೊಪ್ಪನ್ನು ವಾರಕ್ಕೆ ೩ ಬಾರಿ ಸೇವಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೇಗೆ ಇದು ಆರೋಗ್ಯಕ್ಕೆ ಒಳ್ಳೆಯದೋ ಹಾಗೆಯೇ ಇದು ತ್ವಚೆಗೆ ಕೂಡ ಒಳ್ಳೆಯದು. ಪಾಲಕ್ ಸೊಪ್ಪಿನಲ್ಲಿರುವ ಅಂಶಗಳು ಸೋರಿಯಾಸಿಸ್, ತುರಿಕೆ ಮತ್ತು ಒಣಚರ್ಮವನ್ನು ತಡೆಯುವುದಕ್ಕೆ ತುಂಬ ಒಳ್ಳೆಯದು. ಇದು ಕೂದಲ ಬೆಳವಣಿಗೆಗೂ ಬಹಳ ಒಳ್ಳೆಯದು. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಬಿ,ಸಿ,ಇ ಪೊಟ್ಯಾಷಿಯಂ,ಕಬ್ಬಿಣ ಮತ್ತು ಒಮೆಗಾ ೩ ಕೊಬ್ಬಿನ ಆಮ್ಲಗಳಿವೆ ಈ ಅಂಶಗಳು, ಕೂದಲ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲು ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಬ್ಬಿಣದ ಅಂಶ ಕೆಂಪು ರಕ್ತಕಣಗಳನ್ನು ಬಲಪಡಿಸಿ ಆಮ್ಲಜನಕವನ್ನು ಪ್ರತಿ ಕೂದಲ ಬುಡಕ್ಕು ತಲುಪಿಸಲು ಸಹಾಯಕಾರಿ ಆಗಿದೆ. ಪಾಲಕ್ ಸೊಪ್ಪಿನ ನಿಯಮಿತ ಸೇವನೆಯಿಂದ ಕೂದಲ ಉದುರುವಿಕೆಯನ್ನು ತಡೆಯಬಹುದು. ಕೂದಲು ಉದುರುವುದಕ್ಕೆ ಮುಖ್ಯ ಕಾರಣವೆಂದರೆ ಕೂದಲ ಬುಡದಲ್ಲಿ ಕಬ್ಬಿಣ ಅಂಶದ ಕೊರತೆಯಿಂದ ಪಾಲಕ್ ಸೊಪ್ಪು ಕಬ್ಬಿಣದ ಅಂಶವನ್ನು ಕೂದಲ ಬುಡಕ್ಕೆ ಒದಗಿಸುವುದರಿಂದ ಕೂದಲು ಉದುರುವುದು ಕ್ರಮೇಣ ಕಡಿಮೆ ಆಗುತ್ತದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಎ ಇರುವುದರಿಂದ ಇವುಗಳು ತ್ವಚೆಯ ಸೆಳೆತ ಮತ್ತು ಕಾಂತಿ ಹೆಚ್ಚಿಸಲು ನೆರವಾಗುತ್ತದೆ, ಹಾಗೆಯೇ ವಿಟಮಿನ್ ಸಿ ಹೊಸ ಜೀವಕೋಶಗಳ ಹುಟ್ಟಿಗೆ ನೆರವಾಗುತ್ತದೆ. ಅಲ್ಲದೆ ಹಳೆಯ ಕಲೆಗಳಿಂದ ಕೂಡಿರುವ ತ್ವಚೆಯ ಭಾಗವನ್ನು ಇದು ತಿಳಿಯಾಗಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಇದ್ದು, ಇದು ಬಿಸಿಲಿನಿಂದ ಕಪ್ಪಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರಲು ನೆರವಾಗುತ್ತದೆ. ಪಾಲಕ್ ಸೊಪ್ಪು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಬಿ ಸೂರ್ಯನ ಕಿರಣಗಳಿರುವ ಹಾನಿಕಾರಕ ಅತಿನೇರಳೆ ಕಿರಣಗಳ ಪ್ರಭಾವದಿಂದ ರಕ್ಷಣೆ ನೀಡುತ್ತದೆ. ಅತಿನೇರಳೆ ಕಿರಣಗಳು ತ್ವಚೆಯನ್ನು ಸುಟ್ಟಂತೆ ಮಾಡುವ ಕ್ಯಾನ್ಸರ್ ಮತ್ತು ವೃದ್ಧಾಪ್ಯದ ಕುರುಹುಗಳು ಬೇಗ ಬರುವಂತೆ ಮಾಡುತ್ತದೆ, ಆದರೆ ಪಾಲಕ್ ಸೊಪ್ಪು ಕ್ಯಾನ್ಸರ್ ಮತ್ತು ವೃದ್ಧಾಪ್ಯ ಬರದಂತೆ ತಡೆಯುತ್ತದೆ.
ಸಕ್ಕರೆ ಕಾಯಿಲೆಯನ್ನು ಪಾಲಕ್ ಸೊಪ್ಪು ಕಂಟ್ರೋಲ್ ಮಾಡುತ್ತದೆ ಎನ್ನುವುದಕ್ಕೆ ಇದು ಕೂಡ ಒಂದು ಕಾರಣ. ಪಾಲಕ್ ಸೊಪ್ಪಿನಲ್ಲಿ ನಾರಿನ ಅಂಶ ಅಪಾರವಾಗಿ ಕಂಡುಬರುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ನಾವು ತಿನ್ನುವ ಆಹಾರದಲ್ಲಿ ಸಿಗುವ ಗ್ಲುಕೋಸ್ ಮತ್ತು ಕಾರ್ಬೊಹೈಡ್ರೇಟ್ ಪ್ರಮಾಣ ನಮ್ಮ ದೇಹಕ್ಕೆ ನಿಧಾನವಾಗಿ ಹೀರಿ ಕೊಳ್ಳುವಂತೆ ಮಾಡುತ್ತದೆ.
ಪಾಲಕ್ ಸೊಪ್ಪಿನಲ್ಲಿ ಅಪಾರ ಪ್ರಮಾಣದ ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಅಂಶಗಳು ಇರುವುದರಿಂದ ಇವು ನಮ್ಮ ದೇಹದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಲು ನೆರವಾಗುತ್ತವೆ. ಬಹು ಮುಖ್ಯವಾಗಿ ಉರಿಯುತದ ವಿರುದ್ಧ ಹೋರಾಡುವ ಈ ಆಂಟಿ ಆಕ್ಸಿಡೆಂಟ್ ಅಂಶಗಳು ಸಕ್ಕರೆ ಕಾಯಿಲೆ ಇರುವವರಿಗೆ ಉತ್ತಮ ಎಂದು ತಿಳಿಯಲಾಗಿದೆ.[1]
ನಮ್ಮ ದೇಹದ ಇನ್ಸುಲಿನ್ ಸೂಕ್ಷ್ಮತೆ ಹಾಗೂ ಗ್ಲುಕೋಸ್ ನಿಯಂತ್ರಣದಲ್ಲಿ ಸಹಾಯ ಮಾಡುವ ಮೆಗ್ನೀಷಿಯಮ್ ಪಾಲಕ್ ಸೊಪ್ಪಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಕ್ಕರೆ ಕಾಯಿಲೆ ಇರುವವರು ಬೇಯಿಸಿದ ಪಾಲಕ್ ಸೊಪ್ಪನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ತುಂಬಾ ಒಳ್ಳೆಯದು.
ಪಾಲಕ್ ಸೊಪ್ಪನ್ನು ಆಗಾಗ ಬೇಯಿಸಿಕೊಂಡು ತಿನ್ನುವ ಅಭ್ಯಾಸ ಇಟ್ಟುಕೊಂಡರೆ ನಮ್ಮ ದೇಹಕ್ಕೆ ಪೊಟ್ಯಾಶಿಯಂ ಸಿಗುತ್ತಾ ಹೋಗುತ್ತದೆ. ಇದು ದೇಹದಲ್ಲಿ ಸೋಡಿಯಂ ಪ್ರಭಾವವನ್ನು ಕಡಿಮೆ ಮಾಡಿ ನಮ್ಮ ಹೃದಯ ಹಾಗೂ ಹೃದಯ ಕಾಯಿಲೆಗಳನ್ನು ಕಂಟ್ರೋಲ್ ಮಾಡುತ್ತದೆ. ಇದರಿಂದ ಹೃದಯಕ್ಕೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳು ಹೆಚ್ಚಾಗಿ ಕಂಡುಬರುವುದಿಲ್ಲ.[2]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.