ಪರ್ಮಾನೊಸಲ್ಫ್ಯೂರಿಕ್ ಆಮ್ಲ
From Wikipedia, the free encyclopedia
From Wikipedia, the free encyclopedia
ಪರ್ಮಾನೊಸಲ್ಫ್ಯೂರಿಕ್ ಆಮ್ಲವು (H2SO5) ಒಂದು ಆಮ್ಲ. ಈ ಆಮ್ಲವನ್ನು ಪತ್ತೆಹಚ್ಚಿದವನ ಗೌರವಾರ್ಥ ಇದಕ್ಕೆ ಕೇರೋ (1898) ಆಮ್ಲವೆಂದು ಹೆಸರಿಸಿದ್ದಾರೆ.[1]
ಪೊಟ್ಯಾಸಿಯಂ ಪರ್ಸಲ್ಫೇಟನ್ನು 40% ಸಲ್ಫ್ಯೂರಿಕ್ ಆಮ್ಲದೊಂದಿಗೆ ಅರೆದು ಒಂದು ಗಂಟೆಯ ಕಾಲ ಶೈತ್ಯ ಮಿಶ್ರಣದಲ್ಲಿಟ್ಟು ಅನಂತರ ಕ್ರಿಯಾಮಿಶ್ರಣವನ್ನು ಬರ್ಫದ ಮೇಲೆ ಸುರಿದರೆ ಕೇರೋ ಆಮ್ಲ ರೂಪುಗೊಳ್ಳವುದು. ಕ್ಲೋರೋಸಲ್ಫಾನಿಕ್ ಆಮ್ಲ ಮತ್ತು ಹೈಡ್ರೊಜನ್ ಪೆರಾಕ್ಸೈಡುಗಳ ವರ್ತನೆಯಿಂದ ಇದನ್ನು ಸಂಶ್ಲೇಷಿಸಬಹುದು.[2]
ಪರ್ಮಾನೋಸಲ್ಫ್ಯೂರಿಕ್ ಆಮ್ಲ ಸಹ ಹರಳು ರೂಪದ ಬಿಳಿಯ ಘನ. ಇದರ ದ್ರವನಬಿಂದು 420 ಸೆಂ. ಈ ಘನ ಸಾಕಷ್ಟು ಸ್ಥಿರವಾಗಿರುವುದು. ಇದು ಪರ್ಡೈಸಲ್ಫ್ಯೂರಿಕ್ ಆಮ್ಲಕ್ಕಿಂತ ಪ್ರಬಲ ಉತ್ಕರ್ಷಣಕಾರಿ. ಪೊಟ್ಯಾಸಿಯಂ ಅಯೊಡೈಡಿನ ದ್ರಾವಣದಿಂದ ತತ್ಕ್ಷಣ ಅಯೊಡೀನನ್ನು ಬಿಡುಗಡೆ ಮಾಡುವುದು ಇದಕ್ಕೆ ನಿದರ್ಶನ. ಇದರ ಸಂಪರ್ಕ ಪಡೆದ ಹತ್ತಿ ಮತ್ತು ಉಣ್ಣೆಗಳು ಕೂಡಲೇ ಕಾರ್ಬನೀಕರಿಸುತ್ತವೆ. ಅನಿಲೀನು ನೈಟ್ರೋಬೆನ್ಸೀನಾಗುವುದು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.