From Wikipedia, the free encyclopedia
ನೀಲಿ-ಕೆನ್ನೆಯ ಕಳ್ಳಿಪೀರ (ಮೆರೊಪ್ಸ್ ಪರ್ಸಿಕಸ್)ವು ಬೀ-ಈಟರ್ ಕುಟುಂಬ ಮೆರೊಪಿಡೆ (Meropidae)ಗೆ ಸೇರಿದ ಹಕ್ಕಿಯಾಗಿದೆ. ಮೆರೊಪ್ಸ್(Merops) ಕುಲದ ಹೆಸರಿನ ಅರ್ಥ ಪ್ರಾಚೀನ ಗ್ರೀಕ್ನಲ್ಲಿ "ಬೀ-ಈಟರ್" ಎಂದಾಗಿದೆ. [2] ಇದು ಉತ್ತರ ಆಫ್ರಿಕಾ ಮತ್ತು, ಪೂರ್ವ ಟರ್ಕಿಯಿಂದ ಕಝಾಕಿಸ್ತಾನ್ ಮತ್ತು ಭಾರತದಲ್ಲಿ ಸಂತಾನ ಬೆಳೆಸುತ್ತದೆ, ಇದು ಸಾಮಾನ್ಯವಾಗಿ ಪ್ರಬಲವಾಗಿ ವಲಸೆಗಾರ, ಮತ್ತು ಉಷ್ಣವಲಯದ ಆಫ್ರಿಕಾದಲ್ಲಿ ಚಳಿಗಾಲವನ್ನು ಕಳೆಯುತ್ತದೆ.ನೀಲಿ-ಕೆನ್ನೆಯ ಕಳ್ಳಿಪೀರವು ಇಟಲಿ ಮತ್ತು ಗ್ರೀಸ್ ನಲ್ಲಿ ವೆಗ್ರಂಟ್ (Vagrant) ಆಗಿ ಕಂಡುಬರುತ್ತದೆ.
ಇತರ ಕಳ್ಳಿಪೀರಳಂತೆ, ನೀಲಿ-ಕೆನ್ನೆಯ ಕಳ್ಳಿಪೀರವು ಸಮೃದ್ಧವಾದ ಬಣ್ಣವನ್ನು ಹೊಂದಿದ್ದು ತೆಳುವಾದ ಹಕ್ಕಿಯಾಗಿದೆ. ಇದು ಪ್ರಧಾನವಾಗಿ ಹಸಿರು ಬಣ್ಣವನ್ನು ಹೊಂದಿದ್ದು, ಮುಖವು ಕಪ್ಪು ಕಣ್ಣಿನ ಪಟ್ಟಿಯೊಂದಿಗೆ ನೀಲಿ ಕೆನ್ನೆಯನ್ನು ಹೊಂದಿದ್ದರೆ ಗಂಟಲು ಹಳದಿ ಮತ್ತು ಕಂದು ಬಣ್ಣದಿಂದಾಗಿದೆ. ಕೊಕ್ಕು ಕಪ್ಪಾಗಿದೆ. ಇದರ ಉದ್ದ 31 ಸೆಂ.ಮೀ (12 ಇಂಚು)ನಷ್ಟಿದ್ದು, ಎರಡು ಉದ್ದದ ಕೇಂದ್ರ ಬಾಲ ಗರಿಗಳು ಇನ್ನೊಂದು 7 ಸೆಂ,ಮೀ (2.8 ಇಂಚು) ನಷ್ಟು ಉದ್ದವನ್ನು ಹೆಚ್ಚಿಸುತ್ತದೆ. ಲಿಂಗಗಳು ಹೆಚ್ಚಾಗಿ ಒಂದೇ ಆಗಿರುತ್ತವೆ ಆದರೆ ಹೆಣ್ಣಿನ ಟೇಲ್-ಸ್ಟ್ರೀಮರ್ಸ್ (Tail-streamers) ಚಿಕ್ಕದಾಗಿರುತ್ತದೆ.
ಇದು ಉಪ-ಉಷ್ಣವಲಯದ ಮತ್ತು ಅರೆ-ಮರುಭೂಮಿಯಲ್ಲಿ ಕೆಲವು ಮರಗಳು ಇರುವ ಪ್ರದೇಶದಲ್ಲಿ ಸಂತಾನ ಉತ್ಪತ್ತಿ ಮಾಡುತ್ತದೆ. ಇದು ತೆರೆದ ಕಾಡಿನ ಪ್ರದೇಶ ಅಥವಾ ಹುಲ್ಲುಗಾವಲುಗಳಿಗೆ ಚಳಿಗಾಲ ವಲಸೆ ಹೋಗುತ್ತದೆ. ಹೆಸರೇ ಸೂಚಿಸುವಂತೆ, ಕಳ್ಳಿಪೀರ(ಬಿ-ಈಟರ್ಸ್)ಗಳು ಪ್ರಧಾನವಾಗಿ ಕೀಟಗಳನ್ನು ತಿನ್ನುತ್ತವೆ, ವಿಶೇಷವಾಗಿ ಜೇನುನೊಣಗಳು, ಕಣಜಗಳು ಮತ್ತು ಹಾರ್ನೆಟ್ಗಳು,. ಹೇಗಾದರೂ, ಈವು ಯಾವುದೇ ಇತರ ಆಹಾರ ಪದಾರ್ಥಗಳಿಗಿಂತ ಹೆಚ್ಚು ಡ್ರಾಗನ್ಫ್ಲೈಗಳನ್ನು ತಿನ್ನುತ್ತವೆ. ಇದು ಭೇಟೆಯ ಸಮಯದಲ್ಲಿ ದೂರವಾಣಿ ತಂತಿಗಳು ಲಭ್ಯವಿದ್ದರೆ, ಅದಕ್ಕೆ ಆದ್ಯತೆ ಕೊಡುತ್ತದೆ.
ನೀಲಿ-ಕೆನ್ನೆಯ ಕಳ್ಳಿಪೀರವು ಒಂಟಿಯಾಗಿ, ಇಲ್ಲವಾದರೆ ಚಿಕ್ಕ ಚಿಕ್ಕ ವಸಾಹತುಗಳಲ್ಲಿ (ಸುಮಾರು ೧೦ ಹಕ್ಕಿಗಳ ಕುಟುಂಬ) ಗೂಡನ್ನು ನಿರ್ಮಿಸುತ್ತದೆ, ಕೆಲವೊಮ್ಮೆ ಹಳದಿಗಲ್ಲದ ಕಳ್ಳಿಪೀರಗಳೊಡನೆ ಗೂಡು ಮಾಡಬಹುದು. ಈ ಗೂಡುಗಳು ಸ್ಯಾಂಡಿ ಬ್ಯಾಂಕುಗಳು (Sandy-banks),ಅಣೆಕಟ್ಟುಗಳು, ಕೆಳ ಬಂಡೆಗಳು ಮತ್ತು ಕ್ಯಾಸ್ಪಿಯನ್ ಸಮುದ್ರದ ದಡದಲ್ಲಿ ನೆಲೆಗೊಂಡಿವೆ. ಇದು 1 ರಿಂದ 3 ಮೀ (3.3-9.8 ಅಡಿ) ಉದ್ದದ ಸುದೀರ್ಘ ಸುರಂಗವನ್ನು ಮಾಡುತ್ತದೆ ಮತ್ತು ಇದರಲ್ಲಿ ೪-೮ (ಸಾಮಾನ್ಯವಾಗಿ ಆರು ಅಥವಾ ಏಳು) ಗೋಳಾಕಾರದ ಬಿಳಿ ಮೊಟ್ಟೆಗಳನ್ನು ಹಾಕುತ್ತದೆ. ಅಲ್ಲದೆ ಗಂಡು ಮತ್ತು ಹೆಣ್ಣು ಇಬ್ಬರೂ ಮೊಟ್ಟೆಗಳ ಕಾಳಜಿ ವಹಿಸುತ್ತಾರೆ, ಆದರೂ ಹೆಣ್ಣು ಮಾತ್ರ ರಾತ್ರಿಯಲ್ಲಿ ಅವುಗಳಿಗೆ ಕಾವು ಕೊಡುತ್ತದೆ. ಹಾಗು ಕಾವು 23-26 ದಿನಗಳನ್ನು ತೆಗೆದುಕೊಳ್ಳುತ್ತದೆ.
ಎರಡು ಉಪವರ್ಗಗಳನ್ನು ಗುರುತಿಸಲಾಗಿದೆ: ೧. ಮೆರೊಪ್ಸ್ ಪರ್ಸಿಕಸ್ ಪರ್ಸಿಕಸ್ (Merops persicus persicus) : ಏಷ್ಯಾದಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ ಮತ್ತು, ಪೂರ್ವ ಮತ್ತು ದಕ್ಷಿಣ ಆಫ್ರಿಕಾಕ್ಕೆ ಚಳಿಗಾಲದ ವಲಸೆಗಾರ. ೨. ಮೆರೊಪ್ಸ್ ಪರ್ಸಿಕಸ್ ಕ್ರೈಸೊಸೆರ್ಕಸ್ ( Merops persicus chrysocercus ) : ಉತ್ತರ ಆಫ್ರಿಕಾದಲ್ಲಿ ಸಂತಾನೋತ್ಪತ್ತಿ ಮಾಡಿದರೆ,ಪಶ್ಚಿಮ ಆಫ್ರಿಕಾಕ್ಕೆ ಚಳಿಗಾಲದ ವಲಸೆಗಾರ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.