ನಿಂಬೆಯು ಸದಾ ಹಸಿರಾಗಿರುವ ಒಂದು ಚಿಕ್ಕ ಮರ, ರೂಟೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಫಲವೃಕ್ಷ (ಲೈಮ್). ಇದಕ್ಕೆ ನಿಂಬೆಗಿಡ ಎಂದು ಕೂಡ ಕರೆಯಲಾಗುತ್ತದೆ.

Quick Facts ಲಿಂಬೆ, Scientific classification ...
ಲಿಂಬೆ
Thumb
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
ಆವೃತ ಬೀಜಿಗಳು
(ಶ್ರೇಣಿಯಿಲ್ಲದ್ದು):
ಯೂಡಿಕೋಟ್ಸ್
(ಶ್ರೇಣಿಯಿಲ್ಲದ್ದು):
ರೋಸಿಡ್ಸ್
ಗಣ:
Sapindales
ಕುಟುಂಬ:
Rutaceae
ಕುಲ:
ಸಿಟ್ರಸ್
ಪ್ರಜಾತಿ:
C. × limon
Binomial name
Citrus × limon, often given as C. limon
(L.) Burm.f.
Close

ಬಾಳೆ ಮತ್ತು ಮಾವಿನ ನಂತರ ಅತಿ ಹೆಚ್ಚು ಬೇಡಿಕೆ ಇರುವ ಹಣ್ಣಿನ ಬೆಳೆಯೇ ನಿಂಬೆ. ತೋಟಗಾರಿಕೆ ಬೆಳೆಯಾಗಿರುವ ಇದು ಕಡಿಮೆ ಫಲವತ್ತತೆಯ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವ ಗುಣ ಹೊಂದಿದೆ. ಇದು ವಿಟಾಮಿನ್ ಸಿ ಅನ್ನು ಯಥೇಚ್ಛವಾಗಿ ಹೊಂದಿದೆ. ಇದರ ವೈಜ್ಞಾನಿಕ/ಶಾಸ್ತ್ರೀಯ ಹೆಸರು ಸಿಟ್ರಸ್ ಆರಂಟಿಫೋಲಿಯ ( Citrus aurantifolia).

ವಿವರಣೆ

ಇದು ಸುಮಾರು 5 ಮೀ. ಎತ್ತರಕ್ಕೆ ತುಂಬ ಕವಲೊಡೆದು ಬೆಳೆಯುವ ಸಣ್ಣ ಗಾತ್ರದ ಮರ. ಕಾಂಡದುದ್ದಕ್ಕೂ ಚಿಕ್ಕ ಚಿಕ್ಕ ಮುಳ್ಳುಗಳುಂಟು. ಸರಳ, ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿದೆ. ಎಲೆತೊಟ್ಟಿನ ಆಚೀಚೆ ಸಣ್ಣರೆಕ್ಕೆಯಂಥ ರಚನೆಗಳುಂಟು. ಎಲೆಗಳಲ್ಲಿ ತೈಲಗ್ರಂಥಿಗಳಿವೆ. ಇವುಗಳಲ್ಲಿ ಉತ್ಪತ್ತಿಯಾಗುವ ತೈಲದಿಂದಾಗಿ ಎಲೆಗಳಿಗೆ ವಾಸನೆಯಿದೆ. ಹೂಗೊಂಚಲುಗಳು ಎಲೆಗಳ ಕಂಕುಳಲ್ಲಿ ಸ್ಥಿತವಾಗಿವೆ. ಒಂದೊಂದರಲ್ಲೂ 1-7 ಹೂಗಳುಂಟು. ಹೂಗಳ ಬಣ್ಣ ಬಿಳಿ. ಪ್ರತಿ ಹೂವಿನಲ್ಲಿ 5 ದಳಗಳು, 20-25 ಕೇಸರಗಳು, 9-11 ಕೋಣೆಗಳಿಂದ ಕೂಡಿದ ಅಂಡಾಶಯ ಉಂಟು. ಫಲ ಹೆಸ್ಪರಿಡಿಯಮ್ ಎಂಬ ಬಗೆಯದು. ಗುಂಡಗೆ ಇಲ್ಲವೆ ಅಂಡಾಕಾರವಾಗಿದೆ. ಹಣ್ಣಿನ ಬಣ್ಣ ಹಳದಿ. ಸಿಪ್ಪೆ ತೆಳು; ತಿರುಳಿಗೆ ಬಲವಾಗಿ ಅಂಟಿಕೊಂಡಿದೆ. ಒಳಗೆ ಅನೇಕ ತೊಳೆಗಳನ್ನು ಬಿಡಿಸಲು ಬಾರದು. ಹಣ್ಣಿನ ರಸದಲ್ಲಿ ಇತರ ಜಂಬೀರ ಫಲಗಳ ರಸದಲ್ಲಿರುವಂತೆಯೇ ಅಧಿಕ ಮೊತ್ತದ ಸಿಟ್ರಿಕ್ ಆಮ್ಲ ಹಾಗೂ ಸಿ. ವೈಟಮಿನ್ನುಗಳಿವೆ.

ಇದರ ರುಚಿ ತುಂಬ ಹುಳಿಯಾಗಿದ್ದು, ಸ್ವಲ್ಪ ಒಗರು ಒಗರಾಗಿರುತ್ತದೆ.

ಇದು ಆಯುರ್ವೈದಿಕ ಔಷಧೀಯ ಗುಣಗಳನ್ನು ಹೊಂದಿದೆ.

ವ್ಯಾಪ್ತಿ ಮತ್ತು ಮೂಲ

ನಿಂಬೆ ಉಷ್ಣವಲಯದ ದೇಶಗಳಲ್ಲೆಲ್ಲ ಕಾಣದೊರೆಯುತ್ತದೆ. ಇದು ಮೂಲತಃ ಏಷ್ಯಾದ ಮೂಲದ್ದಾಗಿದೆ. ಇದು ಪೂರ್ವ ಏಷ್ಯದ ದ್ವೀಪಸಮೂಹಗಳ ಮೂಲ ನಿವಾಸಿಯೆಂದೂ ಅಲ್ಲಿಂದ ಇದನ್ನು ಏಷ್ಯದ ಮುಖ್ಯ ಭೂಭಾಗಕ್ಕೆ ಕೊಂಡೊಯ್ಯಲಾಯಿತೆಂದೂ ಸ್ವಿಂಗಲ್ ಎಂಬಾತ ಹೇಳಿದರೆ ಉತ್ತರ ಭಾರತದಲ್ಲಿ ಕಾಡುಗಿಡವಾಗಿ ಬೆಳೆಯುತ್ತಿರುವುದಾಗಿ ಇದರ ತವರು ಭಾರತವೇ ಇರಬೇಕೆಂದು ಇನ್ನು ಕೆಲವರು ಅಭಿಪ್ರಾಯಪಡುತ್ತಾರೆ. ಇದನ್ನು 13ನೆಯ ಶತಮಾನದಲ್ಲಿ ಯೂರೋಪಿಗೆ ತೆಗೆದುಕೊಂಡು ಹೋಗಿ ಬೆಳೆಸಲಾಯಿತೆನ್ನಲಾಗಿದೆ. ಸ್ಪ್ಯಾನಿಷರ ಮೂಲಕ ಇದು ಅಮೆರಿಕವನ್ನು ಸೇರಿತು. ಇಂದು ಮೆಕ್ಸಿಕೊ, ಈಜಿಪ್ಟ್, ವೆಸ್ಟ್ ಇಂಡೀಸುಗಳು ಇದರ ಕೃಷಿಗೆ ಹೆಸರಾಗಿವೆ.

ಬೆಳೆಯುವ ವಿಧಾನ

ಮೊದಲು 2x2 ಉದ್ದಗಲ ಮತ್ತು ಅಷ್ಟೇ ಆಳದ ಗುಂಡಿ ತೊಡಬೇಕು. ಗಿಡದಿಂದ ಗಿಡಕ್ಕೆ 18 ಅಡಿ ಅಂತರ ಇರಬೇಕು. ಗುಂಡಿ ತೋಡಿ 15 ದಿನ ಬಿಸಿಲಿಗೆ ಒಣಗಲು ಬಿಡಬೇಕು. ಬಳಿಕ ಗುಂಡಿ ತೋಡಿದ ಮೇಲ್ಭಾಗದ ಮಣ್ಣನ್ನು ಗುಂಡಿಗೆ ಹಾಕಬೇಕು. ಅದಕ್ಕೆ ಕಾಂಪೋಸ್ಟ್, ಎರೇಹುಳು ಗೊಬ್ಬರ ಕೊಡಬೇಕು. ನಂತರ ಗುಂಡಿಯಲ್ಲಿ ಗಿಡ ನೆಡಬೇಕು. ಎಕರೆಗೆ ನೆಡಲು 100 ಗಿಡ ಬೇಕಾಗುತ್ತದೆ. ಬಳಿಕ ನಿಯಮಿತವಾಗಿ ನೀರು ಹಾಯಿಸಬೇಕು. ಇದರ ಮಧ್ಯೆ ಅಂತರ ಬೇಸಾಯವಾಗಿ ವಿವಿಧ ಬೆಳೆ ಬೆಳೆಯಬಹುದು. ನಿಂಬೆ ಗಿಡ ನೆಟ್ಟ 6 ವರ್ಷದವರೆಗೆ ಅಂತರ ಬೇಸಾಯ ಮಾಡಬಹುದು. ನಿಂಬೆ ಗಿಡ ನೆಟ್ಟ 4ನೇ ವರ್ಷದಿಂದ ಹಣ್ಣು ಬಿಡಲು ಶುರು ಮಾಡುತ್ತದೆ. ಚೆನ್ನಾಗಿ ನಿರ್ವಹಣೆ ಮಾಡಿದರೆ ಗಿಡದಿಂದ ವರ್ಷಕ್ಕೆ 2 ಸಾವಿರದಿಂದ 3 ಸಾವಿರದವರೆಗೆ ನಿಂಬೆ ಹಣ್ಣು ಸಿಗುತ್ತದೆ. ಜೂನ್‌ದಿಂದ ಆಗಸ್ಟ್‌ವರೆಗೆ ನಿಂಬೆ ಗಿಡ ನಾಟಿ ಮಾಡಲು ಪ್ರಶ್ಶಸ್ತ. ಒಂದು ನಿಂಬೆ ಗಿಡ ನೆಟ್ಟರೆ ಕನಿಷ್ಠ 50 ವರ್ಷದವರೆಗೆ ಇಳುವರಿ ಪಡೆಯಬಹುದು.

ಇದರಲ್ಲಿ ಪ್ರಮುಖವಾಗಿ ಕಾಗ್ಜಿ ಲೈಮ್ ಮತ್ತು ತಾಹೇತಿ ನಿಂಬೆ ಮತ್ತು ಸ್ಥಳೀಯ ತಳಿಗಳು[1]

ನಿಂಬೆಯನ್ನು ಬೀಜಗಳಿಂದಾಗಲೀ ಕಣ್ಣು ಕಸಿ ಇಲ್ಲವೆ ಗೂಟ ವಿಧಾನದಿಂದಾಗಲೀ ವೃದ್ಧಿಸಬಹುದು. ಬೀಜಗಳಿಂದ ಬೆಳೆಸಿದ ಗಿಡಗಳು ಹೆಚ್ಚು ಫಲ ಕೊಡುವುದಿಲ್ಲ. ನಿಂಬೆಗಿಡಗಳನ್ನು ಗಿಡದಿಂದ ಗಿಡಕ್ಕೆ 3-4 ಮೀ ಅಂತರವಿರುವಂತೆ ಬೆಳೆಸಲಾಗುತ್ತದೆ. 3ಮೀ ಅಂತರ ಬಿಟ್ಟರೆ ಎಕರೆಗೆ 300 ಸಸಿಗಳೂ 4 ಮೀ ಅಂತರ ಬಿಟ್ಟರೆ 190 ಸಸಿಗಳೂ ಇದ್ದಂತಾಗುವುವು. ನಿಂಬೆ ಬೆಳೆಸುವ ನೆಲದಲ್ಲಿ ಎಲೆಗೊಬ್ಬರವೂ, ಕಬ್ಬಿಣ, ತಾಮ್ರ ಮ್ಯಾಂಗನೀಸ್, ಜಿಂಕ್ ಹಾಗೂ ಮೆಗ್ನೀಷಿಯಮ್ ಖನಿಜಗಳೂ ಯಥೇಚ್ಛವಾಗಿರಬೇಕು.

ನಿಂಬೆಯಲ್ಲಿ ಮೆಕ್ಸಿಕನ್ (ವೆಸ್ಟ್ ಇಂಡಿಯನ್) ಹಾಗೂ ತಾಹಿತಿ (ಪರ್ಶಿಯನ್) ಎಂಬ ಮುಖ್ಯ ತಳಿಗಳುಂಟು. ತಾಹಿತಿ ತಳಿಯ ಹಣ್ಣು ಬೀಜರಹಿತ. ಭಾರತದಲ್ಲಿ ಪ್ರಸಿದ್ಧ ತಳಿಗಳಾವುವೂ ಇಲ್ಲ. ಅಸ್ಸಾಮಿನಲ್ಲಿ ಬೆಳೆಯುವ ಅಭ್ಯಾಪುರಿ ಎಂಬುದು ಉತ್ತಮ ಬಗೆಯದೆನಿಸಿದೆ.

ಉಪಯೋಗಗಳು

ನಿಂಬೆಯನ್ನು ಅದರ ತಾಜಾ ಹಣ್ಣಿಗಾಗಿ ಬೆಳೆಸುವುದೇ ವಾಡಿಕೆ. ಇದರ ರಸದಿಂದ ಷರಬತ್ತು ತಯಾರಿಸುವುದಲ್ಲದೆ ಮಾರ್ಮಲೆಂಡ್, ಕಾರ್ಡಿಯಲ್ ಮುಂತಾದವನ್ನೂ ತಯಾರಿಸುವರು. ನಿಂಬೆಯರಸವನ್ನು ಬಟ್ಟಿಯಿಳಿಸಿ ತೈಲವನ್ನು ತೆಗೆವುದಿದೆ. ಸಿಪ್ಪೆಯಿಂದಲೂ ಎಣ್ಣೆಯನ್ನು ಪಡೆಯಬಹುದು. ಈ ಎಣ್ಣೆಯನ್ನು ಪಾನೀಯಗಳಿಗೆ ವಾಸನೆ ಕಟ್ಟಲೂ ಸಿಹಿತಿಂಡಿಗಳ ತಯಾರಿಕೆಯಲ್ಲೂ ಬಳಸುವುದಿದೆ.

ಈ ಗೋಲಾಕಾರದ ಹಳದಿ ಬಣ್ಣದ ಹಣ್ಣುಗಳನ್ನು ಪ್ರಮುಖವಾಗಿ ತಂಪುಪಾನೀಯವಾಗಿ ಬಳಸಲಾಗುವುದು ಹಾಗೂ ಅಡಿಗೆಗೂ ಕೂಡ ಹೇರಳವಾಗಿ ಬಳಸುತ್ತಾರೆ.

ನಿಂಬೆ ಹಣ್ಣಿನ ಆರೋಗ್ಯ ಉಪಯೋಗಗಳು

ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ

ಹುಳಿ ರುಚಿಯನ್ನು ಹೊಂದಿರುವ ನಿಂಬೆ ಹಣ್ಣು ನಮ್ಮ ಹೃದಯಕ್ಕೆ ಆರೋಗ್ಯವನ್ನು ಕಾಪಾಡುತ್ತದೆ. ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ಆರೋಗ್ಯವಾಗಿಡುವಲ್ಲಿ ನಿಂಬೆ ಪ್ರಮುಖ ಪಾತ್ರ ವಹಿಸುತ್ತದೆ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಹೃದಯ ಸಂಬಂಧಿ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ನಿರ್ವಹಣೆ

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಾದ್ರೆ ಇದಕ್ಕೆ ನಿಂಬೆ ಹಣ್ಣು ಅತ್ಯುತ್ತಮ ಅಸ್ತ್ರವಾಗಿ ಕೆಲಸ ಮಾಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುವ ಗುಣಲಕ್ಷಣಗಳಿಂದಾಗಿ ದೇಹದ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ನಿಂಬೆಹಣ್ಣನ್ನು ಆಹಾರಕ್ಕೆ ಸೇರಿಸುವುದರಿಂದ ಹೊಟ್ಟೆ ತುಂಬಿದ ತೃಪ್ತಿ ಸಿಗುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕ ಹೆಚ್ಚಾಗುಗುವುದನ್ನು ತಡೆಯುತ್ತದೆ.

ಕಿಡ್ನಿ ಸ್ಟೋನ್ ತಡೆಯುತ್ತದೆ

ನಿಂಬೆರಸವನ್ನು ಪ್ರತಿನಿತ್ಯ ಕುಡಿದರೆ ಕಿಡ್ನಿ ಸ್ಟೋನ್ ಆಗುವ ಸಾಧ್ಯತೆ ಇರುವುದಿಲ್ಲ. ನಿಂಬೆಹಣ್ಣನ್ನು ಸೇವಿಸುವುದರಿಂದ ನಮ್ಮ ಮೂತ್ರದ ಪ್ರಮಾಣ ಮತ್ತು ಪಿಹೆಚ್ ಹೆಚ್ಚಾಗುತ್ತದೆ. ಅಲ್ಲದೇ ಕಿಡ್ನಿ ಸ್ಟೋನ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ನಿಂಬೆ ರಸವು ಕೇವಲ ರುಚಿಕರವಾದ ಪಾನೀಯವಲ್ಲ. ಆದರೆ ನಿಮ್ಮ ಮೂತ್ರಪಿಂಡಗಳನ್ನು ರಕ್ಷಿಸುವ ಅಸ್ತ್ರವಾಗಿದೆ ಎಂಬುವುದನ್ನು ತಿಳಿದುಕೊಳ್ಳಿ.ವುದನ್ನು ತಡೆಯುತ್ತದೆ ಮತ್ತು ತೂಕ ಹೆಚ್ಚಾಗುಗುವುದನ್ನು ತಡೆಯುತ್ತದೆ.

ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ

ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನಿಂಬೆ ರಸ ನೀಡಿ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಸಸ್ಯ ಮೂಲಗಳಿಂದ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ರಕ್ತಕ್ಕೆ ಸಂಬಂಧಿಸಿದ ಸಾಮಾನ್ಯ ಅಸ್ವಸ್ಥತೆಗಳನ್ನು ಗುಣಪಡಿಸಲು ಇದು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ ಮತ್ತು ಮಲಬದ್ಧತೆ

ಜೀರ್ಣಕ್ರಿಯೆಗೆ ಸೂಪರ್ ಹೀರೋ ಆಗಿ ಕಾರ್ಯನಿರ್ವಹಿಸುವ ನಿಂಬೆ ನಮ್ಮ ಲಾಲಾರಸ ಮತ್ತು ಗ್ಯಾಸ್ಟ್ರಿಕ್ ರಸವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ. ಇದು ಮಲಬದ್ಧತೆಯ ಸಮಸ್ಯೆಯನ್ನು ಪರಿಹರಿಸುತ್ತದೆ. ನಿಮ್ಮ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಲು ನೀವು ಬಯಸಿದರೆ, ನಿಯಮಿತವಾಗಿ ನಿಂಬೆ ಸೇವಿಸಬಹುದು.[2]

ಉತ್ಪಾದನೆ

೨೦೧೦ರಲ್ಲಿ ಭಾರತವು ನಿಂಬೆಯ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿತ್ತು.

Thumb
2012 lemon producer countries
More information ಸ್ಥಾನ, ದೇಶ ...
ಪ್ರಪಂಚ ಹೆಚ್ಚು ಲಿಂಬೆ ಬೆಳೆಯುವ ದೇಶಗಳು -೨೦೧೧
(ಮಿಲಿಯ ಮೆಟ್ರಿಕ್ ಟನ್ನುಗಳಲ್ಲಿ)
ಸ್ಥಾನ ದೇಶ ಬೆಳೆ
(ಟನ್ನುಗಳಲ್ಲಿ)
1 ಚೀನಾ2,318,833
2 ಮೆಕ್ಸಿಕೋ2,147,740
3 ಭಾರತ2,108,000
4 ಅರ್ಜೆಂಟೀನ1,228,656
5 Brazil1,126,736
6 ಅಮೇರಿಕ ಸಂಯುಕ್ತ ಸಂಸ್ಥಾನ834,610
7 ಟರ್ಕಿ790,211
8 Spain773,620
9 ಇರಾನ್560,052
10 ಇಟಲಿ483,088
ಪ್ರಪಂಚ13,887,894
Source: UN Food & Agriculture Organization [3]
Close

ಇವುಗಳನ್ನೂ ನೋಡಿ

Quick Facts
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
Close

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.