![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/85/Namchi_Monastery7.jpg/640px-Namchi_Monastery7.jpg&w=640&q=50)
ನಾಮ್ಚಿ
From Wikipedia, the free encyclopedia
ನಾಮ್ಚಿ ಅಥವಾ ನಾಮ್ಟ್ಸೆ[1] ಭಾರತದ ಸಿಕ್ಕಿಂ ರಾಜ್ಯದ ದಕ್ಷಿಣ ಸಿಕ್ಕಿಂ ಜಿಲ್ಲೆಯ ಕೇಂದ್ರಕಾರ್ಯಸ್ಥಾನವಾಗಿದೆ. ಸಿಕ್ಕಿಮೀಸ್ ಭಾಷೆಯಲ್ಲಿ ನಾಮ್ಚಿ ಹೆಸರಿನ ಅರ್ಥ ಗಗನ (ನಾಮ್) ಎತ್ತರ (ಚಿ).[1]
![Thumb image](http://upload.wikimedia.org/wikipedia/commons/thumb/8/85/Namchi_Monastery7.jpg/640px-Namchi_Monastery7.jpg)
ಇದು ಸ್ಟ್ರೊಮ್ಯಾಟೊಲೈಟನ್ನು ಉತ್ಪತ್ತಿಮಾಡುವ ಡಾಲಮೈಟ್ ಸುಣ್ಣದಕಲ್ಲುಗಳಾದ ಮಾಮ್ಲೆಯ ಬಕ್ಸಾ ರಚನೆಯ ತವರಾಗಿದೆ. ಇವುಗಳ ರಕ್ಷಣೆ, ನಿರ್ವಹಣೆ, ಪ್ರಚಾರ ಮತ್ತು ಭೂಪ್ರವಾಸೋದ್ಯಮಕ್ಕಾಗಿ ಇದನ್ನು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆಯು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವೆಂದು ಘೋಷಿಸಿದೆ.[2][3][4]
ಇದು ಪಕ್ಕದ ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿರುವ ಬಕ್ಸಾ ಹುಲಿ ಮೀಸಲು ಪ್ರದೇಶಕ್ಕೆ ಹೊಂದಿಕೊಂಡಿದೆ.