ಧಾರವಾಡ
ಭಾರತದ ಕರ್ನಾಟಕ ರಾಜ್ಯದ ನಗರ / From Wikipedia, the free encyclopedia
ಧಾರವಾಡ ಕರ್ನಾಟಕ ರಾಜ್ಯದ ಒಂದು ನಗರ; ಧಾರವಾಡ ನಗರ ಧಾರವಾಡ ಜಿಲ್ಲೆಯ ಕೇಂದ್ರಸ್ಥಳ. ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಧಾರವಾಡ ನಗರ, ಹುಬ್ಬಳ್ಳಿ ವಾಣಿಜ್ಯ ನಗರವಾದರೆ ಧಾರವಾಡ ಶೈಕ್ಷಣಿಕ ಜಿಲ್ಲೆ, ಧಾರವಾಡ ಅತಿ ತಂಪು ವಾತಾವರಣ ಹೊಂದಿರುವ ನಗರ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಆಕಾಶವಾಣಿ, ಕಾನೂನು ವಿಶ್ವವಿದ್ಯಾಲಯ, ಹೈಕೋರ್ಟ್, ನೈರುತ್ಯ ರೈಲ್ವೆ ಘಟಕ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಐ ಐ ಟಿ ,ಮುಂತಾದವುಗಳ ಆಗರ ಧಾರವಾಡ, ಧಾರವಾಡ’ದ ಮೂಲ ರೂಪ ‘ದಾರವಾಡ’. ಬಹಳಷ್ಟು ಚರ್ಚಿತವಾಗಿರುವ ಧಾರವಾಡ ಗ್ರಾಮದ ನಿಪ್ಪತ್ತಿಯು ಸಹ ವ್ಯಕ್ತಿನಾಮದ್ದಾಗಿರುವ ಸಾಧ್ಯತೆ ಹೆಚ್ಚಿದೆ. ಧಾರವಾಡ ಜಿಲ್ಲಾ ಗೆಝೆಟಿಯರ್ದಲ್ಲಿ ವಿಜಯನಗರದ ರಾಮರಾಜನ ಕಾಲದ ಧಾರರಾವ್ ಎಂಬುವನು ೧೪೦೩ರಲ್ಲಿ ಕೋಟೆ ಕಟ್ಟಿಸಿದ್ದರ ನಿಮಿತ್ತ ಈ ಊರಿಗೆ ಧಾರವಾಡ ಎಂಬ ಹೆಸರು ಬಂದಿತೆಂದು ತಿಳಿಸುತ್ತದೆ. ಆದರೆ ಕ್ರಿ.ಶ.೧೧೧೭ ಧಾರವಾಡ ಶಾಸನದಲ್ಲಿಯೇ ‘ದಾರವಾಡ’ ಎಂಬ ಹೆಸರು ಬಳಕೆಗೊಂಡಿದೆ
Quick Facts ಧಾರವಾಡ ಧಾರವಾರಪೇಢ ನಗರಿ, ಹುಬ್ಬಳ್ಳಿ-ಧಾರವಾಡ ನಗರ, ಧಾರನಗರಿ, ವಿದ್ಯಾ ಕಾಶಿ, ಸಾಂಸ್ಕೃತಿಕ ನಗರಿ, Karnataka India mandya dharwad......Schoolಕರ್ನಾಟಕದ ಶಿಕ್ಷಣ ಕೇಂದ್ರ, ಕರ್ನಾಟಕದ ಆಕ್ಸ್ಫರ್ಡ್, ದೇಶ ...
ಧಾರವಾಡ
ಧಾರವಾರ ಪೇಢ ನಗರಿ, ಹುಬ್ಬಳ್ಳಿ-ಧಾರವಾಡ ನಗರ, ಧಾರನಗರಿ, ವಿದ್ಯಾ ಕಾಶಿ, ಸಾಂಸ್ಕೃತಿಕ ನಗರಿ, Karnataka India mandya dharwad......Schoolಕರ್ನಾಟಕದ ಶಿಕ್ಷಣ ಕೇಂದ್ರ, ಕರ್ನಾಟಕದ ಆಕ್ಸ್ಫರ್ಡ್ | |
---|---|
Coordinates: 15°27′30″N 75°00′30″E | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಧಾರವಾಡ ಜಿಲ್ಲೆ |
ತಾಲ್ಲೂಕು | ಧಾರವಾಡ |
Government | |
• Type | ಮಹಾನಗರ ಪಾಲಿಕೆ |
• Body | ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ |
ಭಾಷೆ | |
• ಅಧಿಕೃತ | ಕನ್ನಡ |
Time zone | UTC+೫:೩೦ (IST) |
ಪಿನ್ ಕೋಡ್ | 580 xxx |
ದೂರವಾಣಿ ಕೋಡ್ | 0836 |
Vehicle registration | ಕೆಎ 25, ಕೆಎ 63 |
Website | www.dharwad.nic.in |
Close