From Wikipedia, the free encyclopedia
ದೋಸೆ ಒಂದು ದಕ್ಷಿಣ ಭಾರತೀಯ ತಿನಿಸು. ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಇದು ದಕ್ಷಿಣ ಭಾರತದಲ್ಲಿ ಬೆಳಗಿನ ತಿಂಡಿಯಾಗಿ ಸರ್ವೇಸಾಮಾನ್ಯ.
ಮೊದಲಿಗೆ ಸಾಧಾರಣವಾಗಿ ದೋಸೆಯ ಹಿಟ್ಟನ್ನು ಅಕ್ಕಿ ಮತ್ತು ಉದ್ದಿನ ಬೇಳೆಗಳನ್ನು ಸ್ವಲ್ಪ ಕಾಲ ನೆನೆಸಿ, ತಿರುವಿ ಒಂದು ರಾತ್ರಿಯ ವರೆಗೆ "ಹುದುಗಲು" ಬಿಡುವುದರ ಮೂಲಕ ಸಿದ್ಧಪಡಿಸಲಾಗುತ್ತದೆ. ಯಾವ ರೀತಿಯ ದೋಸೆ ತಯಾರಿಸಲಾಗುತ್ತಿದೆ ಎಂಬುದನ್ನು ಆಧರಿಸಿ ಈ ಪ್ರಕ್ರಿಯೆಯಲ್ಲಿ ಮೆಂತ್ಯ, ಅವಲಕ್ಕಿ, ಕಡಲೇಬೇಳೆ ಇತ್ಯಾದಿಗಳನ್ನು ಸೇರಿಸಿಕೊಳ್ಳುವುದೂ ಉಂಟು. ಸಿದ್ಧವಾದ ಹಿಟ್ಟನ್ನು ಕಾದ ಕಾವಲಿಯ ಮೇಲೆ ಹುಯ್ಯುವುದರ ಮೂಲಕ ದೋಸೆಯನ್ನು ಸಿದ್ಧಪಡಿಸಲಾಗುತ್ತದೆ. ಈ ಸಮಯದಲ್ಲಿ ಸ್ವಲ್ಪ ಎಣ್ಣೆ, ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸುವುದು ವಾಡಿಕೆ.
ಅಕ್ಕಿ ಮತ್ತು ಉದ್ದಿನ ಬೇಳೆಯ ಬದಲು ರವೆಯನ್ನು ಉಪಯೋಗಿಸಿ ರವೆ ದೋಸೆ, ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಮೊದಲಾದವನ್ನು ಉಪಯೋಗಿಸಿ "ದಿಢೀರ್ ದೋಸೆ" ಮೊದಲಾದವನ್ನೂ ಮಾಡಬಹುದು.
ದೋಸೆಯ ಜೊತೆಗೆ ನೆಂಚಿಕೊಳ್ಳಲು ಯಾವುದಾದರೂ ತಿನಿಸುಗಳನ್ನು ಸಿದ್ಧಪಡಿಸುವುದೂ ಸಹ ಸಾಮಾನ್ಯ. ದೋಸೆಯ ಜೊತೆಗೆ ಮಾಡುವ ತಿನಿಸುಗಳಲ್ಲಿ ಸಾಮಾನ್ಯವಾದವು:
ದೋಸೆಯನ್ನು ಸಿದ್ಧಪಡಿಸುವ ವಿಧಾನ ಮತ್ತು ಉಪಯೋಗಿಸುವ ಸಾಮಗ್ರಿಗಳನ್ನು ಆಧರಿಸಿ ಅನೇಕ ರೀತಿಯ ದೋಸೆಗಳನ್ನು ಗುರುತಿಸಬಹುದು:
"ಮಸಾಲೆ ದೋಸೆ ಅಂದರೆ ಭವನ..."
ಇದೊಂದು ಬೆಂಗಳೂರಿನ ಗಾಂಧೀ ಬಜಾರ್ ಬಡಾವಣೆಯಲ್ಲಿರುವ, ೩೦ ವರ್ಷಕ್ಕಿಂತ ಹಳೆಯದಾದ ,ಆದರೆ ಅಂದಿನಿಂದಲೂ ತನ್ನ ಜನಪ್ರಿಯತೆ ಮತ್ತು ಗುಣಮಟ್ಟವನ್ನು ಹಾಗೇ ಉಳಿಸಿಕೊಂಡು ಬಂದಿರುವ ಜನಪ್ರಿಯ ಉಡುಪಿ ಖಾದ್ಯಮಂದಿರ. ಎಲ್ಲಾ ಉಡುಪಿ ಹೋಟೆಲ್ ಗಳಂತೆ, ಇಲ್ಲಿಯೂ ಶುಚಿ, ರುಚಿಯಾದ ತಿಂಡಿ-ತಿನಸುಗಳು ದೊರೆಯುತ್ತವೆ. ಮಸಾಲೆದೋಸೆ, ಇಲ್ಲಿನ ಪ್ರಮುಖ ಆಕರ್ಷಣೆ. ಜನಗಳು ಈ ಚಿಕ್ಕಹೋಟೆಲ್ ನ ಹೊರಗಡೆಯೇ ಕ್ಯೂ, ನಲ್ಲಿ ನಿಂತು ಕಾದು, ಒಳಗೆ ಬಂದು ದೋಸೆಯನ್ನು ಆಸ್ವಾದಿಸುವುದು, ಸರ್ವೇಸಾಮಾನ್ಯವಾದ ಸಂಗತಿ. ವಿದ್ಯಾರ್ಥಿಭವನದ ಖ್ಯಾತಿಯನ್ನು ಹೆಚ್ಚಿಸಲು ಕನ್ನಡದ ಕೆಲವು ಪತ್ರಿಕೆಗಳ, ನಿಯತಕಾಲಿಕೆಗಳ, ಮಹತ್ವ ಹೆಚ್ಚು. ಜಾಗದ ಅಭಾವ ; ತಕ್ಷಣ ಪರಿವಾರದವರೆಲ್ಲಾ ಒಟ್ಟಿಗೆ ಕೂತು, ದೋಸೆಸವಿಯುವುದು ಕಷ್ಟವೆನ್ನಿಸಿದರೂ ಜನರು ಎಲ್ಲಕ್ಕೂ ಅಡ್ಜಸ್ಟ್, ಮಾಡಿಕೊಳ್ಳುತ್ತಾರೆ.
ದೋಸೆ ರೇಟು ರೂ. ೨೭/- ಮಾತ್ರ.
ಪರಂಪಲ್ಲಿ ಯಜ್ಞನಾರಾಯಣಮಯ್ಯ, ಮತ್ತು ಸೋದರರು ಸೇರಿ, ೧೯೨೪ ರಲ್ಲಿ, 'ಮಾವಳ್ಳಿ ಟಿಫಿನ್ ರೂಮ್', ಸ್ಥಾಪನೆಮಾಡಿದರು. ಅತ್ಯಂತ ಹೆಸರು ಮಾಡಿದ ಹೋಟೆಲ್ ಗಳಲ್ಲಿ ಇದು ಒಂದು. ಇಲ್ಲಿ ನಿಮಗೆ ಪ್ರತಿನಿತ್ಯ ದೋಸೆಯು ಸಿಗುವುದು ಕೇವಲ ಬೆಳಗ್ಗೆ ೮.೩೦ ರಿಂದ ಬೆಳಗ್ಗೆ ೯.೩೦ ವರಗೆ ಮಾತ್ರ.!
ಇಲ್ಲಿ ಊಟ ೧೩೦/- ರೂ. ಗಳು (ಪ್ರಸಕ್ತ ದರ ರೂ ೩೫೦/-), ಅದೂ ಸೀಟ್ ಸಿಗುವುದು ಭಾರಿ ಪ್ರಯಾಸ!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.