ದಿ ಮೆಟ್ರಿಕ್ಸ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
The Matrix | |
---|---|
ನಿರ್ದೇಶನ | Wachowski brothers |
ನಿರ್ಮಾಪಕ | Joel Silver |
ಲೇಖಕ | Wachowski brothers |
ಪಾತ್ರವರ್ಗ | Keanu Reeves Laurence Fishburne Carrie-Anne Moss Hugo Weaving Joe Pantoliano |
ಸಂಗೀತ | Don Davis |
ಛಾಯಾಗ್ರಹಣ | Bill Pope |
ಸಂಕಲನ | Zach Staenberg |
ಸ್ಟುಡಿಯೋ | Village Roadshow Pictures Silver Pictures |
ವಿತರಕರು | Warner Bros. Pictures |
ಬಿಡುಗಡೆಯಾಗಿದ್ದು | North America: March 31, 1999 Australia: April 8, 1999 United Kingdom: June 11, 1999 |
ಅವಧಿ | 136 min. |
ದೇಶ | ಟೆಂಪ್ಲೇಟು:FilmUS |
ಭಾಷೆ | English |
ಬಂಡವಾಳ | US$ 63 million |
ಬಾಕ್ಸ್ ಆಫೀಸ್ | US$ 463,517,383 |
ದಿ ಮೆಟ್ರಿಕ್ಸ್ ಒಂದು(West Frisian) ವೈಜ್ಞಾನಿಕ ಕಾಲ್ಪನಿಕ ಕತೆ-ಸಾಹಸಪ್ರಧಾನ ಚಲನಚಿತ್ರವಾಗಿದ್ದು, ಇದನ್ನು ಬರೆದು ನಿರ್ದೇಶನ ಮಾಡಿದವರು ಲಾರ್ರಿ ಮತ್ತು ಎಂಡೀ ವಾಚೋಸ್ಕಿ ಮತ್ತು ಅಭಿನಯಿಸಿದವರು ಕೀನು ರೀವ್ಸ್, ಲಾರೆನ್ಸ್ ಫೀಶ್ಬರ್ನ್, ಕೇರ್ರೀ-ಆಯ್ನೆ ಮೊಸ್ ಜೋ ಪೆಂಟೋಲಿಯಾನೊ ಮತ್ತು ಹ್ಯೂಗೋ ವೀವಿಂಗ್. ಇದು ಮೊದಲು ಅಮೇರಿಕಾ ದೇಶದದಲ್ಲಿ ಮಾರ್ಚ್ 31, 1999 ರಂದು ಬಿಡುಗಡೆಗೊಂಡಿತು ಮತ್ತು ಇದು ಈ ಚಲನಚಿತ್ರ ಸರಣಿಯ, ಹಾಸ್ಯ ಪುಸ್ತಕಗಳು, ವಿಡಿಯೊ ಆಟಗಳು ಮತ್ತು ಎನಿಮೇಶನ್ಗಳ ಮೊದಲ ಭಾಗವಾಗಿದೆ.
ಈ ಚಲನಚಿತ್ರವು ಭವಿಷ್ಯವೊಂದನ್ನು ವಿವರಿಸುತ್ತಿದ್ದು, ಅದರಲ್ಲಿ ನಿಜವಾಗಿ ಮನುಷ್ಯರು ತಿಳಿದುಕೊಳ್ಳುವ ವಾಸ್ತವಿಕತೆ ಮೆಟ್ರಿಕ್ಸ್ ಆಗಿರುತ್ತದೆ: ಇದು ಸಚೇತನ ಯಂತ್ರಗಳು ನಕಲು ಮಾಡಿದ ವಾಸ್ತವಿಕತೆಯಾಗಿದ್ದು, ಇದನ್ನು ಮನುಷ್ಯರನ್ನು ತಣಿಸಲು ಮತ್ತು ವಶಪಡಿಸಿಕೊಳ್ಳಲು, ಮತ್ತು ಅದೇ ಸಮಯದಲ್ಲಿ ಅವರ ದೇಹದ ಶಾಖ ಮತ್ತು ವಿದ್ಯಚ್ಛಕ್ತಿಯನ್ನು ಶಕ್ತಿಯ ಆಕರಗಳಾಗಿ ಬಳಸಿಕೊಳ್ಳಲು ಮಾಡಲಾಗಿರುತ್ತದೆ. ಈ ಅಂಶವನ್ನು ತಿಳಿದುಕೊಂಡ ನಿಯೋ ಎಂಬ ಕಂಪ್ಯೂಟರ್ ಪ್ರೋಗ್ರಾಮರ್ ಇಂತಹ ಯಂತ್ರಗಳ ವಿರುದ್ಧ ದಂಗೆಯೆದ್ದಿರುವ, ಹಾಗೂ ಅಂತಹ ಕನಸಿನ ಜಗತ್ತಿನಿಂದ ಮುಕ್ತಗೊಂಡು ವಾಸ್ತವಿಕತೆಗೆ ಮರಳಿ ಬಂದ, ಇತರ ಜನರೆಡೆಗೆ ಸೆಳೆಯಲ್ಪಡುತ್ತಾನೆ. ಈ ಚಲನಚಿತ್ರವು ಸೈಬರ್ಪಂಕ್ ಮತ್ತು ಹ್ಯಾಕರ್ ಸಬ್ಕಲ್ಚರ್ಗಳು, ತತ್ವಶಾಸ್ತ್ರದ ಮತ್ತು ಧಾರ್ಮಿಕ ಕಲ್ಪನೆಗಳ ಕುರಿತು ಉಲ್ಲೇಖವನ್ನು ನೀಡಿದೆ. ಅಷ್ಟೇ ಅಲ್ಲದೇ, ಅಲಿಸ್ ಇನ್ ವಂಡರ್ಲ್ಯಾಂಡ್, ಹಾಂಗ್ ಕಾಂಗ್ ಚಲನಚಿತ್ರ, ಸ್ಪಾಗೆಟ್ಟಿ ವೆಸ್ಟರ್ನ್ ಪ್ರಕಾರ, ಡೈಸ್ಟೊಪೇನ್ ಕಲ್ಪನೆ ಮತ್ತು ಜಪಾನ್ ದೇಶದ ಎನಿಮೇಶನ್ ಮುಂತಾದವುಗಳಿಗೆ ಗೌರವಾರ್ಪಣೆ ಮಾಡಿದೆ.