ದಿ ಬಿಗ್ ಬ್ಯಾಂಗ್ ಥಿಯರಿ (TV ಸರಣಿ)
ಅಮೇರಿಕಾದ ಹಾಸ್ಯ ಟಿವಿ ಕಾರ್ಯಕ್ರಮ ಸರಣಿ / From Wikipedia, the free encyclopedia
Lua error in package.lua at line 80: module 'Module:Pagetype/setindex' not found.
ಚಿತ್ರ:BigBangTheoryTitleCard.png Title card for The Big Bang Theory | |
ಹೀಗೂ ಕರೆಯಲಾಗುತ್ತದೆ | TBBT |
---|---|
ಶೈಲಿ | Sitcom |
ರಚನಾಕಾರರು | Chuck Lorre Bill Prady |
ನಿರ್ದೇಶಕರು | James Burrows (pilot) Mark Cendrowski |
ನಟರು | Johnny Galecki Jim Parsons Kaley Cuoco Simon Helberg Kunal Nayyar Sara Gilbert |
ನಿರೂಪಣಾ ಗೀತೆ | "The History of Everything"[1] by Barenaked Ladies |
ದೇಶ | ![]() |
ಭಾಷೆ(ಗಳು) | English |
ಒಟ್ಟು ಸರಣಿಗಳು | 3 |
ಒಟ್ಟು ಸಂಚಿಕೆಗಳು | 40 (List of episodes) |
ಕಾರ್ಯನಿರ್ವಾಹಕ ನಿರ್ಮಾಪಕ(ರು) | Chuck Lorre Bill Prady Lee Aronsohn |
ನಿರ್ಮಾಪಕ(ರು) | Steve Molaro Mike Collier Faye Oshima Belyeu |
ಸಂಕಲನಕಾರರು | Peter Chakos |
ಕ್ಯಾಮೆರಾ ಏರ್ಪಾಡು | Multi-camera |
ಸಮಯ | 21 minutes (without commercials) |
ಮೂಲ ವಾಹಿನಿ | CBS |
ಚಿತ್ರ ಶೈಲಿ | 480i (SDTV), 1080i (HDTV) |
ಮೂಲ ಪ್ರಸಾರಣಾ ಸಮಯ | September 24, 2007 – present |
ತಾಣ |
ದಿ ಬಿಗ್ ಬ್ಯಾಂಗ್ ಧಿಯರಿ ಒಂದು ಅಮೆರಿಕನ್ ಸಾಂದರ್ಭಿಕ ಹಾಸ್ಯ (ಸಿಚುಯೇಷನ್ ಕಾಮಿಡಿ)ಸರಣಿ.ಚಕ್ ಲೊರ್ ಮತ್ತು ಬಿಲ್ ಪ್ರ್ಯಾಡಿ ಇದರ ಸೃಷ್ಟಿಕರ್ತ ಮತ್ತು ಕಾರ್ಯಕಾರಿ ನಿರ್ಮಾಪಕರು. 2007ರ ಸೆಪ್ಟೆಂಬರ್ 24ರಂದು CBS ವಾಹಿನಿಯಲ್ಲಿ ಇದರ ಪ್ರಥಮ ಪ್ರದರ್ಶನವಾಯಿತು.[2]
ಈ ಹಾಸ್ಯ ಸರಣಿಯು ಕ್ಯಾಲಿಫೊರ್ನಿಯಾದ ಪಸಡೆನಾದಲ್ಲಿ ಚಿತ್ರೀಕರಣಗೊಂಡಿತ್ತು. ಈ ಕ್ಯಾಲ್ಟೆಕ್ (ಕ್ಯಾಲಿಫೊರ್ನಿಯಾ ಇನ್ಸ್ಟಿಟ್ಯುಟ್ ಆಫ್ ಟೆಕ್ನಾಲಜಿ)ನ ಇಬ್ಬರು ಅಸಾಧಾರಣ ಪುರುಷರು - ಒಬ್ಬ ಲಿಯೊನಾರ್ಡ್ ಎಂಬ ಪ್ರಾಯೋಗಿಕ ಭೌತಶಾಸ್ತ್ರಜ್ಞ (ಲಿಯೊನಾರ್ಡ್ ಹಫ್ಸ್ಟೇಟರ್), ಇನ್ನೊಬ್ಬ ಷೆಲ್ಡನ್ ಎಂಬ ತಾತ್ವಿಕ ಭೌತಶಾಸ್ತ್ರಜ್ಞ - ಈ ಇಬ್ಬರೂ(ಷೆಲ್ಡನ್ ಕೂಪರ್); ಮನರಂಜನಾ ವೃತ್ತಿಯ ಆಕಾಂಕ್ಷೆಯುಳ್ಳ ಪೆನ್ನಿ ಎಂಬ ಹೊಂಬಣ್ಣದ ಕೂದಲುಳ್ಳ ಆಕರ್ಷಕ ಪರಿಚಾರಿಕೆಯೊಂದಿಗೆ ಒಂದೇ ಸೂರಿನಡಿ ಬದುಕುವುವುದೇ ಈ ಸರಣಿಯ ಕಥಾವಸ್ತು.
ಪೆನ್ನಿಯ ಸಾಮಾಜಿಕ ಜಾಣ್ಮೆ ಮತ್ತು ಸಾಮಾನ್ಯ ಜ್ಞಾನಕ್ಕೆ ತದ್ವಿರುದ್ಧವಾದ ಲಿಯೊನಾರ್ಡ್ ಮತ್ತು ಷೆಲ್ಡನ್ರ 'ಗೀಕು'ತನ ಮತ್ತು ಬುದ್ಧಿಶಕ್ತಿಯ ವೈರುಧ್ಯಗಳೇ ಹಾಸ್ಯ ಕಾರಂಜಿಯ ಬುಗ್ಗೆಗೆ ಎಡೆಮಾಡಿಕೊಡುತ್ತವೆ.[3][4] ಇವರಿಬ್ಬರ ಸ್ನೇಹಿತರಾದ, ಅದೇ ಮಟ್ಟದ ಗೀಕು ಸ್ವಭಾವದ ಹೊವರ್ಡ್ ಮತ್ತು ರಾಜೀಶ್ರದ್ದು ಕೂಡಾ ಇಲ್ಲಿ ಪ್ರಮುಖ ಪಾತ್ರ. ವಾರ್ನರ್ ಬ್ರದರ್ಸ್ ಟೆಲಿವಿಷನ್ ಮತ್ತು ಚಕ್ ಲೊರ್ ಪ್ರೊಡಕ್ಷನ್ಸ್ ಸಂಸ್ಥೆಗಳು ಈ ಸರಣಿಯನ್ನು ನಿರ್ಮಿಸಿದವು.[5][6] 2009ರ ಮಾರ್ಚ್ ತಿಂಗಳಲ್ಲಿ ದಿ ಬಿಗ್ ಬ್ಯಾಂಗ್ ಧಿಯರಿ CBS ವಾಹಿನಿಯಲ್ಲಿ 3ನೆಯ ಮತ್ತು 4ನೆಯ ಭಾಗಕ್ಕಾಗಿ ಪರಿಷ್ಕರಿಸಲಾಯಿತೆಂದು ವರದಿಯಾಗಿತ್ತು.[7] 2009ರ ಆಗಸ್ಟ್ ತಿಂಗಳಲ್ಲಿ ಈ ಸಾದರ್ಭಿಕ ಹಾಸ್ಯ ಸರಣಿಯು ಅತ್ಯುತ್ತಮ ಹಾಸ್ಯ ಸರಣಿ ಎಂದು TCAಪ್ರಶಸ್ತಿಯನ್ನು ಗಳಿಸಿತು. ಹಾಸ್ಯ ಸಾಧನೆಗಾಗಿ ಜಿಮ್ ಪಾರ್ಸನ್ಸ್ರಿಗೆ ವೈಯಕ್ತಿಕ ಪ್ರಶಸ್ತಿ ದೊರಕಿತು.[8] ಚಕ್ ಲೊರ್ನ ಇನ್ನೊಂದು ಸರಣಿ ಟೂ ಅಂಡ್ ಎ ಹಾಫ್ ಮೆನ್ ನಿರ್ಮಣವಾದ ನಂತರ ದಿ ಬಿಗ್ ಬ್ಯಾಂಗ್ ಧಿಯರಿ ಪ್ರತಿ ಸೋಮವಾರ 9:30ಕ್ಕೆ 2/ಪ್ರಸಾರ ಅರಂಭಿಸಿತು{}