ದಾಲ್ಚಿನ್ನಿ
From Wikipedia, the free encyclopedia
ದಾಲ್ಚಿನ್ನಿ ಅನೇಕ ಮರಗಳ ಒಳ ತೊಗಟೆಯಿಂದ ಪಡೆಯುವ ಸಿನ್ನಮೋಮಮ್ ಕುಲದ ಒಂದು ಮಸಾಲೆ ಪದಾರ್ಥ. ಇದನ್ನು ಲವಂಗಪಟ್ಟೆ, ಚಕ್ಕೆ ಎಂದು ಕರೆಯುತ್ತಾರೆ. ಸಿಹಿ ಮತ್ತು ಖಾರದ ಆಹಾರ ಈ ಎರಡರಲ್ಲೂ ಬಳಸಲಾಗುತ್ತದೆ. "ದಾಲ್ಚಿನ್ನಿ" ಎಂಬ ಪದ ಮರದ ಮಧ್ಯ ಇರುವ ಕಂದು ಬಣ್ಣವನ್ನು ಕೂಡ ಸೂಚಿಸುತ್ತದೆ. ಸಿನ್ನಮೋಮಮ್ ವೆರಮ್' ಕೆಲವೊಮ್ಮೆ ನಿಜವಾದ ದಾಲ್ಚಿನ್ನಿ ಎಂದು ಪರಿಗಣಿಸಲ್ಪಟ್ಟಿದೆಯಾದರೂ,ಅಧಿಕವಾಗಿ ದಾಲ್ಚಿನ್ನಿಯನ್ನು ಅಂತರರಾಷ್ಟ್ರೀಯ ವಾಣಿಜ್ಯದಲ್ಲಿ ಇತರ ಸಂಬಂಧಿತ ತಳಿಗಳಿಂದಲೂ ಪಡೆಯಲಾಗುತ್ತದೆ."ನಿಜವಾದ ದಾಲ್ಚಿನ್ನಿ"ಯಿಂದ ಇದನ್ನು ಬೇರ್ಪಡಿಸಲು ಸಿನ್ನಮೋಮಮ್ ಕ್ಯಾಶಿಯಾ ಎಂದಲೂ ಕರೆಯಲಾಗುತ್ತದೆ.[1][2]
Quick Facts ದಾಲ್ಚಿನ್ನಿ, Scientific classification ...
Close
"ದಾಲ್ಚಿನ್ನಿ" ಬಹುಶಃ ಒಂದು ಡಜನ್ ಜಾತಿ ಮರಗಳಿಂದ ಉತ್ಪಾದಿಸುವ ವಾಣಿಜ್ಯ ಮಸಾಲೆಗಳ ಉತ್ಪನ್ನಗಳಿಗೆ ಹೆಸರಾಗಿದೆ. ಇವುಗಳೆಲ್ಲಾ ಸಿನ್ನಮೋಮಮ್ ಕುಲದ ಲಾರೇಸಿಏ ಕುಟುಂಬದಲ್ಲಿ ಸದಸ್ಯರು. ಅವುಗಳಲ್ಲಿ ಕೆಲವನ್ನು ಮಾತ್ರ ಮಸಾಲೆ ವಾಣಿಜ್ಯಕ್ಕಾಗಿ ಬೆಳೆಯಲಾಗುತ್ತದೆ.