೧೭ನೇ ಶತಮಾನದ ವರ್ಕಾಡಿ ಸಂತರು ಮತ್ತು ಕವಿಗಳು From Wikipedia, the free encyclopedia
ತುಕಾರಾಮರು ಮಹಾರಾಷ್ಟ್ರದ ಸಂತ ಪರಂಪರೆಯ ಶ್ರೇಷ್ಠ ಸಂತರು. ಇವರು ಪುಣೆಯ ಸಮೀಪದ ದೇಹು ಗ್ರಾಮದವರು. ಇವರು ಮೋರೆ ಮನೆತನದಲ್ಲಿ ಜನಿಸಿದರು. ಇವರ ತಂದೆ ಬೊಳ್ಹೋಬಾ, ತಾಯಿ ಕನಕಾಯಿ. ಇವರ ಹೆಸರಿನ ಜೊತೆಗೆ ಇವರ ಮನೆತನದ ಹೆಸರನ್ನು ಅನೇಕ ವರ್ಷಗಳಿಂದ ಉಪಯೋಗಿಸಲಾಗುತ್ತಿಲ್ಲ, ಆದರೆ 'ಸಂತ' ಎಂಬ ಪದವನ್ನು ಉಪಯೋಗಿಸಲಾಗುತ್ತಿದ್ದು ಇವರನ್ನು ಪ್ರಸಿದ್ಧವಾಗಿ 'ಸಂತ ತುಕಾರಾಮ'ರೆಂದೇ ಕರೆಯಲಾಗುತ್ತದೆ. ಇವರು ಶಿವಾಜಿಯ ಆಧ್ಯಾತ್ಮಿಕ ಗುರುಗಳಾಗಿದ್ದರೆಂದು ಹೇಳಲಾಗುತ್ತದೆ.
ಇವರ ಜನ್ಮದ ವರ್ಷವಾವುದು ಎಂಬುದರ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯವಿದ್ದು ಅನೇಕ ವರ್ಷಗಳನ್ನು ಹೇಳಲಾಗುತ್ತದೆ, ೧೫೭೭, ೧೫೯೮, ೧೬೦೮ ಮತ್ತೂ ೧೬೦೯(ಬಹುತೇಕ ಖಚಿತ). ಆದರೆ ಇವರ ನಿಧನದ ವರ್ಷ ಕ್ರಿ.ಶ.೧೬೫೦ ಎಂದು ಖಚಿತವಾಗಿ ಹೇಳಲಾಗುತ್ತದೆ. ತುಕಾರಾಮರ ಮೊದಲನೆಯ ಹೆಂಡತಿ ರಖುಮಾಬಾಯಿಯು ತನ್ನ ಯೌವ್ವನದಲ್ಲೇ ನಿಧನ ಹೊಂದಿದಳು. ತುಕಾರಾಮ ಮತ್ತು ಜೀಜಾಬಾಯಿ(ಆವಳಿ ಎಂದೂ ಕರೆಯಲಾಗುತ್ತದೆ)ಯರಿಗೆ ಮೂರು ಗಂಡುಮಕ್ಕಳಿದ್ದರು, ಸಂತು ಅಥವಾ ಮಹದೇವ, ವಿಠೋಬಾ ಮತ್ತು ನಾರಾಯಣ.
ತುಕಾರಾಮರು ವಿಠ್ಠಲನ ಭಕ್ತರಾಗಿದ್ದರು. ವಿಠ್ಠಲ ಕೃಷ್ಣನ ಅವತಾರವಾಗಿದ್ದು, ಕೃಷ್ಣ ವಿಷ್ಣುವಿನ ಅವತಾರವಾಗಿದ್ದ. ತುಕಾರಾಮರು ಸಂತ ನಾಮದೇವರ ಭಾಗವತ ಹಿಂದು ಸಂಪ್ರದಾಯದ ಪರಾಕಾಷ್ಟೆಯ ಸ್ಥಿತಿಯಲ್ಲಿದ್ದ ಸಂತರಾಗಿದ್ದರು. ವಾರಕರೀ ಸಂಪ್ರದಾಯದಲ್ಲಿ ನಾಮದೇವ, ಜ್ಞಾನೇಶ್ವರ, ಜನಾಬಾಯಿ,ಏಕನಾಥ ಮತ್ತು ತುಕಾರಾಮರನ್ನು ಪೂಜ್ಯನೀಯವಾಗಿ ಕಾಣುತ್ತಾರೆ. ಇವರು ರಾಮ, ಕೃಷ್ಣ ಮತ್ತು ಹರಿಯಿಂದ ಗುರು ಮಂತ್ರ ಉಪದೇಶವನ್ನು ಪಡೆದಿದ್ದರು. ಮಹಾರಾಷ್ಟ್ರದ ಸಂತರ ಬಗ್ಗೆ ಎಲ್ಲ ಮಾಹಿತಿಯನ್ನು ಮಹಿಪತಿಯ ಭಕ್ತಿ ವಿಜಯ ಮತ್ತು ಭಕ್ತಿ ಲೀಲಾಮೃತ ಪುಸ್ತಕಗಳಿಂದ ಪಡೆಯಲಾಗಿದೆ.
ತುಕಾರಾಮರ ಕೀರ್ತನೆಗಳು ಪದ್ಯ ರಚನೆಗಳನ್ನು ಸಹ ಹೊಂದಿರುತ್ತಿದ್ದವು.
{{cite book}}
: Cite has empty unknown parameter: |1=
(help); Unknown parameter |coauthors=
ignored (|author=
suggested) (help){{cite book}}
: Cite has empty unknown parameter: |coauthors=
(help)
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.