ತಮಾರಾ ಅವೆರ್ಬುಚ್ ಫ್ರೀಡ್ ಲ್ಯಾಂಡರ್
From Wikipedia, the free encyclopedia
ತಮಾರಾ ಅವೆರ್ಬುಚ್ ಫ್ರೀಡ್ ಲ್ಯಾಂಡರ್ರವರು ಬಯೊಮೆತಮೆಟಿಷಿಯನ್ ಮತ್ತು ಪಬ್ಲಿಕ್ ಹೆಲ್ತ್ ಸೈಂಟಿಸ್ಟ್ ಆಗಿ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್,ಬಾಸ್ಟನ್ ನಲ್ಲಿ ಕಾರ್ಯ ನಿರ್ವಹಿಸಿದರು. ಅವರು ಬಯೊಶೊಶಿಯಲ್ ಬಗ್ಗೆ ಸಂಶೋಧನೆ ಮಾಡಿ ಲೇಖನಗಳನ್ನು ಪ್ರಕಟಿಸಿದರು. ಅವರು ಲೈಂಗಿಕ ತಾರತಮ್ಯದ ಬಗ್ಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ವಿರುದ್ಧ ಮೊಕದ್ದಮೆ ಹೂಡಿದ ಮೊದಲ ಮಹಿಳೆ. ಪ್ರಸ್ತುತ, ಅವರು ಹಾರ್ವರ್ಡ್ ಸ್ಕೂಲ್ ಆಫ್ ಗ್ಲೋಬಲ್ ಹೆಲ್ತ್ ಅಂಡ್ ಪಾಪ್ಯುಲೇಷನ್ ಇಲಾಖೆಯಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಅವರು ರೇಬೀಸ್ ಹರಡುವ ವಿಷಯ ಮತ್ತು ಅದನ್ನು ನಿಯಂತ್ರಿಸುವ ಕುರಿತು ಸಂಶೋಧನೆ ಮಾಡಿದ್ದಾರೆ. ಅವರ ಕೆಲಸ ಅಂತರಶಾಸ್ತ್ರೀಯ. ಲೈಂಗಿಕವಾಗಿ ಹರಡುವ ಕಾಯಿಲೆಗಳಾದ ಎಚ್ಐವಿ/ಏಡ್ಸ್, ಹಾಗೆಯೇ ಮಲೇರಿಯಾ ಮತ್ತು ಲೈಮ್ ಕಾಯಿಲೆಗಳ ಕುರಿತು ಸಂಶೋಧನೆಯನ್ನು ಮಾಡಿದರು. ಅವರ ಕೆಲಸಗಳು ಅನೇಕ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರದರ್ಶನಗೊಂಡಿವೆ.[1]
![]() | ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |
Quick Facts ತಮಾರಾ ಅವೆರ್ಬುಚ್ ಫ್ರೀಡ್ ಲ್ಯಾಂಡರ್, ಜನನ ...
Close