ತಂಬಾಕು
From Wikipedia, the free encyclopedia
ತಂಬಾಕು : ತಂಬಾಕು ಸಸ್ಯದ ಎಲೆಗಳನ್ನು ಕ್ಯೂರಿಂಗ್ ಮಾಡಿ ತಯಾರಿಸಲಾದ ಒಂದು ಉತ್ಪನ್ನ. ಈ ಸಸ್ಯವು ನೀಕೋಟಿಯಾನಾ ಕುಲ ಮತ್ತು ಸೊಲನೇಸಿಯಿ ಕುಟುಂಬದ ಭಾಗವಾಗಿದೆ. ತಂಬಾಕಿನ ೭೦ಕ್ಕೂ ಹೆಚ್ಚು ಸಸ್ಯಜಾತಿಗಳು ಪರಿಚಿತವಾಗಿವೆಯಾದರೂ, ನೀಕೋಟಿಯಾನಾ ಟಬಕಮ್ ಮುಖ್ಯ ವಾಣಿಜ್ಯ ಬೆಳೆಯಾಗಿದೆ. ಹೆಚ್ಚು ಪ್ರಬಲ ಮತ್ತು ಭಿನ್ನ ಸಸ್ಯಜಾತಿಯಾದ ನೀಕೋಟಿಯಾನಾ ರಸ್ಟಿಕಾ ಕೂಡ ವಿಶ್ವಾದ್ಯಂತ ಬಳಸಲ್ಪಡುತ್ತದೆ. ತಂಬಾಕು ಒಂದು ಉತ್ತೇಜಕವಾದ ನಿಕಟೀನ್ ಕ್ಷಾರಾಭವನ್ನು ಹೊಂದಿರುತ್ತದೆ. ಒಣಗಿದ ತಂಬಾಕು ಎಲೆಗಳನ್ನು ಮುಖ್ಯವಾಗಿ ಸಿಗರೇಟುಗಳು, ಸಿಗಾರ್ಗಳು, ಚುಂಗಾಣಿ ತಂಬಾಕು, ಮತ್ತು ಸುಗಂಧಯುಕ್ತ ಶೀಶಾ ತಂಬಾಕಿನಲ್ಲಿ ಧೂಮಪಾನಕ್ಕಾಗಿ ಬಳಸಲಾಗುತ್ತದೆ. ಅದನ್ನು ನಶ್ಯ, ಅಗಿಯುವ ತಂಬಾಕು, ಅದ್ದಿದ ತಂಬಾಕು ಮತ್ತು ಸ್ನೂಸ್ನ ರೂಪದಲ್ಲಿ ಸೇವಿಸಬಹುದು. ತಂಬಾಕು ಬಳಕೆ ಅನೇಕ ರೋಗಗಳಿಗೆ ಅಪಾಯಕಾರಿ ವಸ್ತುವಾಗಿದೆ. ವಿಶೇಷವಾಗಿ ಹೃದಯ, ಯಕೃತ್ತು, ಮತ್ತು ಶ್ವಾಸಕೋಶಗಳನ್ನು ಬಾಧಿಸುವ ರೋಗಗಳ ಜೊತೆಗೆ ಅನೇಕ ಕ್ಯಾನ್ಸರ್ಗಳಿಗೂ ಕಾರಣವಾಗುತ್ತದೆ.