ತಂತ್ರ
From Wikipedia, the free encyclopedia
ತಂತ್ರ ಸಂಸ್ಕೃತ:तन्त्र; ನಿರಂತರತೆ ಯನ್ನು ಸೂಚಿಸುವ ಜಾಲ;[1] ಆಂಗ್ಲದಲ್ಲಿ ತಾಂತ್ರಿಸಿಸಂ ಅಥವಾ ತಂತ್ರಿಸಂ ಅಥವಾ ತಂತ್ರಂ ಸಂಸ್ಕೃತ:तन्त्र ಎಂದು ಕರೆಯಲ್ಪಡುವ ತಂತ್ರವು ಒಂದು ತತ್ವಶಾಸ್ತ್ರವಾಗಿದ್ದು, ಇದರಲ್ಲಿ ಶಕ್ತಿಯು ಮುಖ್ಯದೇವತೆಯಾಗಿ ಪೂಜಿಸಲ್ಪಡುವುದಾಗಿದ್ದು ಇಡೀ ಜಗತ್ತು ಶಕ್ತಿ ಮತ್ತು ಶಿವ ನ ದಿವ್ಯಲೀಲೆಗೆ ಒಳಪಟ್ಟದ್ದೆಂದು ಸಾರುತ್ತದೆ;[2][2] ಸಾಮಾನ್ಯವಾಗಿ ಶಕ್ತಿಪೂಜೆಗೆ ಸಂಬಂಧಿತವಾದ ಯಾವುದೇ ಧಾರ್ಮಿಕಗ್ರಂಥ("ತಂತ್ರಗಳು" ಎಂದು ಕರೆಯಲ್ಪಡುವ)ವನ್ನೂ ಸಹ ತಂತ್ರ ಎಂಬ ಪದದಿಂದಲೇ ಗುರುತಿಸಲಾಗುತ್ತದೆ.[2] ತಂತ್ರವು ಮೂಲತಃ ಆಧ್ಯಾತ್ಮಿಕ ವಿಧಿವಿಧಾನಗಳು ಮತ್ತು ಪೂಜಾ ಆಚರಣೆಯ ಕ್ರಮಗಳನ್ನು ಅರುಹುತ್ತಾ ಮೌಢ್ಯ ಮತ್ತು ಪುನರ್ಜನ್ಮದಿಂದ ಮುಕ್ತಿ ಪಡೆಯಲು ಸಹಾಯಕವಾಗುತ್ತದೆ.[2] ತಂತ್ರಿಸಂ ಹಿಂದೂ, ಸಿಖ್, ಬಾನ್, ಬೌದ್ಧ, ಮತ್ತು ಜೈನ ಮತಗಳ ಆಚರಣೆಗಳ ಮೇಲೆ ಪ್ರಭಾವ ಬೀರಿದೆ. ತಂತ್ರವು ತನ್ನ ವಿವಿಧ ವಿಧಗಳಲ್ಲಿ ಭಾರತ, ನೇಪಾಳ, ಚೀನಾ, ಜಪಾನ್, ಟಿಬೆಟ್, ಕೊರಿಯಾ, ಕಾಂಬೋಡಿಯಾ, ಬರ್ಮಾ, ಇಂಡೋನೇಷಿಯಾ ಮತ್ತು ಮಂಗೋಲಿಯಾಗಳಲ್ಲಿ ಆಚರಿಸಲಾಗುತ್ತಿದೆ.[3] ತಂತ್ರವೆಂದರೇನೆಂಬುದಕ್ಕೆ ತೀವ್ರತರವಾದ ಅರ್ಥ ನೀಡಲು ಹಿಂದುಮುಂದು ನೋಡಿದರೂ, ಡೇವಿಡ್ ವೈಟ್ ರವರು ಈ ಕೆಳಗಿನ ವಿವರಣೆಯನ್ನು ಮುಂದೊಡ್ಡಿದ್ದಾರೆ:
ತಂತ್ರ ಎಂದರೆ ಏಷ್ಯಾದ ಒಂದು ನಂಬಿಕೆಗಳ ಹಾಗೂ ಆಚಾರಗಳ ವ್ಯವಸ್ಥೆಯಾಗಿದ್ದು, ನಾವಿರುವ ಹಾಗೂ ಅನುಭವಿಸುತ್ತಿರುವ ಜಗತ್ತು ದೇವದೇವನ ದೈವೀಕ ಶಕ್ತಿಯ ದೃಢವಾದ ಸ್ವರೂಪವಲ್ಲದೆ ಮತ್ತೇನೂ ಅಲ್ಲವೆಂಬ ತತ್ತ್ವದ ಮೇಲೆ ಆಧಾರಿತವಾಗಿದ್ದು, ಆ ಶಕ್ತಿಯೇ ಜಗದ ಸೃಷ್ಟಿ ಮತ್ತು ಸ್ಥಿತಿಯನ್ನು ನೋಡಿಕೊಳ್ಳುವುದೆಂಬ ನೀತಿಯನ್ನು ಹೊಂದಿದ್ದು, ಆ ಶಕ್ತಿಯನ್ನು ಆಚಾರಬದ್ಧವಾಗಿ ಸಂಪ್ರೀತಗೊಳಿಸಿ ಮಾನವನ ಪಿಂಡಾಂಡದಲ್ಲಿ ಆ ಶಕ್ತಿಯನ್ನು ಸೃಷ್ಟಿ ಮತ್ತು ವಿಮೋಚನಾ ವಿಧಿಗಳಲ್ಲಿ ಹರಿಯಬಿಡುವ ಯತ್ನದ ಕ್ರಮವಾಗಿದೆ.[4]
It has been suggested that some content from this article or section be split into a separate article titled Tantra in Hinduism. (Discuss) |