![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/4c/David-Beckham3.jpg/640px-David-Beckham3.jpg&w=640&q=50)
ಡೇವಿಡ್ ಬೆಕ್ಹ್ಯಾಮ್
From Wikipedia, the free encyclopedia
ಡೇವಿಡ್ ರಾಬರ್ಟ್ ಜೋಸೆಫ್ ಬೆಕ್ಹ್ಯಾಮ್ , OBE[2] (೧೯೭೫ ಮೇ ೨ ಜನನ)[3] ಒಬ್ಬ ಇಂಗ್ಲಿಷ್ ಫುಟ್ಬಾಲ್ ಆಟಗಾರ. ಮಿಡ್ಫೀಲ್ಡ್ನಲ್ಲಿ ಆಡುವ ಡೇವಿಡ್ ಬೆಕ್ಹ್ಯಾಮ್ ಪ್ರಸ್ತುತ ಅಮೆರಿಕಾದ ಮೇಜರ್ ಲೀಗ್ ಸಾಕರ್ ಕ್ಲಬ್ ಲಾಸ್ ಎಂಜಲೀಸ್ ಗ್ಯಾಲಕ್ಸಿ[4] ಮತ್ತು ಇಂಗ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ.FIFA ವಿಶ್ವದ ವರ್ಷದ ಆಟಗಾರ[5] ಸ್ಪರ್ಧೆಯಲ್ಲಿ ಎರಡು ಬಾರಿ ರನ್ನರ್ ಅಪ್ ಮತ್ತು 2004ರಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚು ವೇತನ ಪಡೆದ ಫುಟ್ಬಾಲ್ ಆಟಗಾರನೆಂಬ [6] ಹೆಗ್ಗಳಿಕೆಗೆ ಪಾತ್ರರಾಗಿರುವ ಬೆಕ್ಹ್ಯಾಮ್, 100 ಚಾಂಪಿಯನ್ ಲೀಗ್ ಪಂದ್ಯಗಳಲ್ಲಿ ಆಡಿದ ಮೊದಲ ಬ್ರಿಟೀಷ್ ಫುಟ್ಬಾಲ್ ಆಟಗಾರನೂ ಹೌದು.[5] 2003 ಮತ್ತು 2004ನೇ ಸಾಲಿನಲ್ಲಿ ಗೂಗಲ್ ಜಾಲತಾಣದಲ್ಲಿ ಇತರಾವುದೇ ಕ್ರೀಡೆಗೆ ಹೋಲಿಸಿದರೆ "ಡೇವಿಡ್ ಬೆಕ್ಹ್ಯಾಮ್" ಅತ್ಯಂತ ಹೆಚ್ಚು ಬಾರಿ ಹುಡುಕಲ್ಪಟ್ಟ ಆಟಗಾರ.[7] ಹೀಗೆ ಜಾಗತಿಕವಾಗಿ ಗುರುತಿಸಿಕೊಂಡಿದ್ದರಿಂದಾಗಿ ಬೆಕ್ಹ್ಯಾಮ್ ಜಾಹೀರಾತು ಬ್ರ್ಯಾಂಡ್ ಮತ್ತು ಅಗ್ರ ಫ್ಯಾಷನ್ ಐಕಾನ್ ಆಗಿ ಪರಿವರ್ತನೆಯಾದರು.[8][9] 2000[10], ನವೆಂಬರ್ 15ರಿಂದ 2006 FIFA ವಿಶ್ವ ಕಪ್ ಅಂತಿಮ ಪಂದ್ಯದವರೆಗೆ[11] ಇಂಗ್ಲೆಂಡ್ ತಂಡದ ನಾಯಕರಾಗಿದ್ದ ಬೆಕ್ಹ್ಯಾಮ್, ಈ ಅವಧಿಯಲ್ಲಿ 58 ಪಂದ್ಯಗಳಲ್ಲಿ ಆಡಿದ್ದಾರೆ. ಅಂದಿನಿಂದ ಶುರುವಾಗಿ ಇಂದಿನವರೆಗೂ ದೇಶವನ್ನು ಪ್ರತಿನಿಧಿಸುವುದನ್ನು ಬೆಕ್ಹ್ಯಾಮ್ ಮುಂದುವರಿಸಿದ್ದಾರೆ. 2008 ಮಾರ್ಚ್ 26ರಂದು ಫ್ರಾನ್ಸ್ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬೆಕ್ಹ್ಯಾಮ್ ಪ್ರತಿನಿಧಿಸಿದರು. ಬೆಕ್ಹಾಂಗೆ ಇದು ನೂರನೇ ಪಂದ್ಯವಾದ ಕಾರಣ ಈ ಪಂದ್ಯಕ್ಕೆ ಭಾರಿ ಪ್ರಚಾರವೂ ದೊರೆತಿತ್ತು.[12] ಇಂಗ್ಲೆಂಡ್ ತಂಡಕ್ಕಾಗಿ ಅತ್ಯಂತ ಹೆಚ್ಚು ಬಾರಿ ಆಡಿದ ದಾಖಲೆ ಬೆಕ್ಹ್ಯಾಮ್ ಹೆಸರಲ್ಲಿದ್ದು, 115 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.[13] ಮ್ಯಾಂಚೆಸ್ಟರ್ ಯುನೈಟೆಡ್ ಜೊತೆ ವೃತ್ತಿಪರ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಬೆಕ್ಹ್ಯಾಮ್ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು, 1992ರಲ್ಲಿ ತಮ್ಮ 17ನೇ ವಯಸ್ಸಿನಲ್ಲೇ ಚೊಚ್ಚಲ ಪಂದ್ಯ ಆಡಿದ್ದು ಅವರ ಹೆಗ್ಗಳಿಕೆ.[5] ಬೆಕ್ಹ್ಯಾಮ್ ಉಪಸ್ಥಿತಿಯಲ್ಲಿ ಯುನೈಟೆಡ್ ತಂಡ ಆರು ಬಾರಿ ಪ್ರೀಮಿಯರ್ ಲೀಗ್, ಎರಡು ಬಾರಿ FA ಕಪ್, ಮತ್ತು 1999ರಲ್ಲಿ UEFA ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯನ್ನು ಗೆದ್ದುಕೊಂಡಿತು.[5] 2003ರಲ್ಲಿ ರಿಯಲ್ ಮ್ಯಾಡ್ರಿಡ್ ತಂಡದೊಂದಿಗೆ ಕರಾರು ಮಾಡಿಕೊಳ್ಳುವ ಸಲುವಾಗಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಬೆಕ್ಹ್ಯಾಮ್ ತೊರೆದರು. ನಂತರದ ನಾಲ್ಕು ಸೀಸನ್ [14] ರಿಯಲ್ ಮ್ಯಾಡ್ರಿಡ್ ತಂಡದಲ್ಲಿ ಆಡಿದರು, ಅಲ್ಲದೆ ಅವರು ತಂಡದಲ್ಲಿದ್ದ ಕೊನೆಯ ವರ್ಷ ಲಾ ಲೀಗಾ ಚಾಂಪಿಯನ್ಶಿಪ್ಅನ್ನು ರಿಯಲ್ ಮ್ಯಾಡ್ರಿಡ್ ಗೆದ್ದುಕೊಂಡಿತು.[15] ಬೆಕ್ಹ್ಯಾಮ್ ಅವರು ರಿಯಲ್ ಮ್ಯಾಡ್ರಿಡ್ ತಂಡವನ್ನು ತೊರೆದು ಮೇಜರ್ ಲೀಗ್ ಸಾಕರ್ ಕ್ಲಬ್ ಲಾಸ್ ಎಂಜಲೀಸ್ ಗ್ಯಾಲಕ್ಸಿಯೊಂದಿಗೆ ಐದು ವರ್ಷಗಳ ಕರಾರಿಗೆ ಸಹಿ ಹಾಕುತ್ತಿದ್ದಾರೆಂದು 2007 ಜನವರಿಯಲ್ಲಿ ಘೋಷಿಸಲಾಯಿತು.[16] ಲಾಸ್ ಎಂಜಲೀಸ್ ಗ್ಯಾಲಕ್ಸಿ ಜೊತೆಗಿನ ಬೆಕ್ಹ್ಯಾಮ್ ಕರಾರು 2007 ಜುಲೈ 1ರಂದು ಕಾರ್ಯರೂಪಕ್ಕೆ ಬಂತು, ಗ್ಯಾಲಕ್ಸಿಯು ಬೆಕ್ಹ್ಯಾಮ್ಗೆ MLS ಇತಿಹಾಸದಲ್ಲೇ ಅತ್ಯಂತ ಹೆಚ್ಚು ವೇತನವನ್ನು ನೀಡಿತು.[17] 2007, 2008 ಮತ್ತು 2009ರಲ್ಲಿ ಗ್ಯಾಲಕ್ಸಿ ತಂಡಕ್ಕೆ ಬೆಕ್ಹ್ಯಾಮ್ ಆಡುವ ಕರಾರಿನ ಮೌಲ್ಯ ವರ್ಷಕ್ಕೆ $6.5m.[18][19][20] 2007 ಜುಲೈ 21ರಂದು ದಿ ಹೋಮ್ ಡೆಪಾಟ್ ಸೆಂಟರ್[21]ನಲ್ಲಿ ಚೆಲ್ಸಿಯಾ ತಂಡದ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದರು, ಇದು ಸ್ನೇಹಿ ಪಂದ್ಯವಾಗಿತ್ತು. ಅಗಸ್ಟ್ 15ರಂದು ಅಧಿಕೃತ ತಂಡದೊಂದಿಗೆ ಮೊದಲ ಬಾರಿ ಮೈದಾನಕ್ಕಿಳಿದ ಬೆಕ್ಹ್ಯಾಮ್ 2007 ಸೂಪರ್ಲೀಗಾ ಸೆಮಿ-ಫೈನಲ್ ಪಂದ್ಯದಲ್ಲಿ ಚೊಚ್ಚಲ ಗೋಲು ಹೊಡೆದರು.[22] ಅಗಸ್ಟ್ 18ರಂದು ಜಿಯಾಂಟ್ಸ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ಬೆಕ್ಹ್ಯಾಮ್ ಮೊದಲ ಲೀಗ್ ಪಂದ್ಯವನ್ನಾಡಿದರು.[23] ನಂತರದ ದಿನಗಳಲ್ಲಿ ಮಾಜಿ ಸ್ಪೈಸ್ ಹುಡುಗಿ ವಿಕ್ಟೋರಿಯಾ ಬೆಕ್ಹ್ಯಾಮ್ (ನೀ ಆಡಮ್ಸ್)ರನ್ನು ಬೆಕ್ಹ್ಯಾಮ್ ವಿವಾಹವಾದರು.[24] ಮೂವರು ಪುತ್ರರನ್ನು ಪಡೆದಿರುವ ಬೆಕ್ಹ್ಯಾಮ್ ದಂಪತಿಗಳು ಪ್ರಸ್ತುತ ಕ್ಯಾಲಿಫೋರ್ನಿಯಾದ ಬೇವರ್ಲಿ ಹಿಲ್ಸ್ನಲ್ಲಿ ವಾಸಿಸುತ್ತಿದ್ದಾರೆ.
![]() | |||
Personal information | |||
---|---|---|---|
Full name | David Robert Joseph Beckham | ||
Date of birth | (1975-05-02) ೨ ಮೇ ೧೯೭೫ (ವಯಸ್ಸು ೪೯) | ||
Place of birth | Leytonstone, ಲಂಡನ್, ಇಂಗ್ಲೆಂಡ್ | ||
Height | 6 ft 0 in (1.83 m)[1] | ||
Playing position | Midfielder | ||
Club information | |||
Current club | Los Angeles Galaxy | ||
Number | 23 | ||
Youth career | |||
Brimsdown Rovers | |||
1987–1991 | Tottenham Hotspur | ||
1991–1993 | Manchester United | ||
Senior career* | |||
Years | Team | Apps† | (Gls)† |
1993–2003 | Manchester United | 265 | (62) |
1995 | → Preston North End (loan) | 5 | (2) |
2003–2007 | Real Madrid | 116 | (13) |
2007– | Los Angeles Galaxy | 42 | (7) |
2009 | → Milan (loan) | 18 | (2) |
National team‡ | |||
1994–1996 | England U-21 | 9 | (0) |
1996– | England | 115 | (17) |
† Appearances (Goals). |