ಡೇನಿಯಲ್ ವೆಟ್ಟೊರಿ
From Wikipedia, the free encyclopedia
ಡೇನಿಯಲ್ ಲುಕಾ ವೆಟ್ಟೊರಿ (ಜನನ 27 ಜನವರಿ 1979) ಒಬ್ಬ ಕ್ರಿಕೆಟ್ ಆಟಗಾರ ಹಾಗು ನ್ಯೂಜಿಲೆಂಡ್ ಕ್ರಿಕೆಟ್ ತಂಡ ದ ಹಾಲಿ ನಾಯಕ. ಈತ ಟೆಸ್ಟ್ ಕ್ರಿಕೆಟ್ ನ ಇತಿಹಾಸದಲ್ಲಿ 300 ವಿಕೆಟ್ ಗಳನ್ನು ಹಾಗು 3,000 ರನ್ನುಗಳನ್ನು ಗಳಿಸಿದ ಎಂಟನೇ ಆಟಗಾರ. ಕಳೆದ 1996-97ರಲ್ಲಿ ತನ್ನ 18ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ ಮಾಡಿ, ಟೆಸ್ಟ್ ಕ್ರಿಕೆಟ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರನಾಗಿದ್ದಾನೆ. ವೆಟ್ಟೊರಿ ಒಬ್ಬ ಬೌಲಿಂಗ್ ಆಲ್ ರೌಂಡರ್, ಈತ ನಿಧಾನಗತಿಯ ಎಡಗೈ ಸಾಂಪ್ರದಾಯಿಕ ಸ್ಪಿನ್ ಬೌಲಿಂಗ್ ಮಾಡುತ್ತಾನೆ. ಈತ ಅದ್ಭುತವಾಗಿ ಚೆಂಡನ್ನು ತಿರುಗಿಸುವುದಕ್ಕಾಗಲಿ ಅಥವಾ ಅತಿ ಸೂಕ್ಷ್ಮ ನಿಖರತೆಗಿಂತ ಹೆಚ್ಚಾಗಿ ತನ್ನ ಬೌಲಿಂಗ್ನಲ್ಲಿ ಫ್ಲೈಟ್ ಹಾಗು ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಈತನ ಬ್ಯಾಟಿಂಗ್ ಸರಾಸರಿ ಸುಮಾರು 30ರಷ್ಟಿದೆ. ಇದು ಈತನನ್ನು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಒಬ್ಬ ಸ್ಥಿರ ಹಾಗು ಉತ್ತಮ ಬ್ಯಾಟ್ಸ್ಮ್ಯಾನ್ನನ್ನಾಗಿ ರೂಪಿಸಿದೆ.
ಡೇನಿಯಲ್ ವೆಟ್ಟೊರಿ | |||||||||
Daniel Vettori at the University Oval in 2009 |
ಚಿತ್ರ:Flag of ನ್ಯೂಜಿಲೆಂಡ್.svg [[ ಕ್ರಿಕೆಟ್ ತಂಡ|]] | ||||||||
ವೈಯಕ್ತಿಕ ಮಾಹಿತಿ | |||||||||
---|---|---|---|---|---|---|---|---|---|
ಪೂರ್ಣಹೆಸರು | ಡೇನಿಯಲ್ ಲುಕಾ ವೆಟ್ಟೊರಿ | ||||||||
ಅಡ್ಡಹೆಸರು | Dan | ||||||||
ಹುಟ್ಟು | 1 27 1979 | ||||||||
Auckland, New Zealand | |||||||||
ಎತ್ತರ | 6 ft 3 in (1.91 m) | ||||||||
ಪಾತ್ರ | All-rounder, New Zealand captain | ||||||||
ಬ್ಯಾಟಿಂಗ್ ಶೈಲಿ | Left-handed | ||||||||
ಬೌಲಿಂಗ್ ಶೈಲಿ | Slow left-arm orthodox | ||||||||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | |||||||||
ಟೆಸ್ಟ್ ಪಾದಾರ್ಪಣೆ (cap 200) | 6 February 1997: v England | ||||||||
ಕೊನೆಯ ಟೆಸ್ಟ್ ಪಂದ್ಯ | 11 December 2009: v Pakistan | ||||||||
ODI ಪಾದಾರ್ಪಣೆ (cap 100) | 25 March 1997: v Sri Lanka | ||||||||
ಕೊನೆಯ ODI ಪಂದ್ಯ | 9 November 2009: v Pakistan | ||||||||
ODI ಅಂಗಿಯ ಸಂಖ್ಯೆ | 11 | ||||||||
ಪ್ರಾದೇಶಿಕ ತಂಡದ ಮಾಹಿತಿ | |||||||||
ವರ್ಷಗಳು | ತಂಡ | ||||||||
1996 – present | Northern Districts | ||||||||
2006 | Warwickshire | ||||||||
2003 | Nottinghamshire | ||||||||
2008-present | Queensland | ||||||||
ವೃತ್ತಿಜೀವನದ ಅಂಕಿಅಂಶಗಳು | |||||||||
ಟೆಸ್ಟ್ | ODI | FC | LA | ||||||
ಪಂದ್ಯಗಳು | 98 | 255 | 150 | 322 | |||||
ಒಟ್ಟು ರನ್ನುಗಳು | 3,802 | 1,895 | 5,649 | 3,149 | |||||
ಬ್ಯಾಟಿಂಗ್ ಸರಾಸರಿ | 30.41 | 17.07 | 30.53 | 20.44 | |||||
೧೦೦/೫೦ | 5/21 | 0/4 | 8/31 | 2/10 | |||||
ಅತೀ ಹೆಚ್ಚು ರನ್ನುಗಳು | 140 | 83 | 140 | 138 | |||||
ಬೌಲ್ ಮಾಡಿದ ಚೆಂಡುಗಳು | 24,352 | 12,111 | 35,077 | 15,529 | |||||
ವಿಕೆಟ್ಗಳು | 318 | 268 | 492 | 347 | |||||
ಬೌಲಿಂಗ್ ಸರಾಸರಿ | 33.61 | 31.22 | 31.70 | 30.40 | |||||
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | 18 | 2 | 28 | 2 | |||||
೧೦ ವಿಕೆಟುಗಳು ಪಂದ್ಯದಲ್ಲಿ | 3 | n/a | 3 | n/a | |||||
ಶ್ರೇಷ್ಠ ಬೌಲಿಂಗ್ | 7/87 | 5/7 | 7/87 | 5/7 | |||||
ಕ್ಯಾಚುಗಳು /ಸ್ಟಂಪಿಂಗ್ಗಳು | 55/– | 71/– | 79/– | 102/– | |||||
ದಿನಾಂಕ 16 March, 2010 ವರೆಗೆ. |
ಈತ ಆಕ್ಲಂಡ್ ನಲ್ಲಿ ಹುಟ್ಟಿ ಹ್ಯಾಮಿಲ್ಟನ್ ನಲ್ಲಿ ಬೆಳೆದಿದ್ದಾನೆ. ಇವನು ಕ್ರಮವಾಗಿ ಮರಿಯನ್ ಶಾಲೆ ಹಾಗು St. ಪಾಲ್'ಸ್ ಕಾಲೇಜಿಯೇಟ್ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ. ತನ್ನ ಬಿಡುವಿನ ಅವಧಿಯಲ್ಲಿ, ಈತ ನಾರ್ತ್ಹನ್ ಡಿಸ್ಟ್ರಿಕ್ಟ್ಸ್ ಪರವಾಗಿ ಪ್ರಾಂತೀಯ ಕ್ರಿಕೆಟ್ ನ್ನು ಆಡುವುದರ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಪರ ಆಡುವ ಅಂತಾರಾಷ್ಟ್ರೀಯ ಆಟಗಾರ. ವೆಟ್ಟೊರಿ KFC ಟ್ವೆಂಟಿ20 ಬಿಗ್ ಬ್ಯಾಷ್ ಕ್ವೀನ್ಸ್ ಲ್ಯಾಂಡ್ ಬುಲ್ಲ್ಸ್ ತಂಡವನ್ನೂ ಸಹ ಪ್ರತಿನಿಧಿಸುತ್ತಾನೆ. ಆಟವನ್ನು ಆಡುವಾಗ ವೈದ್ಯರ ಸಲಹೆಯ ಮೇರೆಗೆ ಕನ್ನಡಕ ವನ್ನು ಧರಿಸುವ ಕೆಲವೇ ಕೆಲವು ಅಂತಾರಾಷ್ಟ್ರೀಯ ಕ್ರೀಡಾಪಟುಗಳಲ್ಲಿ ಒಬ್ಬ ಹಾಗು ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುವ ಮೊದಲ ಇಟಲಿಯನ್ ಸಂತತಿಯ ಕ್ರಿಕೆಟ್ ಆಟಗಾರ.