ಡಿಪ್ಟೆರೋಕಾರ್ಪ್ಸ್
From Wikipedia, the free encyclopedia
ಡಿಪ್ಟೆರೋಕಾರ್ಪಸ್ ಎಂಬುದು ಹೂಬಿಡುವ ಸಸ್ಯಗಳ ಒಂದು ವರ್ಗವಾಗಿದೆ. ಇದು ಡಿಪ್ಟೆರೋಕಾರ್ಪಾಸಿಯ ಕುಟುಂಬದ ಪ್ರಭೇದವಾಗಿದೆ. ಡಿಪ್ಟೆರೋಕಾರ್ಪ್ಸ್ನಲ್ಲಿ ಸುಮಾರು ೭೦ ಜಾತಿಗಳಿವೆ.
Quick Facts ಡಿಪ್ಟೆರೋಕಾರ್ಪ್ಸ್, Scientific classification ...
Close
ಇದರ ಹೆಸರು ಗ್ರೀಕ್ ಭಾಷೆಯಿಂದ ಬಂದಿದೆ ಮತ್ತು "ಎರಡು ರೆಕ್ಕೆಯ ಹಣ್ಣುಗಳು" ಎಂದರ್ಥ.[1]
ಡಿಪ್ಟರೊಕಾರ್ಪೇಸೀ - ದ್ವಿದಳ ಸಸ್ಯಗಳ ಗುಂಪಿಗೆ ಸೇರಿದ ಒಂದು ಕುಟುಂಬ. ಸಾಲ್ (ಬಿಳೇಭೋಗಿ-ಶೋರಿಯ), ಜಾಲಾರಿ, ಕಿರಲ್ಬೋಗಿ (ಹೊಪಿಯ) ಮುಂತಾದ ಮರಗಳು ಈ ಕುಟುಂಬಕ್ಕೆ ಸೇರಿವೆ. ಇವು ಉಷ್ಣವಲಯದ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಬೆಳೆಯುತ್ತವೆ. ಭಾರತ, ಮಲಯ, ಬರ್ಮ ಮುಂತಾದ ದೇಶಗಳಲ್ಲಿ ಹೇರಳವಾಗಿ ಕಾಣದೊರೆಯುವುವು. ಬಲು ಎತ್ತರಕ್ಕೆ ಬೆಳೆಯುವ ವೃಕ್ಷಗಳಲ್ಲಿ ಇವು ಪ್ರಧಾನವಾದವು. ಇವುಗಳ ಕೊಂಬೆಗಳು ಬಲು ಕಡಿಮೆ. ಭಾರತದಲ್ಲಿ ಅಸ್ಸಾಮ್, ಪಶ್ಚಿಮಘಟ್ಟಗಳು, ದಂಡಕಾರಣ್ಯ ಮುಂತಾದೆಡೆಗಳಲ್ಲಿ ಈ ಕುಟುಂಬದ ವೃಕ್ಷಗಳ ವ್ಯಾಪ್ತಿ ಹೆಚ್ಚು.