![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/50/Montage_of_Toronto_7.jpg/640px-Montage_of_Toronto_7.jpg&w=640&q=50)
ಟೊರಾಂಟೊ ನಗರ
From Wikipedia, the free encyclopedia
ಟೊರಾಂಟೋ, ಕೆನಡಾ ದೇಶದ ಅತಿ ದೊಡ್ಡ ನಗರ. [2] ಆಂಟೇರಿಯೋ ರಾಜ್ಯದ ವಾಣಿಜ್ಯ ರಾಜಧಾನಿ ಎಂದು ಕರೆಯಲ್ಪಡುತ್ತದೆ. ಟೊರಾಂಟೋ ನಗರ, ದಕ್ಷಿಣ ಆಂಟೇರಿಯೋ ಸರೋವರದ ಉತ್ತರ, ಪಶ್ಚಿಮ ದಡದ ಬಳಿಯಿದೆ. ಟೊರಾಂಟೊ, ಕೆನಡಾದ ಅತ್ಯಾಧುನಿಕ ನಗರಗಳಲ್ಲೊಂದೆಂದು ಪತ್ರಿಕೆ,ಮೀಡಿಯಾಗಳಲ್ಲಿ ದಾಖಲಾಗಿದೆ. ಕೆನಡಾದ ಇತಿಹಾಸದ ಪ್ರಕಾರ, ೧೮ ನೆಯ ಶತಮಾನದ ಮೊದಲಲ್ಲಿ ಬ್ರಿಟಿಷ್ ರಾಜಪರಿವಾರ ಇಲ್ಲಿನ ಜಾಗವನ್ನು ಮಿಸ್ಸಿಸಾಗುವಾಸ್ ರಿಂದ ಖರೀದಿಸಿದರು. ಮೊದಲು ಈ ಪ್ರದೇಶವನ್ನು 'ಯಾರ್ಕ್' ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶವನ್ನು ಉತ್ತರ ಕೆನಡಾದ ರಾಜಧಾನಿಯನ್ನಾಗಿ ಮಾಡಲು ಲೆಫ್ಟಿನೆಂಟ್ ಗವರ್ನರ್ 'ಜಾನ್ ಗ್ರೆವ್ಸ್ ಸಿಮ್ಕೋ' ಬಹಳವಾಗಿ ಶ್ರಮಿಸಿದರು. ೧೮೧೨ ರ ಕೆನಡಾ-ಅಮೆರಿಕ ಯುದ್ಧದಲ್ಲಿ ಅಮೆರಿಕನ್ ಮಿಲಿಟರಿ ಸೈನಿಕರು ನಗರವನ್ನು ಕೊಳ್ಳೆಹೊಡೆದು ಸಂಪತ್ತನ್ನೆಲ್ಲಾ ದೋಚಿಕೊಂಡುಹೋದರು. ೧೮೩೪ ರಲ್ಲಿ ಯಾರ್ಕ್ ನಗರಕ್ಕೆ 'ಟೊರಾಂಟೊ' ಎಂಬ ಒಂದು ಹೊಸ ಹೆಸರನ್ನು ಕೊಟ್ಟರು. ೧೮೪೯ ಮತ್ತು ೧೯೦೪ ರಲ್ಲಿ ಆದ ಬೆಂಕಿ ಅಪಘಾತದಲ್ಲಿ ಈ ನಗರ ಬಹಳವಾಗಿ ನಲುಗಿತ್ತು. ಮುಂದಿನ ದಿನಗಳಲ್ಲಿ ಅದು ಅಕ್ಕಪಕ್ಕದ ಮುನಿಸಿಪಾಲಿಟಿಗಳನ್ನೂ ಸೇರಿಕೊಳ್ಳುತ್ತಾ ೧೯೯೮ ರಲ್ಲೂ ಸೇರಿದಂತೆ, ಬೆಳೆಯುತ್ತಾ ವಿಸ್ತಾರವಾಗುತ್ತಾ ಹೋಯಿತು. ೨೦೧೧ ರ ಜನಸಂಖೆಯ ಪ್ರಕಾರ,ನಗರದ ಜನಸಂಖ್ಯೆ ೨.೬ ಮಿ. ಈಗ ಉತ್ತರ ಅಮೇರಿಕಾ ಖಂಡದ ೫ ನೆಯ ಅತಿ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲೊಂದಾಗಿದೆ.
Toronto | |
---|---|
Single-tier municipality (city) | |
ಸಿಟಿ ಆಫ್ ಟೊರಾಂಟೋ | |
![]() From top left: Downtown Toronto featuring the CN Tower and Financial District from the Toronto Islands, City Hall, the Ontario Legislative Building, Casa Loma, Prince Edward Viaduct, and the Scarborough Bluffs | |
Coat of arms of Toronto Coat of arms | |
Nickname(s): T.O., T-Dot, Hogtown, The Queen City, Toronto the Good, The City Within a Park | |
Motto: Diversity Our Strength | |
![]() Location of Toronto and its census metropolitan area in the province of Ontario | |
Country | ![]() |
Province | ![]() |
Districts | East York, Etobicoke, North York, Old Toronto, Scarborough, York |
Established | August 27, 1793 (as York) |
Incorporated | March 6, 1834 (as Toronto) |
Amalgamated | January 1, 1998 (from Metropolitan Toronto) |
Government | |
• Type | Mayor-council |
• Mayor | Rob Ford |
• Deputy Mayor | Norm Kelly |
• Council | Toronto City Council |
• MPs | List of MPs
|
• MPPs | List of MPPs
|
Area | |
• Single-tier municipality (city) | ೬೩೦ km೨ (೨೪೦ sq mi) |
• Urban | ೧,೭೪೯ km೨ (೬೭೫ sq mi) |
• Metro | ೭,೧೨೫ km೨ (೨,೭೫೧ sq mi) |
Elevation | ೭೬ m (೨೪೯ ft) |
Population (2011)[1] | |
• Single-tier municipality (city) | ೨೬,೧೫,೦೬೦ (೧st) |
• Density | ೪,೧೪೯/km೨ (೧೦,೭೫೦/sq mi) |
• Urban | ೫೧,೩೨,೭೯೪ (೧st) |
• Metro | ೫೫,೮೩,೦೬೪ (೧st) |
Demonym | Torontonian |
Time zone | UTC-5 (EST) |
• Summer (DST) | UTC-4 (EDT) |
Postal code span | M |
Area code(s) | 416, 437, 647 |
NTS Map | 030M11 |
GNBC Code | FEUZB |
Website | www |
ಇದು ಉತ್ತರ ಅಮೇರಿಕದಲ್ಲಿ ಐದನೇ ಹೆಚ್ಚು ಜನದಟ್ಟಣೆಯ ನಗರ. ಸುಮಾರು ೨೬ ಲಕ್ಷ ಜನ ಇಲ್ಲಿದ್ದಾರೆ. ಟೊರಾಂಟೋ ಮಹಾನಗರ ಕ್ಷೇತ್ರದಲ್ಲಿ ೫೫ ಲಕ್ಷ ಜನ ವಾಸವಾಗಿದ್ದಾರೆ. ಜಗತ್ತಿನ ಎಲ್ಲೆಡೆಯಿಂದ ಬಂದು ಇಲ್ಲಿ ನೆಲೆಸಿರುವ ಜನರೇ ಬಹಳ. ಇಲ್ಲಿರುವ ಜನರಲ್ಲಿ ಸುಮಾರು ಅರ್ಧದಷ್ಟು ಜನ ಹುಟ್ಟಿದ್ದು, ಕೆನಡಾ ದೇಶದ ಹೊರಗಡೆ. ಟೊರಾಂಟೋ ನಗರವು ಜಗತ್ತಿನಲ್ಲಿಯೇ ವಾಸಿಸಲು ಅತ್ಯಂತ ಅನುಕೂಲವಾದ ನಾಗರಿಕ ಸೌಲಭ್ಯಗಳನ್ನು ಹೊಂದಿದ ನಗರಗಳಲ್ಲಿ ಒಂದಾಗಿದೆ. ಟೊರಾಂಟೋ ಕೆನಡಾ ದೇಶದ ಆರ್ಥಿಕ ರಾಜಧಾನಿಯಾಗಿದೆ.