ಟೊಯೋಟಾ ಅಭಿವೃದ್ಧಿಪಡಿಸಿದ ನಿರ್ವಹಣಾ ತತ್ವಶಾಸ್ತ್ರ ಮತ್ತು ಅಭ್ಯಾಸಗಳನ್ನು ಒಳಗೊಂದ ಸಮಗ್ರ ಸಾಮಾಜಿಕ-ತಾಂತ್ರಿ From Wikipedia, the free encyclopedia
ಟೊಯೋಟಾ ಪ್ರೊಡಕ್ಷನ್ ಸಿಸ್ಟಮ್ (ಟಿಪಿಎಸ್) (ಆಂಗ್ಲ:Toyota Production System (TPS)) ಟೊಯೋಟಾ ಅಭಿವೃದ್ಧಿಪಡಿಸಿದ ನಿರ್ವಹಣಾ ತತ್ವಶಾಸ್ತ್ರ ಮತ್ತು ಅಭ್ಯಾಸಗಳನ್ನು ಒಳಗೊಂಡ ಸಮಗ್ರ ಸಾಮಾಜಿಕ-ತಾಂತ್ರಿಕ ವ್ಯವಸ್ಥೆಯಾಗಿದೆ.
ಟಿಪಿಎಸ್ ಸರಬರಾಜುದಾರರು ಮತ್ತು ಗ್ರಾಹಕರೊಂದಿಗೆ ಸಂವಹನ ಸೇರಿದಂತೆ ವಾಹನ ತಯಾರಕರಿಗೆ ಉತ್ಪಾದನೆ ಮತ್ತು ಜಾರಿ ವ್ಯವಸ್ಥೆಯನ್ನು ಆಯೋಜಿಸುತ್ತದೆ. ಈ ವ್ಯವಸ್ಥೆಯು ಹೆಚ್ಚು ಸಾಮಾನ್ಯವಾದ "ನೇರ ಉತ್ಪಾದನೆಯ(Lean Manufacturing)" ಒಂದು ಪ್ರಮುಖ ಮುನ್ಸೂಚಕವಾಗಿದೆ. ಜಪಾನಿನ ಕೈಗಾರಿಕಾ ಎಂಜಿನಿಯರುಗಳಾದ ತೈಚಿ ಓನೋ ಮತ್ತು ಈಜಿ ಟೊಯೋಡಾ 1948 ಮತ್ತು 1975 ರ ನಡುವೆ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು.[1]ಮೂಲತಃ "ಜಸ್ಟ್-ಇನ್-ಟೈಮ್ ಪ್ರೊಡಕ್ಷನ್" ಎಂದು ಕರೆಯಲ್ಪಡುವ ಈ ವಿಧಾನ, ಟೊಯೋಟಾದ ಸ್ಥಾಪಕರಾದ ಸಕಚಿ ಟೊಯೋಡಾ, ಅವರ ಮಗ ಕೀಚಿಯೊ ಟೊಯೋಡಾ ಮತ್ತು ಎಂಜಿನಿಯರ್ ತೈಚಿ ಒನೊ ಸೃಷ್ಟಿಸಿದ ವಿಧಾನದ ಮೇಲೆ ನಿರ್ಮಿತವಾಗುತ್ತದೆ. ಟಿಪಿಎಸ್ ಆಧಾರವಾಗಿರುವ ತತ್ವಗಳನ್ನು ಟಯೋಟಾ ಉತ್ಪಾದನಾ ವ್ಯವಸ್ಥೆಯಲ್ಲಿ ಮತ್ತು ನಿರ್ವಹಣಾ ವಿಧಾನದಲ್ಲಿ ಆಧಾರವಾಗಿರುವ ತತ್ವಗಳ ಮತ್ತು ನಡವಳಿಕೆಗಳ ಗಣವಾದ ದಿ ಟೊಯೋಟಾ ವೇ ದಲ್ಲಿ ಅಳವಡಿಸಲಾಗಿದೆ.
ಟಿಪಿಎಸ್ ನ ಮುಖ್ಯ ಉದ್ದೇಶಗಳು ಅತಿಹೊರೆ (ಮುರಿ) ಮತ್ತು ಅಸಮಂಜತತೆ (ಮುರಾ) ಇವುಗಳನ್ನು ಇಲ್ಲದಂತೆ ಮಾಡುವುದು ಮತ್ತು ಪೋಲು(ದುಂದುವೆಚ್ಚ)ನ್ನು (ಮುಡಾ) ತೊಡೆದುಹಾಕುವಿಕೆ ಆಗಿದೆ.
ಸಂಸ್ಕರಣಾ ಪ್ರಮಿತಿಯ ವಿತರಣೆಯ ಮೇಲಿನ ಅತ್ಯಂತ ಮಹತ್ವದ ಪರಿಣಾಮಗಳು ಅಗತ್ಯವಿರುವ ಫಲಿತಾಂಶಗಳನ್ನು ಸಲೀಸಾಗಿ ತಲುಪಿಸುವ ಅಸಮಂಜತತೆಯನ್ನು ನಿವಾರಿಸುವ ಸಂಸ್ಕರಣೆಯನ್ನು ವಿನ್ಯಾಸಗೊಳಿಸುವ ಮೂಲಕ ಸಾಧಿಸಲಾಗುತ್ತದೆ.
ಒತ್ತಡವು "ಮುಡಾ" (ಪೋಲು) ವನ್ನು ಉತ್ಪತ್ತಿ ಮಾಡುವ ಕಾರಣದಿಂದಾಗಿ ಸಂಸ್ಕರಣೆಯನ್ನು "ಮುರಿ" (ಅತಿಹೊರೆ) ಇಲ್ಲದೆಯೇ ಅವಶ್ಯಕವಾದಷ್ಟು ಹೊಂದಿಕೊಳ್ಳುವ ಎಂದು ಖಾತ್ರಿಪಡಿಸುವುದು ಕೂಡಾ ನಿರ್ಣಾಯಕವಾಗಿದೆ. ಅಂತಿಮವಾಗಿ ಪೋಲು(ದುಂದುವೆಚ್ಚ)ನ (ಮುಡಾ) ಕಡಿತ ಅಥವಾ ಅದನ್ನು ತೊಡೆದುಹಾಕುವ ಕೌಶಲ್ಯಯುತ ಸುಧಾರಣೆಗಳು ಬಹಳ ಮೌಲ್ಯಯುತವಾಗಿವೆ.
ಟಿಪಿಎಸ್ ನಲ್ಲಿ ಈ ಕೆಳಕಂಡ ಎಂಟು ವಿಧಗಳ "ಪೋಲು (ಮುಡಾ) ಗಳ ಬಗ್ಗೆ ಯೋಚನೆ ಮಾಡಲಾಗುತ್ತದೆ.[2]
ಟಿಪಿಎಸ್ ನ ಪರಿಣಾಮಗಳನ್ನು ಅವಲೋಕಿಸಿದಾಗ ಮೂರರಲ್ಲಿ ಪೋಲು(ದುಂದುವೆಚ್ಚ)ನ್ನು (ಮುಡಾ) ತೊಡೆದುಹಾಕುವಿಕೆಯು ಕಾರ್ಯಗತಗೊಳಿಸಲು ಸುಲಭವಾಗಿರುವುದರಿಂದ ಬಹಳ ಜನರ ಆಲೋಚನೆಗಳಲ್ಲಿ ಪ್ರಭಾವ ಬೀರಿರುವುದು. ಟಿಪಿಎಸ್ ನಲ್ಲಿ ಬಹಳ ಪ್ರಾರಂಭಿಕೆಗಳು, ಅಸಮಂಜತತೆ (ಮುರಾ) ಮತ್ತು ಅತ್ಯೋಟದ ಕಡಿತವು, ಪೋಲಾಗುವುದನ್ನು ನಿವಾರಿಸುವುದರಿಂದ, ಅ ಕಡಿತಗಳ ಮೇಲೆ ನಿರ್ದಿಷ್ಟ ಗಮನ ವಿಲ್ಲದೆಯೂ ಪ್ರಚೋದಿಸಿಲ್ಪಡುವವು.
ಟೋಯೋಟಾ ಮೊಟಾರ್ ಕಾರ್ಪೋರೆಶನ್ ೧೯೯೨ರಲ್ಲಿ ಮೊದಲ ಬಾರಿಗೆ ಟಿಪಿಎಸ್ ನ ಅಧಿಕೃತ ವಿವರಣೆಯನ್ನು ಪ್ರಕಾಶಿಸಿತು; ಈ ಕಿರುಪುಸ್ತಕವು ೧೯೯೮ ರಲ್ಲಿ ಪರಿಷ್ಕರಿಸಲ್ಪಟ್ಟಿತು.[3]ಮುನ್ನುಡಿಯಲ್ಲಿ "ಪೋಲನ್ನು ತೊಡೆದುಹಾಕುವ ಮೂಲಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಟಿಪಿಎಸ್(TPS) ಒಂದು ಚೌಕಟ್ಟಾಗಿದೆ" ಎಂದು ಹೇಳಲಾಗಿದೆ: ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಜನರು ಗ್ರಾಹಕರಿಗೆ ಮೌಲ್ಯವನ್ನು ಉತ್ಪಾದಿಸದೆ ಇರುವ ವಸ್ತು, ಶ್ರಮ ಮತ್ತು ಸಮಯದ ಖರ್ಚುಗಳನ್ನು ಗುರುತಿಸಲು ಕಲಿಯುತ್ತಾರೆ ಮತ್ತು ಇದಲ್ಲದೆ, 'ಇದು ಹೇಗೆ' ಎನ್ನುವ ವಿಧಾನವು ತಪ್ಪುವುದು ನಮ್ಮೊಂದಿಗಿರುವುದು. ಈ ಕಿರುಪುಸ್ತಕವು ಕೈಪಿಡಿಯಲ್ಲ. ಬದಲಿಗೆ, ಇದು ನಮ್ಮ ಉತ್ಪಾದನಾ ಪದ್ದತಿಯ ಆಧಾರದ ಮೇಲೆ ಪರಿಕಲ್ಪನೆಗಳ ಅವಲೋಕನವಾಗಿದೆ. ಇದು ಸಕಾರಾತ್ಮಕ ಬದಲಾವಣೆಗೆ ಬದ್ಧತೆಯೊಂದರಲ್ಲಿ ನಿರ್ವಹಣೆ ಮತ್ತು ಉದ್ಯೋಗಿಗಳು ಒಟ್ಟುಗೂಡಿದಾಗ ಎಲ್ಲೆಲ್ಲಿ ಮತ್ತು ಯಾವಾಗಾವಾಗ ಉತ್ಪಾದಕತೆ ಮತ್ತು ಗುಣಮಟ್ಟದಲ್ಲಿ ಶಾಶ್ವತವಾದ ಲಾಭಗಳು ಸಾಧ್ಯವೆಂದು ನೆನಪಿಸುವುದು. ಟಿಪಿಎಸ್ ಪರಿಕಲ್ಪನೆಯ ಎರಡು ಪ್ರಮುಖ ಸ್ತಂಭಗಳಲ್ಲಿ ಆಧಾರವಾಗಿದೆ:
ಟೊಯೋಟಾ ಈ ಪರಿಕಲ್ಪನೆಗಳನ್ನು ಕಂಪೆನಿ ಮತ್ತು ವ್ಯವಹಾರದಲ್ಲಿನ ನಿರ್ದಿಷ್ಟ ಅವಶ್ಯಕತೆಗಳಿಗೆ ಮತ್ತು ಷರತ್ತುಗಳಿಗೆ ಆಚರಣೆಗೆ ತರಲು ಮತ್ತು ಅವುಗಳನ್ನು ಅನ್ವಯಿಸಲು ಹಲವಾರು ಪರಿಕರಗಳನ್ನು ಅಭಿವೃದ್ಧಿಪಡಿಸಿದೆ.
ಈ ವ್ಯವಸ್ಥೆಯು, ಕಂಪನಿಯ ಯಾವುದೇ ಇತರ ಅಂಶಗಳಿಗಿಂತ ಹೆಚ್ಚು, ಟೊಯೋಟಾ ಕಂಪೆನಿಯು ಇಂದಿನ ಕಂಪೆನಿಯಾಗಿರುವುದಕ್ಕೆ ಕಾರಣವಾಗಿದೆ. ಟೊಯೊಟಾ ವಾಹನ ತಯಾರಿಕಾ ಮತ್ತು ಉತ್ಪಾದನಾ ಉದ್ಯಮದಲ್ಲಿ ದೀರ್ಘಕಾಲದಿಂದ ನಾಯಕನಾಗಿ ಗುರುತಿಸಲ್ಪಟ್ಟಿದೆ.[6] ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಟಿಪಿಎಸ್ ಹಿಂದಿರುವ ವಿಜ್ಞಾನವಾಗಿದೆ.
ಟೊಯೋಟಾ ತಮ್ಮ ವ್ಯವಸ್ಥೆಗೆ ಸ್ಫೂರ್ತಿಯನ್ನು "ಅಮೆರಿಕಾದ ಆಟೋಮೋಟಿವ್ ಉದ್ಯಮದಿಂದಲ್ಲ(ಆ ಸಮಯದಲ್ಲಿ ವಿಶ್ವದ ಅತಿದೊಡ್ಡ ಅತಿದೊಡ್ಡ), ಆದರೆ ಒಂದು ಸೂಪರ್ಮಾರ್ಕೆಟ್ ಅನ್ನು ಭೇಟಿ ಮಾಡುವುದರಿಂದ ಪಡೆಯಿತು" ಎಂಬುದು ಕಟ್ಟುಕತೆ.
ಟೊಯೋಟಾ ಸಂಸ್ಥೆಯ ಸ್ಥಾಪಕರಾದ ಕೈಚಿರೋ ಟೊಯೋಡಾರಿಂದ ಜಸ್ಟ್-ಇನ್-ಟೈಮ್ ಪ್ರಡಕ್ಷನ್ ಎಂಬ ಕಲ್ಪನೆಯ ಉಗಮವಾಯಿತು.[7] ಈ ಕಲ್ಪನೆಯನ್ನು ಹೇಗೆ ಕಾರ್ಯಗತಗೊಳಿಸುವುದು ಎನ್ನುವುದು ಸವಾಲಾಗಿತ್ತು. ಅಮೇರಿಕನ್ ಸೂಪರ್ಮಾರ್ಕೆಟ್ಗಳ ವಿವರಣೆಗಳನ್ನು ಓದಿದಾಗ, ಓಹ್ನೋ ಅವರು ಕಾರ್ಖಾನೆಯಲ್ಲಿ ಸಾಧಿಸಲು ಪ್ರಯತ್ನಿಸುತ್ತಿರುವುದಕ್ಕೆ ಮಾದರಿಯಾಗಿ ಸೂಪರ್ ಮಾರ್ಕೆಟ್ ಅನ್ನು ಕಂಡರು. ಒಂದು ಸೂಪರ್ ಮಾರ್ಕೆಟ್ನಲ್ಲಿ ಗ್ರಾಹಕನು ಖರೀದಿಸುವಾಗ ಶೆಲ್ಫ್ನಿಂದ ಬಯಸಿದ ಮೊತ್ತದ ಸರಕುಗಳನ್ನು ತೆಗೆದುಕೊಳ್ಳುತ್ತಾರೆ. ಶೇಖರಣಾ ಜಾಗವು ಸಾಕಷ್ಟು ಹೊಸ ಉತ್ಪನ್ನದೊಂದಿಗೆ ಶೆಲ್ಫ್ ಅನ್ನು ಮರುಸ್ಥಾಪಿಸುತ್ತದೆ. ಇದೆ ತರಹ, ಕಾರ್ಖಾನೆಗಳಲ್ಲೂ ಕೂಡ, ಬಿಡಿ ಭಾಗಗಳು ಬೇಕಾದಾಗ, ಅದಿರುವ ಜಾಗಕ್ಕೆ ಹೋಗಿ, ತನಗೆ ಅಗತ್ಯವಿರುಷ್ಟನ್ನು ತೆಗೆದು ಕೊಳ್ಳುವುದು. ನಂತರ, ಆ ಬಿಡಿ ಭಾಗವನ್ನು ಉತ್ಪಾದಿಸುವ ಕೇಂದ್ರವು, ಎಷ್ಟುನ್ನು ತೆಗೆದುಕೊಳ್ಳಲಾಗಿದೆಯೋ, ಅಷ್ಟನ್ನು ಮಾತ್ರ ಉತ್ಪಾದಿಸಿ, ಖಾಲಿಯಾಗಿರುವ ಆ ಜಾಗವನ್ನು ತುಂಬುವುದು.[2][8]
ಕಡಿಮೆ ದಾಸ್ತಾನು ಮಟ್ಟಗಳು ಟೊಯೋಟಾ ಪ್ರೊಡಕ್ಷನ್ ಸಿಸ್ಟಮ್ನ ಒಂದು ಮುಖ್ಯ ಫಲಿತಾಂಶವಾಗಿದ್ದರೂ, ಅದರ ವ್ಯವಸ್ಥೆಯ ಹಿಂದಿನ ತತ್ತ್ವಶಾಸ್ತ್ರದ ಪ್ರಮುಖ ಅಂಶವೆಂದರೆ ಬುದ್ಧಿವಂತಿಕೆಯಿಂದ ಕೆಲಸ ಮಾಡುವುದು ಮತ್ತು ತ್ಯಾಜ್ಯವನ್ನು ತೊಡೆದುಹಾಕುವುದು, ಇದರಿಂದಾಗಿ ಕನಿಷ್ಟ ದಾಸ್ತಾನು ಮಾತ್ರ ಅಗತ್ಯವಿದೆ.[7]ಟೊಯೊಟಾದ ಕಾರ್ಖಾನೆಗಳನ್ನು ಗಮನಿಸಿದ ಅನೇಕ ಪಾಶ್ಚಾತ್ಯ ವ್ಯವಹಾರಗಳು, ಈ ಕಡಿತಗಳು ಹೇಗೆ ಸಾಧ್ಯವಾಯಿತು ಅರ್ಥೈಸಿಕೊಳ್ಳೈದೆಯೆ, ನೇರವಾಗಿ ಹೆಚ್ಚಿನ ದಾಸ್ತಾನು ಮಟ್ಟದತ್ತ ಆಕ್ರಮಣ ಮಾಡಲು ಪ್ರಾರಂಭಿಸಿವೆ[9]. ಆಧಾರವಾಗಿರುವ ಪರಿಕಲ್ಪನೆಯನ್ನು ಅಥವಾ ಪ್ರೇರಣೆಗಳನ್ನು ತಿಳಿಯದೆ ಅನುಕರಿಸುವ ಕ್ರಿಯೆಯು, ಆ ಯೋಜನೆಗಳ ವೈಫಲ್ಯಕ್ಕೆ ಕಾರಣವಾಗಬಹುದು.
ಟೊಯೋಟಾ ವೇ(The Toyota Way) ಎಂದು ಕರೆಯಲ್ಪಡುವ ಆಧಾರವಾಗಿರುವ ತತ್ವಗಳನ್ನು ಟೊಯೋಟಾ ಈ ಕೆಳಗಿನಂತೆ ವಿವರಿಸಿದೆ.[10][11]
ಬಾಹ್ಯ ವೀಕ್ಷಕರು ಟೊಯೋಟಾ ವೇದ ತತ್ವಗಳನ್ನು ಹೀಗೆ ಸಂಕ್ಷೇಪಿಸಿದ್ದಾರೆ:[12]
ನಿಮ್ಮ ನಿರ್ವಹಣಾ ನಿರ್ಧಾರಗಳನ್ನು, ಅಲ್ಪಾವಧಿಯ ಹಣಕಾಸು ಗುರಿಗಳ ಬೆಲೆ ತೆತ್ತಾದರೂ ಸರಿ, ದೀರ್ಘಾವಧಿಯ ತತ್ತ್ವಶಾಸ್ತ್ರದ ಮೇಲೆ ಆಧಾರವಾಗಿರಿಸಿಕೊಳ್ಳಿ.
ಟೊಯೋಟಾ ಉತ್ಪಾದನಾ ವ್ಯವಸ್ಥೆಯನ್ನು ಒಣ ಟವೆಲ್ನಿಂದ ನೀರನ್ನು ಹಿಸುಕುವುದಕ್ಕೆ ಹೋಲಿಸಲಾಗುತ್ತದೆ. ಇದರ ಅರ್ಥವೇನೆಂದರೆ, ಇದು ಸಂಪೂರ್ಣ ಅಪವ್ಯಯ(ಪೋಲು)ದ ನಿರ್ಮೂಲನೆಗೆ ಒಂದು ವ್ಯವಸ್ಥೆಯಾಗಿದೆ. 'ಪೋಲು' ಎಂದರೆ ಯಾವುದು ಸಂಸ್ಕರಣೆಯನ್ನು ಮುಂದುವರೆಸಲು ಸಹಾಯಕವಾಗುವುದಿಲ್ಲವೋ ಮತ್ತು ಯಾವುದೆಲ್ಲವು ಮೌಲ್ಯವನ್ನು ಸೇರಿಸುವುದೆಲ್ಲವೋ ಅವುಗಳು. ಎಲ್ಲರೂ ಪೋಲು ಎಂದು ಗುರುತಿಸುವ ಪೋಲನಷ್ಟನ್ನೇ ತೊಡೆಯಲು ಅನೇಕ ಜನರು ಬಯಸುವರು. ಆದರೆ ಅಪವ್ಯಯವೆಂದು ಗುರುತಿಸಲಾಗಿಲ್ಲದಿರುವ ಮಾತ್ರಕ್ಕೆ ಅಥವಾ ಯಾವುದನ್ನು ಜನರು ಸಹಿಸಿಕೊಳ್ಳಲೆ ಇಚ್ಚಿಸುವರೋ ಎನ್ನುವುದು ಹಾಗೆಯೇ ಉಳಿಯುವುದು.
ಜನರು ಕೆಲವು ಸಮಸ್ಯೆಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲಿಲ್ಲ. ದೈನಂದಿನ ಕೆಲಸದ ಬಂದಿ ಆಗಿದ್ದರು ಮತ್ತು ಸಮಸ್ಯೆ-ಪರಿಹರಿಸುವ ಅಭ್ಯಾಸವನ್ನು ಕೈಬಿಟ್ಟರು.
ಟಿಪಿಎಸ್ ವ್ಯವಸ್ಥೆಯನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಬಗ್ಗೆ 38 ಅಧ್ಯಾಯಗಳಲ್ಲಿ ತಾಯ್ ಚಿ ಒನೊನ ಕಾರ್ಯಸ್ಥಳ ನಿರ್ವಹಣೆ (2007) (Workplace Management)ವಿವರಿಸುತ್ತದೆ. ಕೆಲವು ಪ್ರಮುಖ ಪರಿಕಲ್ಪನೆಗಳು ಹೀಗಿವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.