ಟೇಕ್ವಾಂಡೋ
From Wikipedia, the free encyclopedia
ಟೇಕ್ವಾಂಡೋ (태권도; 跆拳道; Korean pronunciation: [tʰɛkwʌndo])[a] ಎಂಬುದು ಕೊರಿಯಾದ ಕದನ/ಸಮರ ಕಲೆ ಹಾಗೂ ದಕ್ಷಿಣ ಕೊರಿಯಾದ ರಾಷ್ಟ್ರೀಯ ಕ್ರೀಡೆಯಾಗಿದೆ. ಕೊರಿಯನ್ ಭಾಷೆಯಲ್ಲಿ, ಟೇ (태, 跆) ಎಂದರೆ "ಹೊಡೆಯುವಿಕೆ ಅಥವಾ ಕಾಲಿನಿಂದ ಒದ್ದು ಮುರಿಯುವಿಕೆ"; ಕ್ವಾನ್ (권, 拳) ಎಂದರೆ "ಹೊಡೆಯುವಿಕೆ ಅಥವಾ ಮುಷ್ಠಿಯಿಂದ ಗುದ್ದಿ ಮುರಿಯುವಿಕೆ"; ಹಾಗೂ ಡೋ (도, 道) ಎಂದರೆ "ಕ್ರಮ," "ವಿಧಾನ," ಅಥವಾ "ಕಲೆ" ಎಂದು ಅರ್ಥ. ಆದ್ದರಿಂದ, ಟೇಕ್ವಾಂಡೋ ವನ್ನು "ಕಾಲು ಹಾಗೂ ಮುಷ್ಠಿಗಳನ್ನು ಬಳಸುವ ಕ್ರಮ " ಅಥವಾ "ಒದೆಯುವಿಕೆ ಹಾಗೂ ಗುದ್ದುವಿಕೆಯ ಕ್ರಮ" ಎಂದು ಸಾಧಾರಣ ಭಾಷಾಂತರಿಸಬಹುದು."
ಹೀಗೂ ಕರೆಯಲ್ಪಡುತ್ತದೆ | Taekwon-Do, Tae Kwon-Do, Tae Kwon Do |
---|---|
ಗಮನ | Striking (Kicking) |
ಮೂಲ ದೇಶ | ದಕ್ಷಿಣ ಕೊರಿಯಾ |
ಒಲಂಪಿಕ್ ಆಟಗಳು | Since 2000 (WTF regulations) |
ಟೇಕ್ವಾಂಡೋ | |
Hangul | 태권도 |
---|---|
Hanja | 跆拳道 |
Revised Romanization | Taegwondo |
McCune–Reischauer | T'aekwŏndo |
This article contains Korean text. Without proper rendering support, you may see question marks, boxes, or other symbols instead of Hangul and hanja. |
ಟೇಕ್ವಾಂಡೋ ಅಭ್ಯಾಸಿ/ವೃತ್ತಿಪರರ ಸಂಖ್ಯೆಯ ದೃಷ್ಠಿಯಿಂದ ವಿಶ್ವದ ಅತ್ಯಂತ ಜನಪ್ರಿಯ ಕದನ/ಸಮರ ಕಲೆಯಾಗಿದೆ.[1] ಇದರ ಜನಪ್ರಿಯತೆಯಿಂದಾಗಿ ವೈವಿಧ್ಯಮಯ ಅಭಿವೃದ್ಧಿಗಳನ್ನು ಹೊಂದಿ ಕದನ/ಸಮರ ಕಲೆಯು ವಿವಿಧ ಕ್ಷೇತ್ರಗಳಾಗಿ ಬೆಳವಣಿಗೆ ಹೊಂದಲು ಕಾರಣವಾಗಿದೆ : ಇತರ ಇನ್ನೂ ಅನೇಕ ಕಲೆಗಳ ಹಾಗೆ, ಇದೂ ಕೂಡ ಹೋರಾಟ ತಂತ್ರಗಳನ್ನು, ಸ್ವರಕ್ಷಣೆ, ಕ್ರೀಡೆ, ಕಸರತ್ತು, ಧ್ಯಾನ ಹಾಗೂ ಸಿದ್ಧಾಂತಗಳನ್ನು ಒಳಗೊಂಡಿದೆ. ದಕ್ಷಿಣ ಕೊರಿಯಾದ ಸೇನೆಯು ತನ್ನ ತರಬೇತಿಯ ಭಾಗವಾಗಿ ಟೇಕ್ವಾಂಡೋವನ್ನು ಅಳವಡಿಸಿಕೊಂಡಿದೆ.[2] ಗಿಯೋರುಗಿ (pronounced [ɡjʌɾuɡi]), ಎಂಬುದು ಒಂದು ವಿಧದ ಮುಷ್ಠಿಯುದ್ಧ ವರಸೆಯಾಗಿದ್ದು, 2000ನೇ ಇಸವಿಯಿಂದ ಇದೊಂದು ಒಲಿಂಪಿಕ್ ಆಟವಿಶೇಷವಾಗಿದೆ.
ರೂಢಿಗತವಾಗಿ ಟೇಕ್ವಾಂಡೋನ ಎರಡು ಪ್ರಧಾನ ಶೈಲಿಗಳಿವೆ. ಒಂದು ಶೈಲಿಯು ಸಿಹಾಪ್ ಗಿಯೋರುಗಿ ಎಂಬ ಮುಷ್ಠಿಯುದ್ಧ ವರಸೆಯ ವ್ಯವಸ್ಥೆಯ ಮೂಲವಾದ ಕುಕ್ಕಿವಾನ್ನಿಂದ ಬಂದಿದ್ದು, ವರ್ಲ್ಡ್ ಟೇಕ್ವಾಂಡೋ ಫೆಡರೇಷನ್ (WTF)ನಿಂದ ನಿರ್ವಹಿಸಲ್ಪಡುತ್ತಿದ್ದು ಪ್ರಸ್ತುತ ಬೇಸಿಗೆಯ ಒಲಿಂಪಿಕ್ ಪಂದ್ಯಗಳಲ್ಲಿನ ಒಂದು ಆಟವಿಶೇಷವಾಗಿದೆ. ಮತ್ತೊಂದು ಶೈಲಿಯು ಇಂಟರ್ನ್ಯಾಷನಲ್ ಟೇಕ್ವಾನ್-ಡೋ ಫೆಡರೇಷನ್ (ITF)ನ ಮೂಲದ್ದಾಗಿದೆ.[3]
ವಿವಿಧ ಟೇಕ್ವಾಂಡೋ ಸಂಸ್ಥೆಗಳಿಂದ ಪ್ರತ್ಯೇಕವಾಗಿ, ಟೇಕ್ವಾಂಡೋ ಬೆಳವಣಿಗೆ/ಅಭಿವೃದ್ಧಿಯಲ್ಲಿ ಎರಡು ಪ್ರಧಾನ ಶಾಖೆಗಳಿವೆ : ಅವುಗಳೆಂದರೆ ಸಾಂಪ್ರದಾಯಿಕ ಹಾಗೂ ಕ್ರೀಡೆ. "ಸಾಂಪ್ರದಾಯಿಕ ಟೇಕ್ವಾಂಡೋ" ಎಂಬ ಪದವನ್ನು ಸಾಧಾರಣವಾಗಿ 1950ರ ದಶಕ ಹಾಗೂ 1960ರ ದಶಕಗಳಲ್ಲಿ ದಕ್ಷಿಣ ಕೊರಿಯಾದ ಸೇನಾಪಡೆಗಳು ಸ್ಥಾಪಿಸಿದ ಕದನ/ಸಮರ ಕಲೆಗೆ ಅವರು ಅದನ್ನು ಬಳಸಿದ್ದ ರೀತಿಗೆ ಅನುಗುಣವಾಗಿ ನೀಡಲಾಗುತ್ತದೆ; ನಿರ್ದಿಷ್ಟವಾಗಿ ಸಾಂಪ್ರದಾಯಿಕ ನಮೂನೆಗಳು/ಮಾದರಿಗಳ ಹೆಸರುಗಳು ಹಾಗೂ ಸಂಕೇತಗಳು ಅನೇಕವೇಳೆ ಕೊರಿಯಾದ ಇತಿಹಾಸದ ಅನೇಕ ಅಂಶಗಳ ಮೇಲೆ ಆಧಾರಿತವಾಗಿವೆ. ಟೇಕ್ವಾಂಡೋ ಕ್ರೀಡೆಯು ಆಗಿನಿಂದ ದಶಕಗಳ ಅವಧಿಯಲ್ಲಿ ವಿಕಸನ ಹೊಂದುತ್ತಾ ಬಂದು ತಕ್ಕ ಮಟ್ಟಿಗೆ ಬೇರೆಯೇ ಆದ ಕೇಂದ್ರಬಿಂದುವನ್ನು ಹೊಂದಿದೆ, ಅದರಲ್ಲೂ ವಿಶೇಷವಾಗಿ ವೇಗ ಹಾಗೂ ಸ್ಪರ್ಧಾನೈಪುಣ್ಯತೆಗಳಿಗೆ ನೀಡುವ ಪ್ರಾಧಾನ್ಯತೆ ಗಮನಾರ್ಹ (ಒಲಿಂಪಿಕ್ ಮುಷ್ಠಿಯುದ್ಧ ವರಸೆಯಂತೆ), ಆದರೆ ಸಾಂಪ್ರದಾಯಿಕ ಟೇಕ್ವಾಂಡೋ ಶಕ್ತಿ ಹಾಗೂ ಸ್ವರಕ್ಷಣೆಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತದೆ. ಈ ಎರಡೂ ಶಾಖೆಗಳು ಪರಸ್ಪರ ವಿಪರೀತ ಏಕಮಾತ್ರ ವೈಶಿಷ್ಟ್ಯತೆಯನ್ನು ಹೊಂದಿಲ್ಲ ಹಾಗೂ ಎರಡರ ನಡುವಿನ ಪ್ರತ್ಯೇಕತೆಗಳು ಅನೇಕವೇಳೆ ಅಸ್ಪಷ್ಟವಾಗಿರುತ್ತವೆ.
ಈ ಎರಡೂ ಪ್ರಧಾನ ಶೈಲಿಗಳ ನಡುವೆ ಹಾಗೂ ವಿವಿಧ ಸಂಸ್ಥೆಗಳ ನಡುವೆ ಸೈದ್ಧಾಂತಿಕ ಹಾಗೂ ತಾಂತ್ರಿಕ ಭಿನ್ನತೆಗಳಿದ್ದಾಗ್ಯೂ, ಇದರಲ್ಲಿನ ಕಲಾತ್ಮಕತೆಯು ಪ್ರಧಾನವಾಗಿ ಚಂಚಲ/ಸಂಚಾರಿ ನಿಲುವಿನಿಂದ ಕಾಲಿನ ಹರವಿನ ಹಾಗೂ ಶಕ್ತಿಯ ಪರಾಕಾಷ್ಠೆಯಲ್ಲಿ (ತೋಳಿಗೆ ಹೋಲಿಸಿದಂತೆ) ನೀಡಲಾಗುವ ಹೊಡೆತಗಳು/ಒದೆತಗಳಲ್ಲಿದೆ. ವಿವಿಧ ಶೈಲಿಗಳ ನಡುವಿನ ಗರಿಷ್ಠತಮ ವ್ಯತ್ಯಾಸ ಅಥವಾ ಕನಿಷ್ಠ ಮಟ್ಟಿಗೆ ಅತ್ಯಂತ ಸುಸ್ಪಷ್ಟವಾದಂತಹವನ್ನು ಸಾಧಾರಣವಾಗಿ ಕ್ರೀಡೆಗಳು ಹಾಗೂ ಸ್ಪರ್ಧೆಗಳಲ್ಲಿನ ಶೈಲಿಗಳು ಹಾಗೂ ನಿಯಮಗಳ ನಡುವಿನ ವ್ಯತ್ಯಾಸವೆಂದು ಪರಿಗಣಿಸಲಾಗುತ್ತದೆ. ಟೇಕ್ವಾಂಡೋ ತರಬೇತಿಯು ಸಾಮಾನ್ಯವಾಗಿ ಪಟ್ಟುಗಳು/ಬ್ಲಾಕ್ಗಳು, ಒದೆತಗಳು, ಗುದ್ದುವಿಕೆಗಳು, ಹಾಗೂ ಮುಕ್ತ ಹಸ್ತದ ಹೊಡೆತಗಳ ವ್ಯವಸ್ಥೆ ಹಾಗೂ ವಿವಿಧ ಟೇಕ್ಡೌನ್ಗಳು ಅಥವಾ ಬೀಸುಗಳು, ಎಸೆತ/ಒಗೆತಗಳು ಹಾಗೂ ಜಾಯಿಂಟ್ಲಾಕ್ಗಳನ್ನೂ ಒಳಗೊಂಡಿರುತ್ತದೆ. ಕೆಲ ಟೇಕ್ವಾಂಡೋ ತರಬೇತಿದಾರರು ಜಿಯಾಪ್ಸುಲ್ ಎಂದು ಹೆಸರಾದ ಒತ್ತಡ ಪ್ರದೇಶಗಳ ಬಳಕೆಯನ್ನು ಹಾಗೂ ಹಾಪ್ಕಿಡೊ ಹಾಗೂ ಜೂಡೋಗಳಂತಹಾ ಇತರೆ ಕದನ/ಸಮರ ಕಲೆಗಳಿಂದ ಸ್ವಯಂರಕ್ಷಣೆಯ ತಂತ್ರಗಳನ್ನು ಪಡೆದು ಸಂಘಟಿಸಿ ಅಳವಡಿಸಿಕೊಳ್ಳುತ್ತಾರೆ.