ಟಕಿಲಾ
From Wikipedia, the free encyclopedia
ಟಕಿಲಾ ವುSpanish pronunciation: [teˈkila] ಒಂದು ಭೂತಾಳೆ-ಮೂಲದ ಮದ್ಯ ಸಾರ, ಇದನ್ನು ಮೂಲತಃ ನಗರ ಪ್ರದೇಶದ ಸುತ್ತುವರಿದ ಭಾಗಗಳಾದ ಟಕಿಲಾ, 65 kilometres (40 mi)ಗ್ವಾದಲಾಜರ ವಾಯುವ್ಯ ಭಾಗಗಳು , ಹಾಗು ಜಾಲಿಸ್ಕೋದ ಪಶ್ಚಿಮ ಮೆಕ್ಸಿಕನ್ ರಾಜ್ಯದ ಎತ್ತರ ಪ್ರದೇಶಗಳಲ್ಲಿ ( ಲಾಸ್ ಆಲ್ಟೊಸ್ ) ತಯಾರಿಸಲಾಗುತ್ತದೆ. ಪ್ರಮುಖವಾಗಿ ಕೆಂಪು ಜ್ವಾಲಾಮುಖಿಯಮಣ್ಣಿನಿಂದ ಸುತ್ತುವರಿದ ಟಕಿಲಾ ಪ್ರದೇಶ ನೀಲಿ ಭೂತಾಳೆ ಬೆಳವಣಿಗೆಗೆ ಒಳ್ಳೆಯ ಸಹಕಾರಿಯಾಗಿದೆ , ಹಾಗು ಪ್ರತಿ ವರ್ಷ 300 ಮಿಲಿಯನ್ ಗಿ೦ತ ಹೆಚ್ಚು ಸಸ್ಯಗಳನ್ನು ಬೆಳೆಯಲಾಗುತ್ತದೆ.[1]
ಮೆಕ್ಸಿಕನ್ ಕಾನೂನಿನ ಪ್ರಕಾರ ಟಕಿಲಾ ಉತ್ಪಾದನೆಯು ಕೆಲವು ಪ್ರದೆಶಗಳಿಗೆ ಮಾತ್ರ ಸೀಮಿತವಾಗಿದೆ. ಅವುಗಳೆ೦ದರೆ ಜಾಲಿಸ್ಕೋ ರಾಜ್ಯ ಹಾಗು ರಾಜ್ಯದ ಕೆಲ ಪ್ರದೆಶಗಳಾದ ಗ್ವಾನಜ್ವಾಟೊ, ಮೈಕೊವ್ಕನ್, ನಯರಿಟ್, ಹಾಗು ತಮಾಲಿಪಾಸ್.[2]
ಟಕಿಲಾವು ಹೆಚ್ಚಾಗಿ 38-40% ಮದ್ಯಸಾರದಿ೦ದ ಮಾಡಲ್ಪಟ್ಟಿದೆ (76-80 ಪ್ರಮಾಣ), ಅಲ್ಲದೆ ಇದನ್ನು 35-55% ಮದ್ಯಸಾರದಿಂದ ಸಹ ಉತ್ಪಾದಿಸಬಹುದಾಗಿದೆ (70-110 ಪ್ರಮಾಣ). [3]
ಆದರೂ ಬಹಳ ಟಕಿಲಾಗಳು 80 ಪ್ರಮಾಣ, ಹಲವು ಮದ್ಯಕಾರ್ಖಾನೆಗಳು 100 ಪ್ರಮಾಣಕ್ಕೆ ಇ೦ಗಿಸುತ್ತವೆ ಹಾಗು ನಂತರ ಅದರ ಗಡಸುತನವನ್ನು ಕಡಿಮೆ ಮಾಡಲು ನೀರನ್ನು ಮಿಶ್ರಗೊಳಿಸುತ್ತಾರೆ. ಕೆಲವು ಬಹಳ ಪ್ರಸಿದ್ಧವಾದ ಕಾರ್ಖಾನೆಗಳು ಮದ್ಯಸಾರವನ್ನು ನೀರನ್ನು ಮಿಶ್ರಮಾಡದೆಯೇ 80 ಪ್ರಮಾಣಕ್ಕೆ ಇ೦ಗಿಸುತ್ತಾರೆ, ಇದರಲ್ಲಿ ಮದ್ಯಸಾರವನ್ನು ತಿಳಿಗೊಳಿಸಲು ನೀರನ್ನು ಬಳಸುವುದಿಲ್ಲ.