ಝಾನ್ಸಿ ಸಂಸ್ಥಾನವನ್ನು ಆಳಿದ ರಾಣಿ From Wikipedia, the free encyclopedia
ಝಾನ್ಸಿ ರಾಣಿ ಲಕ್ಷ್ಮೀಬಾಯಿ (೧೯, ನವೆಂಬರ್ ೧೮೨೯[1] - ೧೭, ಜೂನ್ ೧೮೫೮) ಝಾನ್ಸಿಯ ರಾಣಿಯಾಗಿದ್ದರು ಹಾಗೂ ಅವರು ಭಾರತದ ಒಬ್ಬ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು. ಇವರು ೧೮೫೭ ರ ಭಾರತೀಯ ದಂಗೆಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಮತ್ತು ಭಾರತೀಯ ರಾಷ್ಟ್ರೀಯವಾದಿಗಳಿಗೆ ಬ್ರಿಟಿಷ್ ರಾಜ್ಗೆ ಪ್ರತಿರೋಧದ ಸಂಕೇತವಾಯಿತು.
ಲಕ್ಷ್ಮೀಬಾಯಿ | |
---|---|
Maharani of Jhansi | |
ರಾಣಿ ಲಕ್ಷ್ಮೀಬಾಯಿಯ ಭಾವಚಿತ್ರ | |
ಝಾನ್ಸಿ | |
ಆಳ್ವಿಕೆ |
|
ಪೂರ್ವಾಧಿಕಾರಿ | ಗಂಗಾಧರ್ ರಾವ್ |
ಉತ್ತರಾಧಿಕಾರಿ | ಬ್ರಿಟಿಷ್ ರಾಜ್ |
ಗಂಡ/ಹೆಂಡತಿ | ಗಂಗಾಧರ್ ರಾವ್ ನೆವಾಲ್ಕರ್ |
ಸಂತಾನ | |
ದಾಮೋದರ್ ರಾವ್ ಆನಂದ್ ರಾವ್ | |
ತಂದೆ | ಮೋರೋಪಂತ್ ತಾಂಬೆ |
ತಾಯಿ | ಭಾಗೀರಥಿ ಸಾಪ್ರೆ |
ಜನನ | ಬನರಾಸ್, ಕಾಶಿ ಬನಾರಸ್ ನ ರಾಜಧಾನಿ (ಇದೀಗ ವಾರಣಾಸಿ, ಉತ್ತರ ಪ್ರದೇಶ, ಭಾರತ) |
ಮರಣ | ಗ್ವಾಲಿಯರ್, ಗ್ವಾಲಿಯರ್ ರಾಜ್ಯ , (ಇದೀಗ ಮಧ್ಯಪ್ರದೇಶ, ಭಾರತ) |
Burial | ಫೂಲ್ ಬಾಘ್,ಗ್ವಾಲಿಯರ್, ಮಧ್ಯಪ್ರದೇಶ, ಭಾರತ |
ರಾಣಿ ಲಕ್ಷ್ಮೀಬಾಯಿಯವರು ೧೯ ನವೆಂಬರ್ ೧೮೨೯ರಲ್ಲಿ ಕಾಶಿ ವಾರಣಾಸಿ ಒಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮಣಿಕರ್ಣಿಕ ಅವರ ನಿಜವಾದ ಹೆಸರಾಗಿದ್ದು ಅವರನ್ನು ಮನು ಎಂದು ಪ್ರೀತಿಯಿಂದ ಕರೆಯುತ್ತಿದ್ದರು.ಲಕ್ಷ್ಮೀಬಾಯಿರವರು ೪ ವರ್ಷದವರಾಗಿರುವಾಗ ಅವರ ತಾಯಿ ಮರಣಹೊಂದಿದರು. ಅವರ ಶಿಕ್ಷಣ ಮನೆಯಲ್ಲಿ ನಡೆಯಿತು. ತಂದೆ ಮೊರೋಪಂತ್ ತಂಬೆಯವರು ಪೆಶ್ವೆಯವರ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದರು ಹಾಗು ಮುಂದೆ ಲಕ್ಷ್ಮೀಬಾಯಿಯವರಿಗೆ ೧೩ ವರ್ಷದವರಾಗಿರುವಾಗ ಝಾನ್ಸಿಯ ಮಹಾರಾಜ ರಾಜ ಬಾಲಗಂಗಾಧರ ರಾವ್ ಅವರ ಆಸ್ಥಾನದಲ್ಲಿ ಸೇರಿದರು. ಮುಂದೆ ಲಕ್ಷ್ಮೀಬಾಯಿಯವರಿಗೆ ೧೪ ವರ್ಷವಾದಾಗ ಮಹಾರಾಜ ರಾಜ ಬಾಲಗಂಗಾಧರ ರಾವ್ ಅವರನ್ನು ಮದುವೆಯಾದರು ಹಾಗು ಅವರ ಹೆಸರನ್ನು ಲಕ್ಷ್ಮೀಬಾಯಿ ಎಂದು ಬದಲಾಯಿಸಲಾಯಿತು. ಲಕ್ಷ್ಮೀಬಾಯಿ ಕುದುರೆ ಸವಾರಿ,ಕತ್ತಿವರಸೆ,ಬಿಲ್ವಿದ್ಯೆ ಯನ್ನು ತನ್ನ ಸ್ವಂತಿಕೆಯಿಂದ ಕಲಿತರು ಹಾಗು ಆಸ್ಥಾನದ ತನ್ನ ಸ್ತ್ರೀಮಿತ್ರರನ್ನು ಸೇರಿಸಿ ಚಿಕ್ಕ ಸೈನ್ಯವನ್ನು ಕಟ್ಟಿದರು ಲಕ್ಷ್ಮೀಬಾಯಿ.[2]
೧೮೫೧ರಲ್ಲಿ ಲಕ್ಷ್ಮೀಬಾಯಿಯವರು ಗಂಡುಮಗುವಿಗೆ ಜನ್ಮವಿತ್ತರು. ಆದರೆ ಆ ಮಗು ೪ ತಿಂಗಳಿರುವಾಗ ಮರಣವಪ್ಪಿತು. ತಮ್ಮ ಮೊದಲನೆಯ ಮಗುವಿನ ಮರಣದ ನಂತರ ಅವರು ದಾಮೋದರ ರಾವ್ಅವರನ್ನು ದತ್ತು ಪಡೆದರು. ಆದರೆ ತನ್ನ ಮಗನ ಸಾವಿನ ದುಃಖದಿಂದ ಹೊರಬರಲಾರದ ಮಹಾರಾಜ ರಾಜ ಬಾಲಗಂಗಾಧರ ರಾವ್ ೨೧, ನವೆಂಬರ್ ೧೮೫೩ ರಲ್ಲಿ ಹೃದಯಾಘಾತದಿಂದ ಸಾವಿಗೀಡಾದರು.
ದಾಮೋದರ ರಾವ್ ರವರು ರಾಜನಿಗೆ ರಕ್ತಸಂಬಂಧಿಅಲ್ಲದಿದ್ದರಿಂದ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಲಾರ್ಡ್ ಡಾಲ್ಹೌಸಿಯು ದಾಮೋದರ ರಾವ್ ಅವರಿಗೆ ರಾಜಾಭಿಶೇಕ ಮಾಡಲು ಬಿಡಲಿಲ್ಲ. ಲಾರ್ಡ್ ಡಾಲ್ಹೌಸಿಯು ಝಾನ್ಸಿಯ ರಕ್ಷಣೆ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಜವಾಬ್ಡಾರಿಯೆಂದು ರಾಣಿ ಲಕ್ಷ್ಮೀಬಾಯಿಯವರಿಗೆ ರುಪಾಯಿ ೬೦,೦೦೦ ಪಿಂಚಣಿ ಹಣವನ್ನು ಕೊಟ್ಟು ಝಾನ್ಸಿಕೊಟೆಯನ್ನು ಬಿಟ್ಟು ಹೊಗಲು ಆಜ್ಞೆ ಮಾಡಿದನು.
ಸಾವು ಮತ್ತು ನಂತರದ ಪರಿಣಾಮಗಳು
ತಿದ್ದು
ಜೂನ್ 17 ರಂದು ಗ್ವಾಲಿಯರ್ನ ಫೂಲ್ ಬಾಗ್ ಬಳಿಯ ಕೋಟಾ-ಕಿ-ಸೆರೈನಲ್ಲಿ, ಕ್ಯಾಪ್ಟನ್ ಹೆನೇಜ್ ನೇತೃತ್ವದಲ್ಲಿ 8 ನೇ (ಕಿಂಗ್ಸ್ ರಾಯಲ್ ಐರಿಶ್) ಹುಸಾರ್ಸ್ನ ಸ್ಕ್ವಾಡ್ರನ್, ಪ್ರದೇಶವನ್ನು ತೊರೆಯಲು ಪ್ರಯತ್ನಿಸುತ್ತಿದ್ದ ರಾಣಿ ಲಕ್ಷ್ಮೀಬಾಯಿ ನೇತೃತ್ವದಲ್ಲಿ ದೊಡ್ಡ ಭಾರತೀಯ ಪಡೆಯೊಂದಿಗೆ ಹೋರಾಡಿತು. 8ನೇ ಹುಸಾರ್ಗಳು ಭಾರತೀಯ ಸೇನೆಯೊಳಗೆ ದಾಳಿ ನಡೆಸಿ, 5,000 ಭಾರತೀಯ ಸೈನಿಕರನ್ನು ಹತ್ಯೆಗೈದರು, ಇದರಲ್ಲಿ "16 ವರ್ಷ ಮೇಲ್ಪಟ್ಟ" ಭಾರತೀಯರು ಸೇರಿದ್ದಾರೆ.[41] ಅವರು ಎರಡು ಬಂದೂಕುಗಳನ್ನು ತೆಗೆದುಕೊಂಡು ಫೂಲ್ ಬಾಗ್ ಶಿಬಿರದ ಮೂಲಕ ಚಾರ್ಜ್ ಅನ್ನು ಮುಂದುವರೆಸಿದರು. ಈ ನಿಶ್ಚಿತಾರ್ಥದಲ್ಲಿ, ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾಣಿ ಲಕ್ಷ್ಮೀಬಾಯಿ ಅವರು ಸೋವರ ಸಮವಸ್ತ್ರವನ್ನು ಹಾಕಿದರು ಮತ್ತು ಹುಸಾರ್ಗಳಲ್ಲಿ ಒಬ್ಬರ ಮೇಲೆ ದಾಳಿ ಮಾಡಿದರು; ಅವಳು ಕುದುರೆಯಿಲ್ಲದವಳಾಗಿದ್ದಳು ಮತ್ತು ಬಹುಶಃ ಅವನ ಸಾಬರ್ನಿಂದ ಗಾಯಗೊಂಡಿದ್ದಳು. ಸ್ವಲ್ಪ ಸಮಯದ ನಂತರ, ಅವಳು ರಸ್ತೆಬದಿಯಲ್ಲಿ ರಕ್ತಸ್ರಾವದಿಂದ ಕುಳಿತಿದ್ದಾಗ, ಅವಳು ಸೈನಿಕನನ್ನು ಗುರುತಿಸಿದಳು ಮತ್ತು ಪಿಸ್ತೂಲಿನಿಂದ ಅವನ ಮೇಲೆ ಗುಂಡು ಹಾರಿಸಿದಳು, ನಂತರ ಅವನು "ತನ್ನ ಕಾರ್ಬೈನ್ನೊಂದಿಗೆ ಯುವತಿಯನ್ನು ಕಳುಹಿಸಿದನು".[42][43] ಮತ್ತೊಂದು ಸಂಪ್ರದಾಯದ ಪ್ರಕಾರ, ಝಾನ್ಸಿಯ ರಾಣಿ ರಾಣಿ ಲಕ್ಷ್ಮೀಬಾಯಿ, ಅಶ್ವದಳದ ನಾಯಕಿಯಂತೆ ಧರಿಸಿದ್ದರು, ಅವರು ತೀವ್ರವಾಗಿ ಗಾಯಗೊಂಡರು; ಬ್ರಿಟಿಷರು ತನ್ನ ದೇಹವನ್ನು ವಶಪಡಿಸಿಕೊಳ್ಳಲು ಬಯಸಲಿಲ್ಲ, ಅವಳು ಅದನ್ನು ಸುಡುವಂತೆ ಒಬ್ಬ ಸನ್ಯಾಸಿಗೆ ಹೇಳಿದಳು. ಆಕೆಯ ಸಾವಿನ ನಂತರ ಕೆಲವು ಸ್ಥಳೀಯರು ಆಕೆಯ ದೇಹವನ್ನು ಸುಟ್ಟು ಹಾಕಿದರು
ಮೂರು ದಿನಗಳ ನಂತರ ಬ್ರಿಟಿಷರು ಗ್ವಾಲಿಯರ್ ನಗರವನ್ನು ವಶಪಡಿಸಿಕೊಂಡರು. ಈ ಯುದ್ಧದ ಬ್ರಿಟಿಷ್ ವರದಿಯಲ್ಲಿ, ರಾಣಿ ಲಕ್ಷ್ಮೀಬಾಯಿ "ವ್ಯಕ್ತಿ, ಬುದ್ಧಿವಂತ ಮತ್ತು ಸುಂದರಿ" ಮತ್ತು ಅವರು "ಎಲ್ಲಾ ಭಾರತೀಯ ನಾಯಕರಲ್ಲಿ ಅತ್ಯಂತ ಅಪಾಯಕಾರಿ" ಎಂದು ಹ್ಯೂ ರೋಸ್ ಅಭಿಪ್ರಾಯಪಟ್ಟಿದ್ದಾರೆ.[44][45] ರೋಸ್ ಅವರು "ಗ್ವಾಲಿಯರ್ ರಾಕ್ ಅಡಿಯಲ್ಲಿ ಹುಣಸೆ ಮರದ ಕೆಳಗೆ ದೊಡ್ಡ ಸಮಾರಂಭದೊಂದಿಗೆ ಸಮಾಧಿ ಮಾಡಲಾಯಿತು, ಅಲ್ಲಿ ನಾನು ಅವಳ ಮೂಳೆಗಳು ಮತ್ತು ಬೂದಿಯನ್ನು ನೋಡಿದೆ" ಎಂದು ವರದಿ ಮಾಡಿದೆ.[46][47]
ಆಕೆಯ ಸಮಾಧಿಯು ಗ್ವಾಲಿಯರ್ನ ಫೂಲ್ ಬಾಗ್ ಪ್ರದೇಶದಲ್ಲಿದೆ. ಆಕೆಯ ಮರಣದ ಇಪ್ಪತ್ತು ವರ್ಷಗಳ ನಂತರ ಕರ್ನಲ್ ಮಲ್ಲೆಸನ್ ಭಾರತೀಯ ದಂಗೆಯ ಇತಿಹಾಸದಲ್ಲಿ ಬರೆದರು; ಸಂಪುಟ 3; ಲಂಡನ್, 1878-
ಬ್ರಿಟಿಷರ ದೃಷ್ಟಿಯಲ್ಲಿ ಆಕೆಯ ತಪ್ಪುಗಳು ಏನೇ ಆಗಿರಬಹುದು, ಆಕೆಯ ದೇಶವಾಸಿಗಳು ಆಕೆಯನ್ನು ದಂಗೆಗೆ ದೂಡಿದರು ಮತ್ತು ಅವಳು ತನ್ನ ದೇಶಕ್ಕಾಗಿ ಬದುಕಿದಳು ಮತ್ತು ಸತ್ತಳು ಎಂದು ನೆನಪಿಸಿಕೊಳ್ಳುತ್ತಾರೆ, ಭಾರತಕ್ಕಾಗಿ ಆಕೆಯ ಕೊಡುಗೆಯನ್ನು ನಾವು ಮರೆಯಲು ಸಾಧ್ಯವಿಲ್ಲ.'[48]
ಝಾನ್ಸಿಯಲ್ಲಿ ಇದೆಲ್ಲಾ ನಡೆಯುತ್ತಿರುವಾಗ ಮೇ ೧೦ , ೧೮೫೭ ರಲ್ಲಿ ಮೀರತ್ನಲ್ಲಿ ಸಿಪಾಯಿ ಬಂಡಾಯ ಶುರುವಾಯಿತು. ಇದು ಬ್ರಿಟೀಷ್ ಸಾಮ್ರಾಜ್ಯದ ವಿರುದ್ದದ ದಂಗೆಯ ಪ್ರಥಮ ಅದ್ಯಾಯ ಎನ್ನಲಾಗುತ್ತದೆ. ಸಿಪಾಯಿಗಳ ಮನದಲ್ಲಿ ಅವರು ಉಪಯೋಗಿಸುವ ತೋಪಿಗೆ ದನದ ಅಥವಾ ಹಂದಿಯ ಕೊಬ್ಬನ್ನು ಸವರಿದ್ದಾರೆಯೆಂದು ತಿಳಿದು ಅದೇ ದಂಗೆಗೆ ಮುಖ್ಯಕಾರಣವಾಯಿತು. ಮುಸ್ಲಿಮರಿಗೆ ಹಂದಿ ನಿಷೇಧವಾಗಿದ್ದರಿಂದ ಹಾಗೂ ಹಿಂದೂಗಳಿಗೆ ದನ ಪವಿತ್ರವಾದುದರಿಂದ ಸೈನಿಕರು ದಂಗೆಯೆದ್ದರು. ದಂಗೆಯಲ್ಲಿ ಬಹಳಸ್ಟು ಬ್ರಿಟಿಷ್ ಸೈನಿಕರು ಹಾಗೂ ಅಧಿಕಾರಿಗಳು ಸಾವಿಗೀಡಾದರಿಂದ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಈ ದಂಗೆಯನ್ನು ಆದಸ್ಟು ಬೇಗ ನಿಲ್ಲಿಸಲು ತಯಾರಿ ನಡೆಸಿದರು.
೧೮೫೭ ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಯಿತು ಹಾಗೂ ಭಾರತದ ಆದ್ಯಂತವಾಗಿ ಹರಡಿತು. ಇದೇ ಸಮಯದಲ್ಲಿ ಬ್ರಿಟಿಷರಿಗೆ ದೇಶದ ಇತರೆ ಪ್ರದೇಶಗಳಬಗ್ಗೆ ಹೆಚ್ಚು ಜಾಗರೂಕರಾಗಬೇಕಾದ್ದರಿಂದಾಗಿ ಝಾನ್ಸಿಯನ್ನು ರಾಣಿ ಲಕ್ಷ್ಮೀಬಾಯಿಯವರ ಆಳ್ವಿಕೆಗೆ ಬಿಟ್ಟರು. ಇದೇ ಸಮಯದಲ್ಲಿ ರಾಣಿ ಲಕ್ಷ್ಮೀಬಾಯಿಯ ಶ್ರೇಷ್ಠತೆಯು ರುಜುವಾತಾಯಿತು. ರಾಣಿ ಲಕ್ಷ್ಮೀಬಾಯಿಯವರ ನಾಯಕತ್ವದಲ್ಲಿ ಝಾನ್ಸಿಯಲ್ಲಿ ಶಾಂತಿ ಹಾಗು ನೆಮ್ಮದಿ ನೆಲೆಸಿ ಅವರೊಬ್ಬ ಉತ್ತಮ ನಾಯಕಿ ಎಂದು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಸಹಿತ ಝಾನ್ಸಿಯ ಪ್ರಜೆಗಳ ಮನದಲ್ಲಿ ನೆಲೆಸಿದರು.
ಈ ಸಮಯದಲ್ಲಿ ರಾಣಿ ಲಕ್ಷ್ಮೀಬಾಯಿಯವರು ಬ್ರಿಟಿಷರಿಗೆ ವಿರುದ್ದವಾಗಿ ಹೋಗುವ ಯೋಚನೆಯಲ್ಲಿ ಇರಲಿಲ್ಲ, ಆದರೆ ಸರ್ ಹುಘ್ ರೋಸ್ ಅವರ ನೇತ್ರತ್ವದ ಸೈನ್ಯ ಝಾನ್ಸಿಯನ್ನು ೨೮ ಮಾರ್ಚ ೧೮೫೮ ರಂದು ಮುತ್ತಿಗೆಹಾಕ್ಕಿದ್ದರಿಂದ ರಾಣಿ ಲಕ್ಷ್ಮೀಬಾಯಿಯವರ ಬ್ರಿಟಿಷರ ಬಗೆಗಿನ ನಿಲುವು ಬದಲಾಯಿತು. ರಾಣಿ ಲಕ್ಷ್ಮೀಬಾಯಿ ಹಾಗೂ ಅವರ ನಿಷ್ಠಾವಂತ ಸೈನಿಕರು ಶರಣಾಗಲು ಒಪ್ಪಲಿಲ್ಲ. ೨ ವಾರಗಳ ವರೆಗೆ ಉಗ್ರ ಹೊರಾಟ ನಡೆಸಿದರು. ಝಾನ್ಸಿಯ ಸ್ತ್ರೀಸೈನಿಕರು ಕೂಡಾ ಯುದ್ಧಸಾಮಗ್ರಿ ಹಾಗೂ ಸೇನಾನಿಗಳಿಗೆ ಭೋಜನದ ವ್ಯವಸ್ತೆ ಮಾಡುತ್ತಿದ್ದರು.
ರಾಣಿ ಲಕ್ಷ್ಮೀಬಾಯಿ ಸ್ವತಃ ಸೈನಿಕರ ನಡುವಿನ್ನಲ್ಲಿ ಓಡಾಡಿಕೊಂದು ಅವರನ್ನು ಹುರಿದುಂಬಿಸಿ ಬಹಳ ದಿಟ್ಟತನದಿಂದ ಹೋರಾಡಿದಳು. 2೦,೦೦೦ ಜನರ ಸೇನೆಯನ್ನು ದಂಗೆಕೋರ ತಾತ್ಯಾ ಟೊಪಿ ಮುಖಂಡನಾಗಿ ಯುದ್ದ ಮಾಡಿ ರಾಣಿ ಲಕ್ಷ್ಮೀಬಾಯಿ ಹಾಗೂ ಝಾನ್ಸಿಯ ಸ್ವತಂತ್ರವಾಗಲು ಸಹಾಯ ಮಾಡಿದ. ಆದರೆ ಕೇವಲ ೧೫೪೦ರ ಸಂಖ್ಯೆಯಲ್ಲಿದ್ದ ಬ್ರಿಟಿಷ್ ಸೈನಿಕರು ೩೧, ಮಾರ್ಚ್ ನಂದು ಆಕ್ರಮಣ ಮಾಡಿದಾಗ ಅಸ್ಟೇನು ಅನುಭವಿ ಅಲ್ಲದ ಝಾನ್ಸಿಯ ಸೈನಿಕರಿಂದ ೩ದಿನಗಳಿಂದ ಜಾಸ್ತಿ ಹೊರಾಟ ನಡೆಸಲಗಲಿಲ್ಲ, ಹಾಗೂ ಬ್ರಿಟಿಷ್ ಸೈನಿಕರು ಝಾನ್ಸಿ ನಗರವನ್ನು ಮುತ್ತಿಗೆ ಹಾಕಿದರು. ಅದೇ ಸಮಯದಲ್ಲಿ ರಾಣಿ ಲಕ್ಷ್ಮೀಬಾಯಿ ಕೋಟೆಯ ಗೋಡೆಯನ್ನು ರಾತ್ರಿಯಲ್ಲಿ ತನ್ನ ಕೆಲವು ಮಹಿಳಾ ಸೈನಿಕರು ಹಾಗೂ ರಕ್ಷಕರ ಜೊತೆಗೆ ಸೇರಿ ತಪ್ಪಿಸಿಕೊಂಡಳು[3] .
ತನ್ನ ಮಗ ದಾಮೋದರ ರಾವ್ ಜೊತೆಗೆ ಸೇರಿ ಕಲ್ಪಿ ಯೆಂಬಲ್ಲಿ ತಲೆಮರೆಸಿ ಕೊಂಡಳು. ಹಾಗೂ ಅಲ್ಲಿಯೇ ತಾತ್ಯಾ ಟೊಪಿ ಹಾಗೂ ಇತರ ದಂಗೆಕೋರರ ಜೊತೆಗೆ ತನ್ನ ಸೈನ್ಯವನ್ನು ಸೇರಿಸಿದಳು. ರಾಣಿ ಹಾಗೂ ತಾತ್ಯಾ ಟೊಪಿ ಗ್ವಾಲಿಯರ್ಗೆ ಹೋಗಿ ಅಲ್ಲಿನ ಮಹಾರಾಜನ ಸೈನಿಕರನ್ನು ಇವರ ದಂಗೆಕೋರರ ಗುಂಪು ಸೋಲಿಸಿತು. ನಂತರ ಅವರು ಗ್ವಾಲಿಯರ್ ಕೋಟೆಯನ್ನು ವಶಪಡಿಸಿಕೋಂಡರು. ಆದರೆ ಯುದ್ದದ ೨ ನೆಯ ದಿನ ಅಂದರೆ ೧೮ , ಜೂನ್ ೧೮೫೮ ರಂದು ರಾಣಿ ಲಕ್ಷ್ಮೀಬಾಯಿ ಸಾವನ್ನಪ್ಪಿದರು. ಬ್ರಿಟಿಷರು ೩ದಿನಗಳ ನಂತರ ಗ್ವಾಲಿಯರ್ ಕೋಟೆಯನ್ನು ವಶಪಡಿಸಿಕೋಂಡರು.
ಸರ್ ಹುಘ್ ರೋಸ್ ತಮ್ಮ ಯುದ್ದದ ಟಿಪ್ಪಣಿಯಲ್ಲಿ ರಾಣಿಯನ್ನು "ಅತೀ ಸುಂದರಿ, ದೃಢನಿಷ್ಠೆ ಹಾಗು ಅತೀ ಬುದ್ದಿವಂತೆ" ಹಾಗೂ "ಅಪಾಯಕಾರಿ ದಂಗೆಕೋರ ನಾಯಕಿ" ಎಂದು ವರ್ಣಿಸಿದ್ದಾನೆ[4]. ರಾಣಿಯ ತಂದೆ ಮೊರೋಪಂತ್ ತಂಬೆಯವರನ್ನು ಝಾನ್ಸಿಯ ಸೋಲಿನ ಕೆಲವೇ ದಿನಗಳನಂತರ ಸೆರೆಹಿಡಿಯಲಾಯಿತು ಹಾಗೂ ಗಲ್ಲಿಗೇರಿಸಲಾಯಿತು.
ರಾಣಿ ಲಕ್ಷ್ಮೀಬಾಯಿ ದೇಶದ ನಾಯಕಿಎಂದು ಪ್ರಸಿದ್ದರಾಗಿದ್ದರು. ಭಾರತೀಯ ಸೈನ್ಯ ತನ್ನ ಮಹಿಳಾ ಪಡೆಗೆ ಅವರ ಹೆಸರನ್ನಿಟ್ಟು ಗೌರವನೀಡಲಾಗಿದೆ. ರಾಣಿ ಲಕ್ಷ್ಮೀಬಾಯಿಯ ವರಿಗೆ ಗೌರವವಾಗಿ ಝಾನ್ಸಿ ಹಾಗು ಗ್ವಾಲಿಯರ್ನಲ್ಲಿ ಅವರು ಕುದುರೆ ಸವಾರಿ ಮಾಡುತ್ತಿರುವ ಕಂಚಿನ ವಿಗ್ರಹ ನಿರ್ಮಿಸಲಾಗಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.