From Wikipedia, the free encyclopedia
ಜ್ಯೋತಿ ರೌಟ್ (ಜನನ ಜುಲೈ ೧೫, ೧೯೬೫) ಒಬ್ಬ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ಶಿಕ್ಷಕಿ ಮತ್ತು ಒಡಿಸ್ಸಿ ನೃತ್ಯ ಶೈಲಿಯ ನೃತ್ಯ ಸಂಯೋಜಕಿ. [1] [2] [3]
ಜ್ಯೋತಿ ರೌಟ್ | |
---|---|
ಜನನ | ಜೋಡಾ, ಒಡಿಶಾ | ೧೫ ಜುಲೈ ೧೯೬೫
ವೃತ್ತಿ(ಗಳು) | ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ನೃತ್ಯಗಾರ್ತಿ, ನೃತ್ಯ ಸಂಯೋಜಕಿ |
ಜಾಲತಾಣ | http://jyotikalamandir.org/?itemID=3 |
ಇವರು ಭಾರತದ ಒಡಿಶಾದ ದೂರದ ಜೋಡಾ ಪಟ್ಟಣದಲ್ಲಿ ಬೆಳೆದರು ಅವರಿಗೆ ಬಾಲ್ಯದಲ್ಲಿ ನೃತ್ಯದ ಮೇಲೆ ಆಸಕ್ತಿ ಪ್ರಾರಂಭವಾಯಿತು. ಅಲ್ಲಿ ಅವರು ವಿವಿಧ ಉತ್ಸವಗಳಲ್ಲಿ ಸ್ಥಳೀಯ ಬುಡಕಟ್ಟು ನೃತ್ಯ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ನಂತರ ಇವರು ಸ್ನಾತಕೋತ್ತರ ಪದವಿಯನ್ನು ಒಡಿಶಾದ ಭುವನೇಶ್ವರದಲ್ಲಿರುವ ಸಂಗೀತ ಮತ್ತು ನೃತ್ಯ ಕಾಲೇಜು ಉತ್ಕಲ್ ಸಂಗೀತ ಮಹಾವಿದ್ಯಾಲಯದಿಂದ ಪಡೆದರು ಮತ್ತು ಒಡಿಸ್ಸಿ ನೃತ್ಯದಲ್ಲಿ ಮತ್ತು ಒಡಿಶಾದ ಸಮರ ಕಲೆಯ ನೃತ್ಯ ಪ್ರಕಾರವಾದ ಚೌ ನೃತ್ಯವನ್ನು ಅಧ್ಯಯನ ಮಾಡಿದ ಮತ್ತು ಪ್ರದರ್ಶಿಸಿದ ಮೊದಲ ಮಹಿಳೆಯರಲ್ಲಿ ಒಬ್ಬರು.
೧೯೯೩ ರಲ್ಲಿ, ಬ್ರಿಟಿಷರ ಆಳ್ವಿಕೆಯಲ್ಲಿ ದೇವ ದಾಸಿ (ದೇವಾಲಯ ನರ್ತಕಿ) ಸಂಪ್ರದಾಯ ಕೊನೆಗೊಂಡ ನಂತರ, ಒಡಿಶಾದ ಪುರಿಯಲ್ಲಿ ಜಗನ್ನಾಥ ದೇವರಿಗೆ ಪ್ರದರ್ಶನ ನೀಡಿದ ಮೊದಲ ನರ್ತಕಿಯಾಗಿ ಜ್ಯೋತಿ ರೌತ್ . ೧೯೯೭ ರಲ್ಲಿ, ಅವರು ಕ್ಯಾಲಿಫೋರ್ನಿಯಾ ಮೂಲದ ಒಡಿಸ್ಸಿ ನೃತ್ಯ ಶಾಲೆ ಜ್ಯೋತಿ ಕಲಾ ಮಂದಿರ, ಕಾಲೇಜ್ ಆಫ್ ಇಂಡಿಯನ್ ಕ್ಲಾಸಿಕಲ್ ಆರ್ಟ್ಸ್ ಅನ್ನು ಸ್ಥಾಪಿಸಿದರು, ಇದು ಪ್ರಸ್ತುತ USA, ಕ್ಯಾಲಿಫೋರ್ನಿಯಾದ ಫ್ರೀಮಾಂಟ್ನಲ್ಲಿ ನೆಲೆಗೊಂಡಿದೆ. [4] ೨೦೧೨ ರಲ್ಲಿ, ಅವರು ಭಾರತದ ಒಡಿಶಾದ ಲಿಂಗಿಪುರ ಭುವನೇಶ್ವರದಲ್ಲಿ ಶಾಖೆಯನ್ನು ಸ್ಥಾಪಿಸಿದರು. [4] [5] [6]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.