![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/43/The_Jonas_Brothers_perform_at_the_Kids%2527_Inaugural_cropped.jpg/640px-The_Jonas_Brothers_perform_at_the_Kids%2527_Inaugural_cropped.jpg&w=640&q=50)
ಜೋನಸ್ ಸಹೋದರರು
From Wikipedia, the free encyclopedia
ಜೋನಸ್ ಬ್ರದರ್ಸ್ ಅಮೇರಿಕದ ಪಾಪ್ ರಾಕ್ ಯುವಕರ ತಂಡ.[3][4][5][6] ತಂಡವು ತನ್ನ ಜನಪ್ರಿಯತೆಯನ್ನು ಡಿಸ್ನಿ ವಾಹಿನಿಯ ಮಕ್ಕಳ ದೂರದರ್ಶನ ಕಾರ್ಯಕ್ರಮದಿಂದ ಗಳಿಸಿತು. ನ್ಯೂ ಜರ್ಸಿ ರಾಜ್ಯದ, ವೈಕಾಫ್ ನಗರದ ಈ ತಂಡವು, ಮೂವರು ಸಹೋದರರಾದ ಪೌಲ್ ಕೆವಿನ್ ಜೊನಸ್ II(ಕೆವಿನ್ ಜೊನಸ್), ಜೋಸೆಫ್ ಆಡಮ್ ಜೊನಸ್(ಜಾಯ್ ಜೊನಸ್), ಮತ್ತು ನಿಖೊಲಸ್ ಜೆರ್ರಿ ಜೊನಸ್ (ನಿಕ್ ಜೊನಾಸ್)ರನ್ನು ಒಳಗೊಂಡಿದೆ. 2008 ರ ಬೇಸಿಗೆಯಲ್ಲಿ,ಇವರು ಡಿಸ್ನಿ ವಾಹಿನಿಯ ಮೂಲ ಚಿತ್ರ ಕ್ಯಾಂಪ್ ರಾಕ್ ನಲ್ಲಿ ಅಭಿನಯಿಸಿದರು. ಈ ತಂಡವು ನಾಲ್ಕು ಅಲ್ಬಮ್ಗಳನ್ನು ಬಿಡುಗಡೆ ಮಾಡಿತು: ಇಟ್ಸ್ ಎಬೌಟ್ ಟೈಮ್ , ಜೋನಸ್ ಬ್ರದರ್ಸ್ , ಎ ಲಿಟ್ಲ್ ಬಿಟ್ ಲಾಂಗರ್ ಹಾಗೂ ಲೈನ್ಸ್,ವೈನ್ಸ್ ಎಂಡ್ ಟ್ರೈಯಿಂಗ್ ಟೈಮ್ . 2008ರ 51ನೆ ಗ್ರಾಮೀ ಪ್ರಶಸ್ತಿಯಲ್ಲಿ, ಶ್ರೇಷ್ಠ ಹೊಸ ಕಲಾವಿದರು ವಿಭಾಗಕ್ಕೆ ಇವರ ಹೆಸರು ಸೂಚಿಸಲ್ಪಟ್ಟಿತು ಮತ್ತು ಅಮೇರಿಕನ್ ಮ್ಯೂಸಿಕ್ ಅವಾರ್ಡ್ಸ್ ನಲ್ಲಿ ಬ್ರೇಕ್ ಥ್ರೋ ಆರ್ಟಿಸ್ಟ್ ಪ್ರಶಸ್ತಿಯನ್ನು ಇವರು ಗೆದ್ದರು. 2009 ಮೇನಲ್ಲಿ, ಅವರು ಲೈನ್ಸ್,ವೈನ್ಸ್ ಎಂಡ್ ಟ್ರೈಯಿಂಗ್ ಟೈಮ್ ಬಿಡುಗಡೆಗೆ ಮುಂಚೆ,ಜಗತ್ತಿನಾದ್ಯಂತ ಎಂಟು ಮಿಲಿಯನ್ ಅಲ್ಬಮ್ಗಳನ್ನು ಮಾರಾಟಮಾಡಿದರು.[7]
Jonas Brothers | |
---|---|
![]() From left to right: Nick, Joe, and Kevin Jonas performing at the Kids' Inaugural: "We Are the Future" event in January 2009. | |
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | United States |
ಸಂಗೀತ ಶೈಲಿ | Pop,[1] soft rock[2], post-grunge[1] |
ಸಕ್ರಿಯ ವರ್ಷಗಳು | 2005–present |
Labels | Columbia, Daylight, Fascination, Hollywood, INO |
ಅಧೀಕೃತ ಜಾಲತಾಣ | www.jonasbrothers.com/ |
ಸಧ್ಯದ ಸದಸ್ಯರು | Joe Jonas Kevin Jonas Nick Jonas |