ಜೇಮ್ಸ್ ವ್ಯಾಟ್
ಗಣಿತಜ್ಞ / From Wikipedia, the free encyclopedia
ಜೇಮ್ಸ್ ವ್ಯಾಟ್ , ಎಫ್ಆರ್ಎಸ್, ಎಫ್ಆರ್ಎಸ್ಇ (೧೯ ಜನವರಿ ೧೭೩೬ - ೨೫ ಆಗಸ್ಷ್ ೧೮೧೯)[1] ಒಬ್ಬ ಉಗಿ ಎಂಜಿನ್ ಅನ್ನು ಕಂಡು ಹಿಡಿದ ಸ್ಕಾಟ್ಲ್ಯಾಂಡಿನ ಸಂಶೋಧಕ, ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಬ್ರಿಟನ್ ಸಂಯುಕ್ತ ಸಂಸ್ಥಾನ ಮತ್ತು ಪ್ರಪಂಚದಾದ್ಯಂತ ಮೂಲಭೂತ ಬದಲಾವಣೆ ತಂದವನು.
- ಗ್ಲ್ಯಾಸ್ಗೋ ವಿಶ್ವವಿದ್ಯಾಲಯದಲ್ಲಿ ಸಲಕರಣೆ ತಯಾರಿಸುವ ಕೆಲಸ ಮಾಡುವಾಗ ವ್ಯಾಟ್ಗೆ ಉಗಿ ಎಂಜಿನ್ ತಂತ್ರಜ್ಞಾನದಲ್ಲಿ ಆಸಕ್ತಿ ಮೂಡಿತು. ಸಮಕಾಲಿನ ಎಂಜಿನ್ ಮಾದರಿಗಳಲ್ಲಿ ಸಿಲಿಂಡರ್ ತಂಪಾಗುವಿಕೆ ಮತ್ತು ಮತ್ತೆ ಶಾಖ ಪಡೆಯುವ ಶಕ್ತಿಯು ನಷ್ಷವಾಗುತ್ತಿದ್ದು ಇದು ಒಂದು ದೊಡ್ಡ ಸಮಸ್ಯೆಯಾಗಿದೆ ಎಂದು ಅರ್ಥ ಮಾಡಿಕೊಂಡನು. ಪ್ರತ್ಯೇಕ ಕಂಡೆನ್ಸರ್ ಬಳಕೆಯಿಂದ ನಷ್ಷವಾಗುವ ಶಕ್ತಿಯನ್ನು ತಡೆಯಬಹುದು. ಹಾಗೆಯೇ ಶಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸಬಹುದು ಮತ್ತು ಬೆಲೆಯ ಪರಿಣಾಮವನ್ನು ಸುಧಾರಿಸಬಹುದು ಎಂದು ಕಂಡು ಕೊಂಡ ವ್ಯಾಟ್ ತನ್ನ ಬೆಳವಣಿಗೆಯ ಮಾದರಿಗಳನ್ನು ಪರಿಚಯಿಸಿದನು ಹಾಗೂ ಅಶ್ವಶಕ್ತಿಯ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದನು.[2]
- ಶಕ್ತಿಯ ಎಸ್ಐ ಸಂಕೇತ(ಘಟಕ) ವ್ಯಾಟ್ ಎಂದು ನಂತರ ವ್ಯಾಟ್ ನಾಮಕರಣ ಮಾಡಿದನು. ವ್ಯಾಟ್ ತನ್ನ ಸಂಶೋಧನೆಯನ್ನು ವಾಣಿಜ್ಯೀಕರಿಸಲು ಪ್ರಯತ್ನಿಸಿದನು, ಆದರೆ ೧೭೭೫ರ ವರೆಗೂ ಆರ್ಥಿಕ ಸಂಕಷ್ಷಕ್ಕೆ ಸಿಲುಕಿದ್ದರಿಂದ ಮ್ಯಾತ್ಯು ಬೌಲ್ಟನ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡನು. ಈ ಹೊಸ ವ್ಯವಹಾರದ ಪರಿಣಾಮ ಬೌಲ್ಟ್ನ್ ಮತ್ತು ವ್ಯಾಟ್ ಹೆಚ್ಚು ಯಶಸ್ಸು ಪಡೆದರು ಮತ್ತು ಇದರೊಂದಿಗೆ ವ್ಯಾಟ್ ಶ್ರೀಮಂತನಾದನು. ವ್ಯಾಟ್ ತನ್ನ ನಿವೃತ್ತಿ ನಂತರವೂ ಮಹತ್ವವಾದ ತನ್ನ ಉಗಿ ಎಂಜಿನ್ ಕೆಲಸದಲ್ಲಿ ಹೊಸ ಸಂಶೋಧನೆಯನ್ನು ಮುಂದುವರಿಸಿದನು. ೮೩ನೇ ವಯಸ್ಸಿನಲ್ಲಿ ೧೮೧೯ ರಲ್ಲಿ ನಿಧನನಾದನು.
Quick Facts ಜೇಮ್ಸ್ ವ್ಯಾಟ್, ಜನನ ...
ಜೇಮ್ಸ್ ವ್ಯಾಟ್ | |
---|---|
ಜನನ | (೧೭೩೬-೦೧-೧೯)೧೯ ಜನವರಿ ೧೭೩೬ Greenock, Renfrewshire, Scotland |
ಮರಣ | 25 August 1819(1819-08-25) (aged 83)[1] Handsworth, Birmingham, ಇಂಗ್ಲೆಂಡ್ |
ವಾಸಸ್ಥಳ | Glasgow then Handsworth, Great Britain |
ಪೌರತ್ವ | Kingdom of Great Britain |
ರಾಷ್ಟ್ರೀಯತೆ | Scottish |
ಕಾರ್ಯಕ್ಷೇತ್ರ | Inventor and Mechanical Engineer |
ಸಂಸ್ಥೆಗಳು | University of Glasgow Boulton and Watt |
ಪ್ರಸಿದ್ಧಿಗೆ ಕಾರಣ | Improving the steam engine |
ಹಸ್ತಾಕ್ಷರ |
Close