ಜೆನ್ನಾ ಜೇಮ್ಸನ್
From Wikipedia, the free encyclopedia
ಜೆನ್ನಾ ಜೇಮ್ಸನ್ , (ಜೆನ್ನಾ ಮೇರಿ ಮಸ್ಸೊಲಿ ಜನನ; ಎಪ್ರಿಲ್ 9, 1974)[1][1][2] ಅಮೆರಿಕಾದ ಉದ್ಯಮಿ ಮತ್ತು ಮಾಜಿ ಕಾಮಪ್ರಚೋದಕ ಚಿತ್ರಗಳ ನಟಿ, ಅವರನ್ನು ವಿಶ್ವದ ಪೋರ್ನ್ ಚಿತ್ರಗಳ ಅತ್ಯಂತ ಪ್ರಸಿದ್ಧ ನಟಿ[3][4][5] ಮತ್ತು "ಪೋರ್ನ್ ಚಿತ್ರಗಳ ರಾಣಿ" ಎಂದು ಕರೆಯಲಾಗಿದೆ.[6]
ಬತ್ತಲೆ ನರ್ತಕಿ ಮತ್ತು ಗ್ಲಾಮರ್ ರೂಪದರ್ಶಿಯಾಗಿ ಆರಂಭದಲ್ಲಿ ಕೆಲಸ ಮಾಡಿದ್ದ ಅವರು, ನಂತರ 1993ರಲ್ಲಿ ಕಾಮಪ್ರಚೋದಕ ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು. 1996ರ ಹೊತ್ತಿಗೆ, ಮೂರು ಪ್ರಮುಖ ಕಾಮಪ್ರಚೋದಕ ಚಿತ್ರ ನಿರ್ಮಾಣ ಸಂಸ್ಥೆಗಳಿಂದ ಪ್ರತ್ಯೇಕವಾಗಿ 'ಅಗ್ರ ಹೊಸ ಮುಖ' ಪ್ರಶಸ್ತಿ ಪಡೆದಿದ್ದರು. ಜೇಮ್ಸನ್ ಅಂದಿನಿಂದ ಈವರೆಗೂ 20ಕ್ಕೂ ಹೆಚ್ಚು ವಯಸ್ಕರ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ, ಮತ್ತು X-ರೇಟೆಡ್ ಕ್ರಿಟಿಕ್ಸ್ ಆರ್ಗನೈಝೇಷನ್ (XRCO) ಮತ್ತು ವಯಸ್ಕರ ವಿಡಿಯೋ ನ್ಯೂಸ್ AVN) ಹಾಲ್ಸ್ ಆಫ್ ಫೇಮ್ಗೆ ಅವರನ್ನು ಸೇರಿಸಲಾಗಿದೆ.[7][8]
ಜೇಮ್ಸನ್ ಅವರು 2000ರಲ್ಲಿ ಜೇ ಗರ್ಡಿನಾ ಜೊತೆ ಸೇರಿ ಕ್ಲಬ್ ಜೆನ್ನಾ ಎಂಬ ಕಾಮಪ್ರಚೋದಕ ಮನರಂಜನಾ ಸಂಸ್ಥೆಯನ್ನು ಸ್ಥಾಪಿಸಿದರು, ನಂತರ ಜೇ ಗರ್ಡಿನಾ ಅವರನ್ನು ವಿವಾಹವಾದರು ಮತ್ತು ಬಳಿಕ ಅವರಿಂದ ವಿಚ್ಛೇದನ ಪಡೆದರು. ಆರಂಭದಲ್ಲಿ ಕ್ಲಬ್ ಜೆನ್ನಾ ಒಂದೇ ವೆಬ್ಸೈಟ್ ಆಗಿತ್ತು, ಕ್ರಮೇಣವಾಗಿ ಈ ಉದ್ಯಮ ವಿಸ್ತರಿಸಿಕೊಂಡು ಇತರೆ ತಾರೆಗಳ ಇದೇ ತೆರನಾದ ವೆಬ್ಸೈಟ್ಗಳನ್ನು ನಿರ್ವಹಿಸತೊಡಗಿತು ಮತ್ತು 2001ರಲ್ಲಿ ಕಾಮಪ್ರಚೋದಕ ಚಿತ್ರಗಳ ನಿರ್ಮಾಣ ಆರಂಭಿಸಿತು.
ಈ ಸಂಸ್ಥೆ ನಿರ್ಮಿಸಿದ ಮೊದಲ ಕಾಮಪ್ರಚೋದಕ ಚಿತ್ರವೆಂದರೆ, ಬ್ರಿಯಾನಾ ಲವ್ಸ್ ಜೆನ್ನಾ (ಬ್ರಿಯಾನಾ ಬ್ಯಾಂಕ್ಸ್ ಜೊತೆಗೆ), ಇದು 2002ನೇ ಸಾಲಿನ ಅತ್ಯುತ್ತಮ- ಮಾರಾಟ ಮತ್ತು ಅತ್ಯುತ್ತಮ-ಬಾಡಿಗೆ ವಿಭಾಗದಲ್ಲಿ 2003ರಲ್ಲಿ AVN ಪ್ರಶಸ್ತಿಗೆ ನಾಮಕರಣಗೊಂಡಿತು.[9] 2005ರ ಹೊತ್ತಿಗೆ, ಕ್ಲಬ್ ಜೆನ್ನಾಕ್ಕೆ US$ 30 ದಶಲಕ್ಷ ಆದಾಯವಿತ್ತು, ಇದರಲ್ಲಿ ಅರ್ಧದಷ್ಟು ಲಾಭವೇ ಇರಬಹುದೆಂದು ಅಂದಾಜು ಮಾಡಲಾಗಿದೆ.[4] ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ರೇರ್ನಲ್ಲಿರುವ 48 ಅಡಿ ಎತ್ತರದ ಜಾಹೀರಾತು ಫಲಕಗಳಲ್ಲಿ ಜೇಮ್ಸನ್ರ ವೆಬ್ಸೈಟ್, ಅವರ ಚಲನಚಿತ್ರಗಳ ಜಾಹೀರಾತುಗಳು ಮತ್ತು ಕೆಲವೊಮ್ಮೆ ಅವರ ಭಾವಚಿತ್ರವನ್ನೂ ತೂಗು ಹಾಕಲಾಗುತ್ತಿತ್ತು.
ಪ್ಲೇ ಬಾಯ್ TVಯು ಜೆನ್ನಾರ ಅಮೆರಿಕನ್ ಸೆಕ್ಸ್ ಸ್ಟಾರ್ ಎಂಬ ರಿಯಾಲಿಟಿ ಶೋದ ಆತಿಥ್ಯವಹಿಸಿದೆ, ಅಲ್ಲಿ ಮಹತ್ವಾಕಾಂಕ್ಷೆಯುಳ್ಳ ಕಾಮಪ್ರಚೋದಕ ಚಿತ್ರಗಳ ನಟಿಯರು ಕ್ಲಬ್ ಜೆನ್ನಾ ಸೇರಲು ಸ್ಪರ್ಧಿಸುತ್ತಾರೆ.[10] 1997ರಲ್ಲಿ ಹೊವಾರ್ಡ್ ಸ್ಟರ್ನ್ ನಿರ್ಮಿಸಿದ ಪ್ರೈವೇಟ್ ಪಾರ್ಟ್ಸ್ ಚಿತ್ರದಲ್ಲಿ ಕಿರು ಪಾತ್ರದಲ್ಲಿ ನಟಿಸುವುದರೊಂದಿಗೆ, ಪಾಪ್-ಸಂಸ್ಕೃತಿಯ ಮುಖ್ಯವಾಹಿನಿಗೂ ಕಾಲಿಟ್ಟರು.
ದಿ ಹೊವರ್ಡ್ ಸ್ಟರ್ನ್ ಶೋ ನಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುವುದರೊಂದಿಗೆ ಮುಖ್ಯವಾಹಿನಿಯಲ್ಲಿ ಜೇಮ್ಸನ್ ಮುಂದುವರಿದರು: E! ದೂರದರ್ಶನ ಆಯೋಜಿಸಿದ್ದ ಬಹಳೇ ಜನಪ್ರಿಯ ಗೆಸ್ಟ್-ಹೋಸ್ಟಿಂಗ್ ಕಾರ್ಯಕ್ರಮಗಳಾದ ವೈಲ್ಡ್ ಆನ್! ಮತ್ತು ಟಾಕ್ ಸೂಪ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು; ಫಾಕ್ಸ್ ಆನಿಮೇಷನ್ ನಿರ್ಮಾಣದ ಟೆಲಿವಿಷನ್ ಸಿಟ್ಕಾಂ ಫ್ಯಾಮಿಲಿ ಗೈ ನ 2001ನೇ ಕಂತಿನಲ್ಲಿ ಅತಿಥಿ ನಟಿಯಾಗಿ ಹಿನ್ನೆಲೆ-ಧ್ವನಿ(ಅಶರೀರವಾಣಿ); 2002ರಲ್ಲಿ ವಿಡಿಯೋ ಆಟ ಗ್ರ್ಯಾಂಜ್ ಥೆಫ್ಟ್ ಅಟೊ: ವೈಸ್ ಸಿಟಿ ನಲ್ಲಿ ಪ್ರಶಸ್ತಿ-ವಿಜೇತ ಹಿನ್ನೆಲೆ-ಧ್ವನಿ; ಮತ್ತು 2003ರ NBC ದೂರದರ್ಶನ ಸರಣಿಗಳ ಮಿಸ್ಟರ್ ಸ್ಚರ್ಲಿಂಗ್ ನ ಎರಡು ಕಂತುಗಳಲ್ಲಿ ಅತಿಥಿ ನಟಿ.
2004ರಲ್ಲಿ ಪ್ರಕಟವಾದ ಅವರ ಆತ್ಮಚರಿತ್ರೆ, ಹೌ ಟು ಮೇಕ್ ಲವ್ ಲೈಕ್ ಎ ಪೋರ್ನ್ ಸ್ಟಾರ್: ಎ ಕಾಷನರಿ ಟೇಲ್. ಈ ಪುಸ್ತಕ ಪ್ರಕಟಣೆಗೊಂಡ ಕೆಲವು ದಿನಗಳಲ್ಲೇ ಅತಿ ಹೆಚ್ಚು ಮಾರಾಟಗೊಂಡು, ದಿ ನ್ಯೂಯಾರ್ಕ್ ಟೈಮ್ಸ್ನ ಅತಿ ಹೆಚ್ಚು ಮಾರಾಟಗೊಂಡ ಪುಸ್ತಕಗಳ ಪಟ್ಟಿಯಲ್ಲಿ ಸತತ ಆರು ವಾರ ಪ್ರಕಟಗೊಂಡಿತು.[4] .[4] ಜೆನ್ನಾ ಭಯಾನಕ ಹಾಸ್ಯ ಪುಸ್ತಕದ ರಚನೆಗೂ ಕೈ ಹಾಕಿದರು, ಎಲ್ಲೂ ಪ್ರಕಟವಾಗದ (ವರ್ಜಿನ್ ಕಾಮಿಕ್ಸ್) ಹಾಸ್ಯಗಳಿರುವ ಜೆನ್ನಾ ಜೇಮ್ಸನ್ರ ಶ್ಯಾಡೋ ಹಂಟರ್ ಎಂಬ ಅವರ ಪುಸ್ತಕ ಫೆಬ್ರವರಿ 2008ರಲ್ಲಿ ಬಿಡುಗಡೆಯಾಯಿತು. 2008ರಲ್ಲಿ ತೆರೆ ಕಂಡ ಭಯಾನಕ-ಹಾಸ್ಯ ಚಿತ್ರ ಝಾಂಬಿ ಸ್ಟ್ರಿಪ್ಪರ್ಸ್ ನಲ್ಲಿ ನಾಯಕಿ ಪಾತ್ರದಲ್ಲಿ ಜೆನ್ನಾ ನಟಿಸಿದರು.