ಜುರಾಸಿಕ್ ಪಾರ್ಕ್ (ಸಿನಿಮಾ)
From Wikipedia, the free encyclopedia
ಜುರಾಸಿಕ್ ಪಾರ್ಕ್ ೧೯೯೩ರಲ್ಲಿ ಬಿಡುಗಡೆಯಾದ ಅಮೆರಿಕದ ಒಂದು ವೈಜ್ಞಾನಿಕ ಕಾಲ್ಪನಿಕ ಸಾಹಸ ಸಿನಿಮಾ.[3] ಇದನ್ನು ಸ್ಟೀವನ್ ಸ್ಪಿಲ್ಬರ್ಗ್ ನಿರ್ದೇಶಿಸಿದ್ದಾರೆ ಮತ್ತು ಮೈಕಲ್ ಕ್ರೈಟನ್ ಬರೆದಿರುವ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಸಿನಿಮಾದಲ್ಲಿ ಸ್ಯಾಮ್ ನೀಲ್, ಲಾರಾ ಡೆರ್ನ್, ಜೆಫ್ ಗೋಲ್ಡ್ಬ್ಲಮ್ ಮತ್ತು ರಿಚರ್ಡ್ ಅಟೆನ್ಬರೋ ನಟಿಸಿದ್ದಾರೆ.
ಜುರಾಸಿಕ್ ಪಾರ್ಕ್ | |
---|---|
ನಿರ್ದೇಶನ | ಸ್ಟೀವನ್ ಸ್ಪಿಲ್ಬರ್ಗ್ |
ನಿರ್ಮಾಪಕ | Kathleen Kennedy Gerald R. Molen Steven Spielberg |
ಚಿತ್ರಕಥೆ | David Koepp Michael Crichton |
ಆಧಾರ | Jurassic Park by Michael Crichton |
ಪಾತ್ರವರ್ಗ | Sam Neill Laura Dern Jeff Goldblum Richard Attenborough Bob Peck Martin Ferrero B.D. Wong Samuel L. Jackson Wayne Knight Joseph Mazzello Ariana Richards |
ಸಂಗೀತ | John Williams |
ಛಾಯಾಗ್ರಹಣ | Dean Cundey |
ಸಂಕಲನ | Michael Kahn |
ಸ್ಟುಡಿಯೋ | Amblin Entertainment |
ವಿತರಕರು | Universal Pictures |
ಬಿಡುಗಡೆಯಾಗಿದ್ದು |
|
ಅವಧಿ | ೧೨೭ minutes |
ದೇಶ | ಟೆಂಪ್ಲೇಟು:Film US |
ಭಾಷೆ | English Spanish |
ಬಂಡವಾಳ | $೬೩ million[1] |
ಬಾಕ್ಸ್ ಆಫೀಸ್ | $೯೧೪,೬೯೧,೧೧೮[2] |
ಈ ಸಿನಿಮಾ ಪೆಸಿಫಿಕ್ ತೀರದ ಮಧ್ಯ ಅಮೆರಿಕದಲ್ಲಿ ಕೋಸ್ಟಾ ರಿಕಾದ ಬಳಿಯ ಕಾಲ್ಪನಿಕ ಐಸ್ಲ ನ್ಯುಬ್ಲರ್ನಲ್ಲಿ ಒಬ್ಬ ಪರೋಪಕಾರಿ ಕೋಟ್ಯಧಿಪತಿ ಮತ್ತು ವಂಶವಾಹಿ ವಿಜ್ಞಾನಿಗಳ ಒಂದು ಸಣ್ಣ ತಂಡ ಸೇರಿ ಕ್ಲೋನ್ ಮಾಡಿದ ಡೈನೋಸಾರ್ಗಳ ಮನೋರಂಜನಾ ಪಾರ್ಕ್ ಹುಟ್ಟುಹಾಕಿದ ಕಥೆಯನ್ನು ಕೇಂದ್ರವಾಗಿಟ್ಟುಕೊಂಡಿದೆ.
ಕ್ರೈಟನ್ ಅವರ ಕಾದಂಬರಿ ಪ್ರಕಟವಾಗುವುದಕ್ಕಿಂತ ಮೊದಲೇ, ವಾರ್ನರ್ ಬ್ರದರ್ಸ್, ಕೊಲಂಬಿಯಾ, ಟ್ರೈಸ್ಟಾರ್, ೨೦ಯತ್ ಸೆಂಚುರಿ ಫಾಕ್ಸ್ ಮತ್ತು ಯುನಿವರ್ಸಲ್ ಸ್ಟುಡಿಯೋಗಳು ಅದನ್ನು ಸಿನಿಮಾ ಮಾಡುವ ಹಕ್ಕುಗಳಿಗಾಗಿ ಪ್ರಯತ್ನ ನಡೆಸಿದ್ದವು. ಯುನಿವರ್ಸಲ್ ಸ್ಟುಡಿಯೋಸ್ ಬೆಂಬಲದೊಂದಿಗೆ ಸ್ಪಿಲ್ಬರ್ಗ್, ಕಾದಂಬರಿಯ್ ೧೯೯೦ರಲ್ಲಿ ಪ್ರಕಟವಾಗುವುದಕ್ಕಿಂತ ಮೊದಲೇ ಅದರ ಹಕ್ಕುಗಳನ್ನು ಪಡೆದುಕೊಂಡರು ಮತ್ತು ಕ್ರೈಟನ್ಗೆ ಕಾದಂಬರಿಯನ್ನು ಚಿತ್ರಕಥೆ ರೂಪಕ್ಕೆ ತರಲು ಹೆಚ್ಚುವರಿ ೫೦೦,೦೦೦ ಡಾಲರ್ ಹಣ ನೀಡಿದರು.[4] ಡೇವಿಡ್ ಕೋಪ್ ಅಂತಿಮ ಕರಡನ್ನು ಸಿದ್ಧಪಡಿಸಿದರು, ಕಾದಂಬರಿಯ ಬಹುಭಾಗವನ್ನು ಮತ್ತು ಹಿಂಸಾತ್ಮಕ ದೃಶ್ಯಗಳನ್ನು ಕೈಬಿಟ್ಟರು. ಜೊತೆಗೆ ಪಾತ್ರ ಚಿತ್ರಣದಲ್ಲಿಯೂ ಸಾಕಷ್ಟು ಬದಲಾವಣೆ ಮಾಡಿದರು.
ಜುರಾಸಿಕ್ ಪಾರ್ಕ್ ಸಿನಿಮಾ ಕಂಪ್ಯೂಟರ್ನಿಂದ ರೂಪಿಸಿದ ದೃಶ್ಯಗಳನ್ನು ಬಳಸಿದ ಸಿನಿಮಾಗಳಲ್ಲಿ ಒಂದು ಮೈಲುಗಲ್ಲು ಎಂದು ಪರಿಗಣಿಸಲಾಗಿದೆ. ಜೊತೆಗೆ ಸಿನಿಮಾಕ್ಕೆ ಅತ್ಯುತ್ತಮ ವಿಮರ್ಶೆಯೂ ದೊರೆಯಿತು. ಸಿನಿಮಾ ಬಿಡುಗಡೆದಾಗ, ವಿಶ್ವಾದ್ಯಂತ ೯೧೪ ದಶಲಕ್ಷ ಡಾಲರ್ಗೂ ಅಧಿಕ ಹಣವನ್ನು ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿತು. ಇದು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ಆವರೆಗೆ ಬಿಡುಗಡೆಯಾದ ಎಲ್ಲ ಸಿನಿಮಾಗಳ ದಾಖಲೆಯನ್ನು ಮೀರಿಸಿತು (ಇ.ಟಿ. ದಿ ಎಕ್ಸ್ಟ್ರಾ ಟೆರೆಸ್ಟ್ರಿಯಲ್ ಸಿನಿಮಾದ ದಾಖಲೆಯನ್ನೂ ಮೀರಿಸಿತ್ತು.) ೪ ವರ್ಷಗಳ ನಂತರ ಬಿಡುಗಡೆಯಾದ ಟೈಟಾನಿಕ್ ) ಇದರ ದಾಖಲೆಯನ್ನು ಮೀರಿಸಿತು. ಸದ್ಯ ಈ ಸಿನಿಮಾ ೧೬ನೇ ಅತ್ಯಧಿಕ ಗಳಿಕೆಯ ಸಿನಿಮಾ ಆಗಿದೆ. (ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡರೆ, ಉತ್ತರ ಅಮೆರಿಕಾದಲ್ಲಿ ೧೮ನೇ ಅತ್ಯಧಿಕ ಗಳಿಕೆಯ ಸಿನಿಮಾ ಆಗಿದೆ). ಇದು ಎನ್ಬಿಸಿಯುನಿವರ್ಸಲ್ ಮತ್ತು ಸ್ಟೀವನ್ ಸ್ಪಿಲ್ಬರ್ಗ್ಗೆ ಹಣಕಾಸಿನ ದೃಷ್ಟಿಯಿಂದ ಅತ್ಯಂತ ಯಶಸ್ಸು ತಂದುಕೊಟ್ಟ ಸಿನಿಮಾ ಆಗಿದೆ. ಅತ್ಯುತ್ತಮ ಶಬ್ದ ಮಿಶ್ರಣ (ಸೌಂಡ್ ಮಿಕ್ಸಿಂಗ್), ಅತ್ಯುತ್ತಮ ಶಬ್ದ ಸಂಕಲನ ಮತ್ತು ಅತ್ಯುತ್ತಮ ದೃಶ್ಯ ಪರಿಣಾಮ (ವಿಶುವಲ್ ಇಫೆಕ್ಟ್) ವಿಭಾಗಗಳಲ್ಲಿ ಅಕಾಡೆಮಿ ಪ್ರಶಸ್ತಿ ಗಳಿಸಿದೆ.