![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/1/1a/John_Keats_by_William_Hilton.jpg/640px-John_Keats_by_William_Hilton.jpg&w=640&q=50)
ಜಾನ್ ಕೀಟ್ಸ್
From Wikipedia, the free encyclopedia
ಜಾನ್ ಕೀಟ್ಸ್ (31 ಅಕ್ಟೋಬರ್ 1795- 23 ಫೆಬ್ರವರಿ 1821) ಈತ ಆಂಗ್ಲ ಸಾಹಿತ್ಯದಲ್ಲಿ ಎರಡನೆಯ ಪೀಳಿಗೆಯ ಇಂಗ್ಲಿಷ್ ರೊಮಾಂಟಿಕ್ ಕವಿಗಳಲ್ಲಿ ವ್ಯಕ್ತಿತ್ವವೂ ಔನ್ನತ್ಯವೂ ಉಳ್ಳ ಗುಂಪಿಗೆ ಸೇರಲು ಅರ್ಹನಾದ ಕವಿ. ಈತ ಇಂಗ್ಲೀಷಿನ ಖ್ಯಾತ ಕವಿಗಳಾದ ಲಾರ್ಡ್ ಬೈರನ್ ಮತ್ತು ಪಿ.ಬಿ.ಶೆಲ್ಲಿಯವರ ಸಮಕಾಲೀನ. ಈತನ ಕೃತಿಗಳು ಈತನ ಸಾವಿನ ಕೇವಲ ನಾಲ್ಕು ವರ್ಷಗಳ ಮೊದಲು ಮುದ್ರಣವನ್ನು ಕಾಣತೊಡಗಿದವು.
Quick Facts ಜಾನ್ ಕೀಟ್ಸ್, ಜನನ ...
ಜಾನ್ ಕೀಟ್ಸ್ | |
---|---|
![]() Portrait of John Keats by William Hilton. National Portrait Gallery, London | |
ಜನನ | (೧೭೯೫-೧೦-೩೧)೩೧ ಅಕ್ಟೋಬರ್ ೧೭೯೫ Moorgate, ಲಂಡನ್, ಇಂಗ್ಲೆಂಡ್ |
ಮರಣ | 23 February 1821(1821-02-23) (aged 25) Rome, Papal States |
ವೃತ್ತಿ | Poet |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | King's College London |
ಸಾಹಿತ್ಯ ಚಳುವಳಿ | Romanticism |
Close
ಈತನ ಕೃತಿಗಳು ಈತನ ಜೀವನ ಕಾಲದಲ್ಲಿ ಬಹಳಷ್ಟು ಟೀಕೆಗೆ ಗುರಿಯಾಗಿದ್ದವು. ಆದರೆ ಈತನ ಮರಣಾನಂತರ ಈತನ ಕೃತಿಗಳು ಜನಮನ್ನಣೆಯನ್ನು ಪಡೆಯತೊಡಗಿದವು ಹಾಗು 19ನೇ ಶತಮಾನದಲ್ಲಿ ಪ್ರತಿಷ್ಟಿತ ಆಂಗ್ಲಕವಿಯಾಗಿ ಹೊರಹೊಮ್ಮಿದ.