ಜರಾಯು (ಪ್ಲಸೆಂಟ್)
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
You can edit this article | Click "show" for simple instructions: |
---|---|
Getting started
The editors at WikiProject Medicine will happily answer any questions you may have. Be guided by these important principles No original research
Reliable sources
Use your own words
Citing sources
|
ಟೆಂಪ್ಲೇಟು:Infobox Embryology ಜರಾಯು ಎಂಬುದು ಬೆಳವಣಿಗೆಯಾಗುತ್ತಿರುವ ಭ್ರೂಣವನ್ನು ಗರ್ಭಾಶಯದ ಭಿತ್ತಿಗೆ ಜೋಡಿಸುವ ಒಂದು ಅಂಗ; ಇದು ತಾಯಿಯಿಂದ ಬರುವ ರಕ್ತದ ಪೂರೈಕೆಯಿಂದ ಮಗುವು ಪೌಷ್ಟಿಕಾಂಶ ಪಡೆಯುವಿಕೆ, ವ್ಯರ್ಥ ಪದಾರ್ಥಗಳ ವಿಸರ್ಜನೆಗೆ, ಹಾಗು ಅನಿಲದ ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಜರಾಯುಗಳು ಯುಥೆರಿಯನ್ ಅಥವಾ ಜರಾಯುಯುಕ್ತ ಸಸ್ತನಿಗಳಲ್ಲಿ ಒಂದು ನಿರೂಪಿತ ಲಕ್ಷಣವಾಗಿವೆ. ಆದರೆ ಇದು ಸಸ್ತನಿಯ ಹಂತದವರೆಗೂ ವಿವಿಧ ಪ್ರಕಾರಗಳಲ್ಲಿ ಬೆಳವಣಿಗೆಯಾಗುವ ಕೆಲವು ಹಾವುಗಳು ಹಾಗು ಹಲ್ಲಿಗಳಲ್ಲಿಯೂ(ಸರಿಸೃಪಗಳು) ಸಹ ಕಂಡುಬರುತ್ತದೆ.[1] ಪ್ಲಸೆಂಟ ಎಂಬ ಪದವು ಕೇಕ್ ಎಂಬ ಅರ್ಥವನ್ನು ನೀಡುವ ಲ್ಯಾಟಿನ್ ಪದದಿಂದ ವ್ಯುತ್ಪತ್ತಿ ಹೊಂದಿದೆ. ಗ್ರೀಕ್ ನ ಪ್ಲಕೋಎಂಟ/ಪ್ಲಕೌಂಟ , ಪ್ಲಕೊಯೇಯಿಸ್/ಪ್ಲಕೌಸ್ ನ ದ್ವಿತೀಯಾ ವಿಭಕ್ತಿಯಾಗಿದೆ - πλακόεις, πλακούς , ಇದು "ಚಪ್ಪಟೆಯಾದ, ಹಲಗೆಯ ಮಾದರಿ" ಎಂಬ ಅರ್ಥ ನೀಡುತ್ತದೆ.[2] ಇದು ಮನುಷ್ಯರಲ್ಲಿ ಕಂಡುಬರುವ ಗುಂಡನೆಯ, ಚಪ್ಪಟೆಯಾಕಾರದ ರೂಪಕ್ಕೆ ಉಲ್ಲೇಖಿತವಾಗಿದೆ. ಪ್ರೋಥೆರಿಯ(ಮೊಟ್ಟೆಯಿಡುವ) ಹಾಗು ಮೆಟಾತೆರಿಯ(ಕೋಶವನ್ನು ಹೊಂದಿರುವ) ಸಸ್ತನಿಗಳು, ಕೊರಿಯೋವಿಟೆಲ್ಲಿನ್ ಜರಾಯುವನ್ನು ಹೊಂದಿರುತ್ತವೆ. ಇದು ಗರ್ಭಾಶಯದ ಭಿತ್ತಿಗೆ ಜೋಡಣೆಯಾದಾಗ, ಮೊಟ್ಟೆಯ ಚೀಲದಿಂದ ಪ್ರಮುಖವಾಗಿ ಉತ್ಪಾದನೆಯಾದ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಭ್ರೂಣವನ್ನು ರೂಪಿಸುವ ಅದೇ ವೀರ್ಯಾಣು ಹಾಗು ಅಂಡಾಣುಗಳಿಂದ ಜರಾಯು ಬೆಳವಣಿಗೆಯಾಗುತ್ತದೆ. ಅಲ್ಲದೇ ಎರಡು ಅಂಶಗಳೊಂದಿಗೆ ಫೀಟೊಮೇಟರ್ನಲ್ (ರಕ್ತಕೋಶಗಳ ಸಾಗಣೆ)ಅಂಗವಾಗಿ ಕಾರ್ಯನಿರ್ವಹಿಸುತ್ತದೆ. ಭ್ರೂಣದ ಭಾಗ(ಕೊರಿಯೋನ್ ಫ್ರೋನ್ಡೋಸಂ), ಹಾಗು ಮಾತೃಕ ಭಾಗ(ಡೆಸಿಡುವ ಬಸಲಿಸ್)ಎನಿಸಿದೆ.