![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/80/Che_Guevara_-_Guerrillero_Heroico_by_Alberto_Korda.jpg/640px-Che_Guevara_-_Guerrillero_Heroico_by_Alberto_Korda.jpg&w=640&q=50)
ಚೇ ಗುವಾರ
From Wikipedia, the free encyclopedia
ಅರ್ನೆಸ್ಟೊ ಗುವಾರ (ಜೂನ್ ೧೪, ೧೯೨೮ - ಅಕ್ಟೋಬರ್ ೯, ೧೯೬೭), ಜನಪ್ರಿಯವಾಗಿ ಚೇ ಗುವಾರ, ಎಲ್ ಚೇ ಅಥವ ಬರಿ ಚೇ ಎಂದು ಕರೆಯಲ್ಪಡುತ್ತಾರೆ. ಅರ್ಜೆಂಟೀನಾದಲ್ಲಿ ಹುಟ್ಟಿದ ಮಾರ್ಕ್ಸ್ ವಾದಿ, ಕ್ರಾಂತಿವಾದಿ, ರಾಜಕೀಯ ವ್ಯಕ್ತಿ, ಮತ್ತು ಕ್ಯೂಬ ಮತ್ತು ಅಂತರರಾಷ್ಟ್ರೀಯ ಗೆರಿಲ್ಲಾಗಳ ನಾಯಕ.
ಅರ್ನೆಸ್ಟೊ "ಚೇ" ಗುವಾರ | |
---|---|
![]() ಚೇ ಗುವೇರ | |
ಜನನ | ಜೂನ್ ೧೪, ೧೯೨೮ ರೊಸಾರಿಯೊ, ಅರ್ಜೆಂಟೀನ |
ಮರಣ | October 9, 1967(1967-10-09) (aged 39) ಲಾ ಹಿಗುವಾರ, ಬೊಲಿವಿಯ |
ಗಮನಾರ್ಹ ಕೆಲಸಗಳು | ಸಮಾಜವಾದಿ, ಮಾರ್ಕ್ಸ್ವಾದಿ, ಕ್ರಾಂತಿವಾದಿ |
ಚೆ ಗುವೆರ ೧೯೨೮ ಲ್ಲಿ ರೊಸಾರಿಯೋ,ಅರ್ಜೆಂಟೀನದಲ್ಲಿ ಹುಟ್ಟಿದರು. ಅವರು ಬ್ಯೂನಸ್ ವಿಶ್ವವಿದ್ಯಾಲಯದಲ್ಲಿ ವಿಧ್ಯಾಭ್ಯಾಸ ಪಡೆದರು. ವೈದ್ಯನಾಗಲು ಕನಸುಕಂಡಿದ್ದ ಆತ ತನ್ನ ರಜಾದಿನಗಳಲ್ಲಿ ಲ್ಯಾಟಿನ್ ಅಮೆರಿಕದ ಉದ್ದಕ್ಕೂ ಪ್ರವಾಸ ಕೈಗೊಂಡಿದ್ದ , ಈ ಸಮಯದಲ್ಲಿ ಆತನಲ್ಲಿ ಆದ ಅನುಭವಗಳು ಮತ್ತು ವೀಕ್ಷಣೆಗಳು ಆತನಲ್ಲಿ ಒಂದು ಪ್ರಬಲವಾದ ನಿರ್ಣಯಕ್ಕೆ ಕಾರಣವಾಯಿತು ಅದೇನಂದರೆ ಆ ಪ್ರದೇಶದಲ್ಲಿ ಬೇರುಬಿಟ್ಟ ಆರ್ಥಿಕ ಅಸಮಾನತೆ ,ಬಂಡವಾಳಶಾಹಿ, ಏಕಸ್ವಾಮ್ಯತೆ, ತತ್ತ್ವ,,ಸಾಮ್ರಾಜ್ಯಶಾಹಿ ಮತ್ತಿತರ ಆಂತರಿಕ ಬಿಕ್ಕಟ್ಟುಗಳು ತೊಲಗಬೇಕಾದರೆ ಇರುವ ಒಂದೇ ಒಂದು ಮಾರ್ಗವೆಂದರೆ ಅದೇ ಕ್ರಾಂತಿ. ಈ ನಂಬಿಕೆಯೇ ಅಧ್ಯಕ್ಷ ಜಾಕೋಬ್ ಅರ್ಬೆಂಜ್ನ ಗ್ವಾಟೆಮಾಲಾ ಸಾಮಾಜಿಕ ಸುಧಾರಣೆಯ ಪಕ್ಷ ಸೇರಲು ಪ್ರೇರೇಪಿಸಿತು. ನಂತರ, ಮೆಕ್ಸಿಕೋ ಸಿಟಿಯಲ್ಲಿ ವಾಸಿಸುತ್ತಿರುವಾಗಲೇ ರೌಲ್ ಮತ್ತು ಫಿಡೆಲ್ ಕ್ಯಾಸ್ಟ್ರೋರ ಭೇಟಿಯಾಗಿ ಅವರ ಜುಲೈ ೨೮ರ ಚಳುವಳಿಯನ್ನು ಸೇರಿದನು ನಂತರ US ಬೆಂಬಲಿತ ಕ್ಯೂಬಾದ ಸರ್ವಾಧಿಕಾರಿ ಫಲ್ಜೆಂಸಿಯೋ ಬಟಿಸ್ಟಾ ನನ್ನು ಅಧಿಕಾರದಿಂದ ಕಿತ್ತುಹಾಕುವ ಉದ್ದೇಶದಿಂದ ಗ್ರನ್ಮ ಎಂಬ ಹಡಗಿನಲ್ಲಿ ಕ್ಯೂಬಾ ತಲುಪಿದನು. ಗುವೆರಾ ಅತೀ ಶೀಘ್ರದಲ್ಲೇ ಬಂಡುಕೋರರ ನಡುವೆ ಪ್ರಸಿದ್ಧಿಯನ್ನು ಪಡೆದಕಾರಣವಾಗಿ ಎರಡನೆಯ ಅಧಿಕಾರಿಯಾಗಿ ಬಡ್ತಿ ನೀಡಲಾಯಿತು ಮತ್ತು ಬಟಿಸ್ಟಾ ಆಡಳಿತ ಪದಚ್ಯುತಗೊಂಡನಂತರ ತನ್ನ ವಿಜಯದ ಎರಡು ವರ್ಷದ ಗೆರಿಲ್ಲಾ ಅಭಿಯಾನದಲ್ಲಿ ಪ್ರಮುಖ ಪಾತ್ರವಹಿಸಿದ್ದನು ,೧೯೬೪ರಲ್ಲಿ ಗುವೇರಾ ತನ್ನ ಕ್ರಾಂತಿಯನ್ನು ಉತ್ತೇಜಿಸುವ ಉದ್ದೇಶದಿಂದ ಕ್ಯೂಬಾವನ್ನು ಬಿಟ್ಟು ವಿದೇಶ ಪ್ರವಾಸನ್ನು ಕೈಗೊಂಡಿದ್ದ. ಅಕ್ಟೋಬರ್ ೯, ೧೯೬೭ರಂದು CIA ನೆರವಿನಿಂದ ಬೊಲಿವಿಯದಲ್ಲಿ ಸೆರೆಹಿಡಿದು ಅಧಿಕಾರಿಗಳ ಕಟ್ಟಪ್ಪಣೆಯಿಂದ ಗುವೇರನನ್ನು ಗುಂಡುಹೊಡೆದು ಕೊಲ್ಲಲಾಯಿತು.
ಗುವೇರ ಪ್ರಬಲ ಬರಹಗಾರ ,ದಿನಚರಿಗಾರನೂ ಕೂಡ ಆಗಿದ್ದ ಆತನ ಗೆರಿಲ್ಲಾ ಸಮರ ಕೈಪಿಡಿ ಮತ್ತು ತನ್ನ ಲ್ಯಾಟಿನ್ ಅಮೆರಿಕಾದ ಪ್ರವಾಸದ ಘಟನಾವಳಿಗಳನ್ನು ಒಳಗೊಂಡ ದ ಮೋಟರ್ ಸೈಕಲ್ ಡೈರೀಸ್ ಉತ್ತಮವಾಗಿ ಮಾರಾಟಗೊಂಡ ಕೃತಿಗಳು. ೨೦೦೪ರಲ್ಲಿ ಸ್ಪೇನ್ ಭಾಷೆಯಲ್ಲಿ ಚಲನಚಿತ್ರವಾದ ದ ಮೋಟರ್ ಸೈಕಲ್ ಡೈರೀಸ್ ವಿಮರ್ಶಕರಿಂದ ಉತ್ತಮ ವಿಮರ್ಶೆಯನ್ನು ಪಡೆದು ಯಶಸ್ವಿಚಿತ್ರವೆನಿಸಿತು. ಗುವೇರ ತನ್ನ ಹುತಾತ್ಮದ ಪರಿಣಾಮವಾಗಿ ಒಂದು ಐತಿಹಾಸಿಕ ಪಾತ್ರವಾಗಿ ಬಹುಸಂಖ್ಯೆಯ ಜೀವನಚರಿತ್ರೆ, ಪ್ರಬಂಧ, ಸಾಕ್ಷ್ಯಚಿತ್ರ, ಹಾಡುಗಳು, ಮತ್ತು ಚಿತ್ರಗಳಾಗಿ ಇನ್ನೂ ಬದುಕಿದ್ದಾನೆ.
ಟೈಮ್ ನಿಯತಕಾಲಿಕವು ಈತನನ್ನು ೨೦ನೇ ಶತಮಾನದ ೧೦೦ ಅತ್ತ್ಯಂತ ಪ್ರಭಾವಿಶಾಲಿ ವ್ಯಕ್ತಿಗಳಲ್ಲಿ ಒಬ್ಬ ಎಂದು ಪ್ರಕಟಿಸಿತ್ತು. Guerrillero Heroico ಎಂಬ ಈತನ ಚಿತ್ರವನ್ನು ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಛಾಯಾಚಿತ್ರ ಎಂದು ಕರೆಯಲಾಗುತ್ತದೆ.