ಚುಂಗಾ ಪಿಠಾ (ಸುಂಗಾ ಪಿಠಾ) ಬಾಂಗ್ಲಾದೇಶದ ಸಿಲ್ಹೆಟ್ ಪ್ರದೇಶದಲ್ಲಿ ತನ್ನ ಮೂಲವನ್ನು ಹೊಂದಿರುವ ಅಕ್ಕಿಯ ಒಂದು ಸಾಂಪ್ರದಾಯಿಕ ಬಿಲ್ಲೆಖಾದ್ಯ.[1] ಬಿದಿರು ಮತ್ತು ಅಂಟಂಟಾದ ಅನ್ನ ಚುಂಗಾ ಪಿಠಾದ ಮುಖ್ಯ ಘಟಕಾಂಶಗಳಾಗಿದ್ದರೂ, ಇದನ್ನು ಬಿನ್ನಿ ಅಕ್ಕಿ, ಹಾಲು, ಸಕ್ಕರೆ, ಕೊಬ್ಬರಿ ಮತ್ತು ಅಕ್ಕಿ ಪುಡಿಯಿಂದ ಕೂಡ ತಯಾರಿಸಬಹುದು.[2][3] ಅಂಟು ಅನ್ನವನ್ನು ಎಳೆ ಬಿದಿರಿನೊಳಗೆ ತುಂಬಿ ಹೊಗೆಯಲ್ಲಿ ನಿಧಾನವಾಗಿ ಬೇಯಿಸಿ ಈ ಅನನ್ಯ ಖಾದ್ಯವನ್ನು ತಯಾರಿಸಲಾಗುತ್ತದೆ.[4]
ಈ ಸಾಂಪ್ರದಾಯಿಕ ಖಾದ್ಯವು ಅಸ್ಸಾಮಿ ಜನರಲ್ಲಿಯೂ ಪ್ರಸಿದ್ಧವಾಗಿದೆ.[5]
ಸಿಲ್ಹೆಟ್ನ ವಿವಿಧ ಬುಡಕಟ್ಟುಗಳು ಬಿದಿರನ್ನು ಕತ್ತರಿಸಿ ಅದರೊಳಗೆ ನೆನೆಸಿದ ಅಕ್ಕಿಯನ್ನು ಹಾಕುವ ಸಂಪ್ರದಾಯವನ್ನು ಹೊಂದಿದ್ದವು. ಕ್ರಮೇಣವಾಗಿ, ಈ ಆಹಾರವು ಗುಡ್ಡಗಾಡು ಪ್ರದೇಶದಿಂದ ಬಯಲಿನಲ್ಲಿ ವಾಸಿಸುವ ಸಿಲ್ಹೆಟಿಗಳಲ್ಲಿ ಜನಪ್ರಿಯವಾಗಲು ಶುರುವಾಯಿತು. ಕಾಲಕ್ರಮೇಣ, ಈ ಚುಂಗಾ (ಬಿದಿರಿನ ಕೊಳವೆ) ಖಾದ್ಯವು ಚುಂಗಾ ಪಿಠಾ ಎಂದು ಪರಿಚಿತವಾಯಿತು.[6]
ಉಲ್ಲೇಖಗಳು
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.