![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/5c/Chuck_Norris.jpg/640px-Chuck_Norris.jpg&w=640&q=50)
ಚಕ್ ನಾರ್ರಿಸ್
From Wikipedia, the free encyclopedia
ಮಾರ್ಚ್ 10 1940ರಂದು ಜನಿಸಿದ ಕಾರ್ಲೋಸ್ ರೇ "ಚಕ್" ನಾರ್ರಿಸ್ ಅಮೇರಿಕಾದ-ಜೂಡೋ, ಕರಾಟೆ ಮಾದರಿಯ ಕದನಕಲೆ ಅಥವಾ ಕಾದಾಡುವ ಕ್ರೀಡೆಯ ಕಲಾವಿದ, ನಟ ಮತ್ತು ಮಾಧ್ಯಮದ ವ್ಯಕ್ತಿ. ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ನಲ್ಲಿ ಸೇವೆ ಮಾಡಿದ ಬಳಿಕ ನಾರ್ರಿಸ್, ಮಾರ್ಶಿಯಲ್ ಆರ್ಟಿಸ್ಟ್-ಕಾದಾಡುವ ಕ್ರೀಡೆಯ ಕಲಾವಿದ ಎಂದು ಪ್ರಸಿದ್ಧಿ ಪಡೆದನು. ಚುನ್ ಕಕ್ ದೋ ಎಂಬ ಹೆಸರಿನ ಶಾಲೆಯೊಂದನ್ನು ಸ್ಥಾಪಿಸಿದನು. ಆಕ್ಷನ್ ಚಿತ್ರಗಳಲ್ಲಿ ನಟಿಸುತ್ತಿದ್ದ ನಾರ್ರಿಸ್, ವೇ ಆಫ್ ದಿ ಡ್ರಾಗನ್ ಚಿತ್ರದಲ್ಲಿ ಬ್ರೂಸ್ ಲೀ ಜೊತೆಗೆ ನಟಿಸಿದ್ದನು ಮತ್ತು 1980ರಲ್ಲಿ ದಿ ಕ್ಯಾನನ್ ಗ್ರೂಪ್ಸ್ನ ಪ್ರಮುಖ ತಾರೆಯಾಗಿದ್ದನು. ಆನಂತರ 1993 ರಿಂದ 2001ರವರೆಗೂ ದೂರದರ್ಶನ ಧಾರಾವಾಹಿ ವಾಕರ್,ಟೆಕ್ಸಾಸ್ ರೇಂಜರ್ ನಲ್ಲಿ ಪ್ರಮುಖ ಪಾತ್ರ ವಹಿಸಿದನು. ನಾರ್ರಿಸ್ನ "ಟಫ್ ಗಯ್" ಖ್ಯಾತಿಯಿಂದಾಗಿ, ವಿವರಿಸಲಾಗದ ಅಸಂಭವನೀಯ ಶಕ್ತಿಯು ಆತನಿಗೆ ಇದೆ ಎಂದು 2005ರಲ್ಲಿ ಚಕ್ ನಾರ್ರಿಸ್ ಫ್ಯಾಕ್ಟ್ಸ್ ಎಂದು ಇಂಟರ್ನೆಟ್ನಲ್ಲಿ ಬಗೆ ಬಗೆಯಾಗಿ ವಿವರಿಸುವ ಸಂಗತಿ ನಡೆಯಿತು.
ಚಕ್ ನಾರ್ರಿಸ್ | |
---|---|
![]() Norris receiving the Veteran of the Year award by the U.S. Air Force, 2001 | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಕಾರ್ಲೊಸ್ ರೇ ನಾರ್ರಿಸ್ (1940-03-10) ೧೦ ಮಾರ್ಚ್ ೧೯೪೦ (ವಯಸ್ಸು ೮೪) ರ್ಯಾನ್, ಓಕ್ಲಹೋಮಾ, ಅಮೇರಿಕ ದೇಶ |
ಪತಿ/ಪತ್ನಿ | Diane Holechek (1958-1988)
Gena O'Kelly (1998-present) |
Official website |
ನಾರ್ರಿಸ್ ಕಟ್ಟಾ ಕ್ರೈಸ್ತ ಮತದ ಅನುಯಾಯಿ ಮತ್ತು ರಾಜಕೀಯ ಸಂಪ್ರದಾಯವಾದಿ. ಈತ ಕ್ರೈಸ್ತ ಧ್ರರ್ಮದ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾನೆ ಮತ್ತು ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಮತ್ತು ಉತ್ತಮ ಕಾರ್ಯಗಳಿಗೆ ಧನಸಹಾಯ ಮಾಡಿರುತ್ತಾನೆ. 2008ರಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗಿ ಅಧ್ಯಕ್ಷಗಾದಿಗೆ ಸ್ಪರ್ದಿಸಿದ್ದ ಅರ್ಕಾಸಾಸ್ನ ಗವರ್ನರ್ ಮೈಕ್ ಹಕಾಬೀಗಾಗಿ 2007 ಮತ್ತು 2008ರಲ್ಲಿ ಚುನಾವಣೆ ಪ್ರಚಾರದ ಅಭಿಯಾನವನ್ನು ನಾರ್ರಿಸ್ ಮಾಡಿದ್ದನು. ವರ್ಳಡ್ನೆಟ್ಡೈಲಿ[1] ಎನ್ನುವ ವೆಬ್ ಸೈಟ್ಗೆ ಅಂಕಣವೊಂದನ್ನು ಕೂಡ ನಾರ್ರಿಸ್ ಬರೆಯುತ್ತಿದ್ದನು.