![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/7/7f/Gregory_Peck_in_Roman_Holiday_trailer.jpg/640px-Gregory_Peck_in_Roman_Holiday_trailer.jpg&w=640&q=50)
ಗ್ರೆಗೊರಿ ಪೆಕ್
From Wikipedia, the free encyclopedia
'ಗ್ರೆಗೊರಿ ಪೆಕ್' ದಿಟ್ಟ ಮುಂದಾಳತ್ವವನ್ನು ಅತ್ಯಂತ ಸಮರ್ಪಕವಾಗಿ ನಡೆಸಿಕೊಂಡು ಬರುವ ಧೀರ, ಶೂರನಪಾತ್ರ ಮಾಡುತ್ತಾಬಂದ ಹಾಲಿವುಡ್ ಚಲನಚಿತ್ರದ ನಾಯಕ. ವಿಶಾಲ ಭುಜದ ಅತ್ಯಾಕರ್ಷಕ ಮೈಮಾಟಪಡೆದಿರುವ ಕೆಲವೇ ನಟರಲ್ಲಿ ಪ್ರಮುಖರು. ಮುಂದಾಳತ್ವದ ಪಾತ್ರಗಳೆಲ್ಲವನ್ನೂ ಸುಲಭವಾಗಿ ನಿಭಾಯಿಸಿದ್ದರು. 'ಮೆಕೆನ್ನಾಸ್ ಗೋಲ್ದ್', 'ಗನ್ಸ್ ಆಫ್ ನವರೋನ್', ಇತ್ಯಾದಿ ಚಿತ್ರಗಳಲ್ಲಿ ಗ್ರೆಗೊರಿ ಪೆಕ್, ಭರ್ಜರಿ ಅಭಿನಯವನ್ನು ಪ್ರದರ್ಶಿಸಿದ್ದಾರೆ. 'ರೋಮನ್ ಹಾಲಿಡೆ' ಒಂದು ಕಾಮೆಡಿ ಚಿತ್ರ. ಆಡ್ರ್ಯೂ ಹೆಪ್ಬರ್ನ್ ಜೊತೆ ನಟಿಸಿದ್ದಾರೆ. ಪೆಕ್ ಆರಡಿ ಎತ್ತರದ ಅದ್ಭುತವ್ಯಕ್ತಿತ್ವದ ಅಭಿನಯಕಾರರು. ಅಂತಹ ಅಚಲ ನಿರ್ಧಾರದ, ಸ್ಥಿರಮುಖಭಾವವನ್ನು ಹೊಂದಿದ್ದರು. [1]
![Thumb image](http://upload.wikimedia.org/wikipedia/commons/thumb/7/7f/Gregory_Peck_in_Roman_Holiday_trailer.jpg/320px-Gregory_Peck_in_Roman_Holiday_trailer.jpg)