ಗ್ರೀನ್ವಿಚ್ ಸರಾಸರಿ ಕಾಲಮಾನ
From Wikipedia, the free encyclopedia
ಗ್ರೀನ್ವಿಚ್ ಸರಾಸರಿ ಕಾಲಮಾನ (GMT ) ಎಂಬ ಶಬ್ದವು ಮೂಲತ: ಗ್ರೀನ್ವಿಚ್, ಲಂಡನ್ನಲ್ಲಿರುವ ರಾಯಲ್ ವೀಕ್ಷಣಾಲಯದಲ್ಲಿ ಸರಾಸರಿ ಸೌರ ಕಾಲವನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಟೈಮ್ ಜೊನ್(ಕಾಲವಲಯ) ಎಂದು ಪರಿಗಣಿಸಿದಾಗ,ಪರಸ್ಪರ ಹೊಂದಾಣಿಕೆಯ ಸಾರ್ವತ್ರಿಕ ಕಾಲ(UTC)ವನ್ನು ಉಲ್ಲೇಖಿಸುವಾಗ ಬಳಸಿಕೊಳ್ಳಲಾಗುತ್ತದೆ. ವಿಶೇಷವಾಗಿ ಇದನ್ನು ಯುನೈಟೆಡ್ ಕಿಂಗ್ಡಂನೊಂದಿಗೆ ಸಂಪರ್ಕ ಹೊಂದಿರುವ ಘಟಕಗಳಾದ BBC ವರ್ಲ್ಡ್ ಸರ್ವಿಸ್, ದಿ ರಾಯಲ್ ನೇವಿ, ದಿ ಮೆಟ್ ಆಫೀಸ್ ಹಾಗು ಇತರರು ಬಳಸಿಕೊಳ್ಳುತ್ತಾರೆ. ಆದಾಗ್ಯೂ UTC ಕರಾರುವಾಕ್ಕಾಗಿ ಒಂದು ಪರಮಾಣು ಕಾಲಮಾಪಕವಾಗಿದ್ದು ಇದು ಸರಿಸುಮಾರು GMTಗೆ 0.9 ಸೆಕೆಂಡ್ಗಳ ಸಹನೀಯ ವ್ಯತ್ಯಾಸದೊಂದಿಗೆ ಬಹುಸಮೀಪವಿದೆ. ಇದನ್ನು ಯುನಿವೆರ್ಸಲ್ ಟೈಮ್ (ಸಾರ್ವತ್ರಿಕ ಕಾಲ)ನ್ನು ಉಲ್ಲೇಖಿಸಲು ಸಹ ಬಳಸಿಕೊಳ್ಳಲಾಗುತ್ತದೆ. ಈ ಪ್ರಮಾಣಬದ್ದ ಖಗೋಳ ಶಾಸ್ತ್ರದ ಕಲ್ಪನೆಯನ್ನು ಹಲವು ತಾಂತ್ರಿಕ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಜೊತೆಗೆ ಇದು ಜುಲು ಟೈಮ್ ಎಂಬ ನುಡಿಗಟ್ಟಿನಿಂದಲೂ ಉಲ್ಲೇಖಿತವಾಗಿದೆ.UKನಲ್ಲಿ, GMT ಚಳಿಗಾಲದಲ್ಲಿ ಮಾತ್ರ ಅಧಿಕೃತ ಕಾಲಮಾನ. ಬೇಸಿಗೆ ಕಾಲದ ಅವಧಿಯಲ್ಲಿ ಬ್ರಿಟಿಶ್ ಸಮ್ಮರ್ ಟೈಮ್ ಅನ್ನು ಬಳಸಲಾಗುತ್ತದೆ. GMTಯು ಮುಖ್ಯವಾಗಿ ವೆಸ್ಟೆರ್ನ್ ಯುರೋಪಿಯನ್ ಕಾಲಕ್ಕೆ ಸಮಾನವಾಗಿದೆ.[1]ಭೂಮಿಯು ಅದರ ದೀರ್ಘ ಅಂಡಾಕಾರದ ಕಕ್ಷೆಯಲ್ಲಿ ಅಸಮಾನ ವೇಗದ ಪರಿಭ್ರಮಣ ಹಾಗೂ ಅದರ ಕಕ್ಷೆಯಲ್ಲಿ ಬಾಗುವಿಕೆಯಿಂದ ಮಧ್ಯಾಹ್ನ ಗ್ರೀನ್ವಿಚ್ ಸರಾಸರಿ ಕಾಲಮಾನ ಎಂದರೆ ಮಧ್ಯಾಹ್ನದಲ್ಲಿ ಸೂರ್ಯ ಗ್ರೀನ್ವಿಚ್ ಮೆರಿಡಿಯನ್(ಗ್ರೀನ್ವಿಚ್ ಮಧ್ಯಾಹ್ನ ರೇಖೆ)(ಹಾಗೂ ಗ್ರೀನ್ವಿಚ್ನಲ್ಲಿ ಆಕಾಶದಲ್ಲಿ ಅದರ ತುತ್ತ ತುದಿಯನ್ನು ಮುಟ್ಟುವುದು) ದಾಟುವ ಕ್ಷಣ ಆಗಿರಬೇಕಾದ ಅವಶ್ಯಕತೆಯಿಲ್ಲ. ಇದು ಮಧ್ಯಾಹ್ನದ GMTಯಿಂದ 16 ನಿಮಿಷಗಳ ಅಂತರದವರೆಗೂ ಸಂಭವಿಸಬಹುದು. (ಈ ವ್ಯತ್ಯಾಸವನ್ನು ಈಕ್ವೆಶನ್ ಆಫ್ ಟೈಮ್(ಒಂದು ಸ್ಪಷ್ಟ ಸೌರಕಾಲ ಹಾಗು ಸರಾಸರಿ ಸೌರಕಾಲದ ನಡುವಿನ ವ್ಯತ್ಯಾಸ)ಎಂದು ಕರೆಯುತ್ತಾರೆ). ಕಾಲ್ಪನಿಕ ಸರಾಸರಿ ಸೂರ್ಯ ಎಂದರೆ ನೈಜ ಸೂರ್ಯನ ಅಸಮಾನ ಚಲನೆಯ ವಾರ್ಷಿಕ ಸರಾಸರಿಯಾಗಿದ್ದು, ಗ್ರೀನ್ವಿಚ್ ಸರಾಸರಿ ಕಾಲಮಾನದಲ್ಲಿ ಸರಾಸರಿ ಪದವನ್ನು ಸೇರಿಸುವ ಅವಶ್ಯಕತೆ ಕಂಡುಬಂದಿದೆ.ಐತಿಹಾಸಿಕವಾಗಿ GMT ಎಂಬ ಪದವನ್ನು ಎರಡು ವಿಭಿನ್ನ ರೂಢಿಗಳಲ್ಲಿ ಗಂಟೆಗಳನ್ನು ಲೆಕ್ಕ ಹಾಕುವುದಕ್ಕೆ ಬಳಸಿಕೊಳ್ಳಲಾಗುತ್ತದೆ. ಹಳೆಯ ಖಾಗೋಳಿಕ ಸಂಪ್ರದಾಯದಲ್ಲಿ (ಜನವರಿ 1, 1925ಕ್ಕೆ ಪೂರ್ವದಲ್ಲಿ)ಮಧ್ಯಾಹ್ನವನ್ನು ಶೂನ್ಯ ಸಮಯವೆಂದು ಉಲ್ಲೇಖಿಸಲಾಗಿತ್ತು. ಆದರೆ ಅದೇ ಅವಧಿಯಲ್ಲಿ ನಾಗರಿಕ ಸಂಪ್ರದಾಯವು ನಡುರಾತ್ರಿ ಯನ್ನು ಶೂನ್ಯ ಸಮಯವೆಂದು ಸೂಚಿಸುತ್ತಿತ್ತು. ನಂತರದ ಸಂಪ್ರದಾಯವು ನವೀನ ರೂಢಿಯಾಗಿ(ಜನವರಿ 1, 1925ಕ್ಕೆ ಹಾಗು ನಂತರದಲ್ಲಿ) ಖಗೋಳ ಶಾಸ್ತ್ರದಲ್ಲಿ ಹಾಗು ನಾಗರಿಕ ಉದ್ದೇಶಗಳಿಗೆ ಅಸ್ತಿತ್ವಕ್ಕೆ ಬಂದಿತು. ಅತ್ಯಂತ ಸ್ಪಷ್ಟ ಶಬ್ದಗಳಾದ UT ಹಾಗು UTC ಈ ದ್ವಂದ್ವಾರ್ಥತೆಯನ್ನು ಹೊಂದಿರುವುದಿಲ್ಲ. ಇವುಗಳು ಯಾವಾಗಲು ಮದ್ಯರಾತ್ರಿಗೆ ಶೂನ್ಯ ಸಮಯವೆಂದು ಸೂಚಿಸುತ್ತಿದ್ದವು.
ತಿಳಿ ನೀಲಿ | ಪಶ್ಚಿಮ ಯುರೋಪಿನ ಕಾಲಮಾನ (UTC+೦) |
ನೀಲಿ | ಪಶ್ಚಿಮ ಯುರೋಪಿನ ಕಾಲಮಾನ (UTC+೦) ಪಶ್ಚಿಮ ಯುರೋಪಿನ ಬೇಸಿಗೆ ಕಾಲಮಾನ (UTC+೦೧:೦೦) |
ಕಂದು | ಕೇಂದ್ರ ಯುರೋಪಿನ ಕಾಲಮಾನ (UTC+೦೧:೦೦) ಪಶ್ಚಿಮ ಯುರೋಪಿನ ಬೇಸಿಗೆ ಕಾಲಮಾನ (UTC+೦೨:೦೦) |
ಹಳದಿ | ಪೂರ್ವ ಯುರೋಪಿನ ಕಾಲಮಾನ (UTC+೦೨:೦೦) ಪೂರ್ವ ಯುರೋಪಿನ ಬೇಸಿಗೆ ಕಾಲಮಾನ (UTC+೦೩:೦೦) |
ತಿಳಿ ಹಸಿರು | ದೂರದ ಪೂರ್ವ ಯುರೋಪಿನ ಕಾಲಮಾನ/ ಮಾಸ್ಕೋ ಕಾಲಮಾನ (UTC+೦೩:೦೦) |
UTC−01:00 | Cape Verde Time (The islands of Cape Verde are to the west of the African mainland.) | |
UTC±00:00 | Western European Time · Greenwich Mean Time | |
UTC+01:00 | Central European Time · West Africa Time · Western European Summer Time. | |
UTC+02:00 | Central Africa Time · Eastern European Time · South African Standard Time · West Africa Summer Time | |
UTC+03:00 | East Africa Time | |
UTC+04:00 | Mauritius Time · Seychelles Time |